Asianet Suvarna News Asianet Suvarna News

ಸದ್ಯದಲ್ಲೇ ಮುರಳೀಧರನ್‌ ಜೀವನದ ಸಿನಿಮಾ ತೆರೆಗೆ; ಬಯೋಪಿಕ್‌ ಪೋಸ್ಟರ್‌ ಔಟ್

ಸ್ಪಿನ್ ದಿಗ್ಗಜ ಮುತ್ತಯ್ಯ ಮುರುಳೀಧರನ್‌ ಜೀವನಾಧಾರಿತ ಚಿತ್ರ ತೆರೆಗೆ
ಮುತ್ತಯ್ಯ ಹುಟ್ಟುಹಬ್ಬದ ದಿನದಂತೆ ಸಿನಿಮಾದ ಪೋಸ್ಟರ್ ರಿಲೀಸ್
ಮಧುರ್‌ ಮಿತ್ತಲ್‌ ಅವರು ಮುರ​ಳೀ​ಧ​ರನ್‌ ಪಾತ್ರ ನಿರ್ವ​ಹಿ​ಸಿ​ದ್ದಾರೆ

Muttiah Muralitharan shares first look poster from his biopic 800 kvn
Author
First Published Apr 18, 2023, 10:23 AM IST

ಚೆನ್ನೈ(ಏ.18): ಸಾರ್ವ​ಕಾ​ಲಿಕ ಶ್ರೇಷ್ಠ ಸ್ಪಿನ್ನರ್‌, ಶ್ರೀಲಂಕಾದ ಮುತ್ತಯ್ಯ ಮುರ​ಳೀ​ಧ​ರನ್‌ ಅವರ ಜೀವಾ​ನ​ಧಾ​ರಿತ ‘800’ ತಮಿಳು ಚಿತ್ರ ಘೋಷಣೆಯಾಗಿದ್ದು, ಅವರ ಹುಟ್ಟಿದ ದಿನ​ವಾದ ಏ.17ರಂದೇ ಚಿತ್ರದ ಫಸ್ಟ್‌ ಲುಕ್‌ ಬಿಡು​ಗ​ಡೆ​ಯಾ​ಗಿದೆ. ‘800’ ಎಂಬು​ದು ಮುರ​ಳೀ​ಧ​ರನ್‌ ಟೆಸ್ಟ್‌ ಕ್ರಿಕೆ​ಟ್‌ನಲ್ಲಿ ಪಡೆದ ವಿಕೆ​ಟ್‌​ಗಳ ಸಂಖ್ಯೆ​ಯಾ​ಗಿದ್ದು, ಟೆಸ್ಟ್‌ ಇತಿ​ಹಾ​ಸ​ದಲ್ಲೇ ಗರಿಷ್ಠ ವಿಕೆಟ್‌ ಸರ​ದಾರ ಎನಿ​ಸಿ​ಕೊಂಡಿ​ದ್ದಾರೆ. ಚಿತ್ರವನ್ನು ಎಂ.ಎ​ಸ್‌.​ಶ್ರೀ​ಪತಿ ನಿರ್ದೇ​ಶಿ​ಸುತ್ತಿದ್ದು, ಮಧುರ್‌ ಮಿತ್ತಲ್‌ ಅವರು ಮುರ​ಳೀ​ಧ​ರನ್‌ ಪಾತ್ರ ನಿರ್ವ​ಹಿ​ಸಿ​ದ್ದಾರೆ. ಚೆನ್ನೈ, ಶ್ರೀಲಂಕಾ, ಇಂಗ್ಲೆಂಡ್‌, ಆಸ್ಪ್ರೇ​ಲಿ​ಯಾ​ದಲ್ಲಿ ಈಗಾ​ಗಲೇ ಚಿತ್ರೀ​ಕ​ರಣ ಮುಗಿ​ದಿದ್ದು ತಮಿಳು, ಹಿಂದಿ, ತೆಲುಗು ಹಾಗೂ ಇಂಗ್ಲಿಷ್‌​ನಲ್ಲಿ ಚಿತ್ರ ಬಿಡು​ಗ​ಡೆ​ಗೊ​ಳ್ಳ​ಲಿ​ದೆ.

ನಿರಂತರ ಪರಿಶ್ರಮ ಅಗತ್ಯ: ಪುತ್ರನಿಗೆ ಸಚಿನ್‌ ಕಿವಿಮಾತು

ಮುಂಬೈ: ಪುತ್ರ ಅರ್ಜುನ್‌ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಸಚಿನ್‌ ತೆಂಡುಲ್ಕರ್‌, ಟ್ವೀಟರ್‌ನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ‘ಅರ್ಜುನ್‌ ಕ್ರಿಕೆಟಿಗನಾಗಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದೀಯ. ಒಬ್ಬ ತಂದೆಯಾಗಿ, ನಿನ್ನನ್ನ ಪ್ರೀತಿಸುವ ಹಾಗೂ ಆಟದ ಬಗ್ಗೆ ಅಪಾರ ಪ್ರೀತಿ ಉಳ್ಳವನಾಗಿ, ನೀನು ಆಟವನ್ನು ಗೌರವಿಸುತ್ತೀಯ ಎನ್ನುವ ನಂಬಿಕೆ ನನಗಿದೆ. ನೀನು ಬಹಳ ಕಷ್ಟಪಟ್ಟು ಈ ಹಂತಕ್ಕೆ ತಲುಪಿದ್ದೀಯ. ಯಶಸ್ಸು ಕಾಣಲು ನಿರಂತರ ಪರಿಶ್ರಮ ಅಗತ್ಯ’ ಎಂದು ಕಿವಿ ಮಾತು ಹೇಳಿದ್ದಾರೆ.

ಚೆನ್ನೈನಲ್ಲಿ ಹಾಕಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ

ಚೆನ್ನೈ: ಮೊದಲ ಬಾರಿಗೆ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿ ಆತಿಥ್ಯ ಭಾರ​ತಕ್ಕೆ ಲಭಿ​ಸಿದ್ದು, ಆಗಸ್ಟ್‌ 3ರಿಂದ 12ರ ವರೆಗೂ ಚೆನ್ನೈನಲ್ಲಿ ಪಂದ್ಯಾವಳಿ ನಡೆ​ಯ​ಲಿದೆ. ಇದ​ರೊಂದಿಗೆ ಚೆನ್ನೈಗೆ 16 ವರ್ಷ​ಗಳ ಬಳಿಕ ಅಂತಾ​ರಾ​ಷ್ಟ್ರೀಯ ಹಾಕಿ ಪಂದ್ಯದ ಅತಿಥ್ಯ ಸಿಕ್ಕಂತಾ​ಗಿದೆ. ಕೊನೆ ಬಾರಿ 2007ರಲ್ಲಿ ಚೆನ್ನೈ​ನಲ್ಲಿ ಏಷ್ಯಾ​ಕಪ್‌ ನಡೆ​ದಿ​ತ್ತು. 

IPL 2023 ಮುಂಬೈ ಇಂಡಿಯನ್ಸ್‌ ತಂಡಕ್ಕಿಂದು ಸನ್‌ರೈಸರ್ಸ್‌ ಹೈದರಾಬಾದ್‌ ಸವಾಲು..!

7ನೇ ಆವೃತ್ತಿ ಟೂರ್ನಿ​ಯಲ್ಲಿ 3 ಬಾರಿ ಚಾಂಪಿ​ಯನ್‌ ಭಾರತದ ಜೊತೆ ದ.ಕೊ​ರಿಯಾ, ಮಲೇಷ್ಯಾ, ಜಪಾನ್‌ ಪಾಲ್ಗೊ​ಳ್ಳ​ಲಿದ್ದು, ಚೀನಾ ಮತ್ತು 3 ಬಾರಿ ಪ್ರಶಸ್ತಿ ವಿಜೇತ ಪಾಕಿ​ಸ್ತಾನ ಆಡುವುದು ಇನ್ನಷ್ಟೇ ಖಚಿ​ತ​ಗೊ​ಳ್ಳ​ಬೇ​ಕಿದೆ. ಈ ಟೂರ್ನಿ ಏಷ್ಯನ್‌ ಗೇಮ್ಸ್‌ನ ಸಿದ್ಧತೆಗೆ ಬಳಸಿಕೊಳ್ಳಲು ತಂಡ​ಗ​ಳಿ​ಗೆ ಅನುಕೂಲವಾಗ​ಲಿದೆ.

ವಿಶ್ವ ಬಾಕ್ಸಿಂಗ್‌: ತಾಷ್ಕೆಂಟ್‌ ತಲುಪಿದ ಭಾರತ ತಂಡ

ನವ​ದೆ​ಹ​ಲಿ: ಏ.30ರಿಂದ ಮೇ 14ರ ವರೆಗೂ ನಡೆಯಲಿರುವ ಪುರುಷರ ಬಾಕ್ಸಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊ​ಳ್ಳಲು 19 ಸದಸ್ಯರ ಭಾರತ ತಂಡ ಸೋಮ​ವಾರ ಉಜ್ಬೇಕಿಸ್ತಾನದ ತಾಷ್ಕೆಂಟ್‌ಗೆ ತೆರ​ಳಿತು. 6 ಬಾರಿ ಏಷ್ಯನ್‌ ಚಾಂಪಿ​ಯ​ನ್‌ ಶಿವ ಥಾಪ, ದೀಪಕ್‌ ಭೋರಿಯಾ ಅವ​ರ​ನ್ನೊ​ಗೊಂಡ ತಂಡ ಕೂಟಕ್ಕೂ ಮುನ್ನ ನಡೆ​ಯ​ಲಿ​ರುವ ತರ​ಬೇತಿ ಶಿಬಿ​ರ​ದಲ್ಲಿ ಪಾಲ್ಗೊ​ಳ್ಳ​ಲಿದೆ. ಈ ಪೈಕಿ 13 ಮಂದಿ ಮಾತ್ರ ಕೂಟ​ದಲ್ಲಿ ಸ್ಪರ್ಧಿ​ಸ​ಲಿದ್ದು, 6 ಮಂದಿ ತರ​ಬೇತಿ ಶಿಬಿ​ರಕ್ಕೆ ಹಾಜ​ರಾ​ಗ​ಲಿ​ದ್ದಾರೆ. ಕೂಟ​ದಲ್ಲಿ ಒಟ್ಟಾರೆ 104 ದೇಶ​ಗಳ 640 ಬಾಕ್ಸರ್‌ಗಳು ಪಾಲ್ಗೊ​ಳ್ಳ​ಲಿ​ದ್ದಾರೆ.

Follow Us:
Download App:
  • android
  • ios