ನವದೆಹಲಿ(ಸೆ.27): ಭಾರತ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಕರ್ನಾಟಕದ ಕಲ್ಪನಾ ವೆಂಕಟಾಚಾರ್ ನೇಮಕಗೊಂಡಿದ್ದಾರೆ. ಶನಿವಾರ ಬಿಸಿಸಿಐ ನೂತನ ಆಯ್ಕೆ ಸಮಿತಿಯನ್ನು ಪ್ರಕಟಿಸಿತು.

ಐವರು ಸಮಿತಿಗೆ ಭಾರತದ ಮಾಜಿ ಕ್ರಿಕೆಟ್ ಆಟಗಾರ್ತಿ ನೀತು ಡೇವಿಡ್ ಮುಖ್ಯಸ್ಥೆಯಾಗಿದ್ದಾರೆ. ನೀತು ಭಾರತ ಪರ 10 ಟೆಸ್ಟ್ ಹಾಗೂ 97 ಏಕದಿನ ಪಂದ್ಯಗಳನ್ನು ಆಡಿದ್ದರು.

ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಉಳಿಸಲು ಶಕ್ತಿ ಮೀರಿ ಯತ್ನಿಸಿದ್ದ ಬ್ರೆಟ್ ಲೀ..!

ಉಳಿದಂತೆ ಆರತಿ ವೈದ್ಯ, ರೇಣು ಮಾರ್ಗರೇಟ್, ಮಿಥು ಮುಖರ್ಜಿ ಇದ್ದಾರೆ. 1986 ರಿಂದ 1991ರವರೆಗೆ ಕಲ್ಪನಾ ಟೀಂ ಇಂಡಿಯಾ ಪರ 3 ಟೆಸ್ಟ್ ಹಾಗೂ 8 ಏಕದಿನ ಪಂದ್ಯಗಳನ್ನು ಆಡಿದ್ದಾರೆ.