ಪುರುಷರ ಎಮರ್ಜಿಂಗ್ ಏಷ್ಯಾ ಟಿ20 ಕ್ರಿಕೆಟ್ ಟೂರ್ನಿಗೆ ಭಾರತ 'ಎ' ತಂಡ ಪ್ರಕಟಗೊಂಡಿದ್ದು ಮುಂಬೈ ಇಂಡಿಯನ್ಸ್ ತಾರೆ ತಿಲಕ್ ವರ್ಮಾಗೆ ನಾಯಕ ಪಟ್ಟ ಕಟ್ಟಲಾಗಿದೆ

ನವದೆಹಲಿ: ಅಕ್ಟೋಬರ್ 18ರಿಂದ ಒಮಾನ್ ದೇಶದ ಮಸ್ಕತ್‌ನಲ್ಲಿ ಆರಂಭಗೊಳ್ಳಲಿರುವ ಪುರುಷರ ಎಮರ್ಜಿಂಗ್ ಏಷ್ಯಾ ಟಿ20 ಕ್ರಿಕೆಟ್ ಟೂರ್ನಿಗೆ ಭಾರತ 'ಎ' ತಂಡ ಪ್ರಕಟಗೊಂಡಿದ್ದು, ಯುವ ಬ್ಯಾಟರ್ ತಿಲಕ್ ವರ್ಮಾ ನಾಯಕರಾಗಿ ನೇಮಕ ಗೊಂಡಿದ್ದಾರೆ. ಇನ್ನು ಎಡಗೈ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಉಪನಾಯಕರಾಗಿ ನೇಮಕವಾಗಿದ್ದಾರೆ.

ಐಪಿಎಲ್‌ನಲ್ಲಿ ಮಿಂಚಿದ್ದ ಹಲವು ಆಟಗಾರರು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ಟೂರ್ನಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಈ ಹಿಂದಿನ 5 ಆವೃತ್ತಿಗಳಲ್ಲಿ 50 ಓವರ್ ಪಂದ್ಯಗಳು ನಡೆದಿದ್ದವು. ಈ ಬಾರಿ ಭಾರತ 'ಬಿ' ಗುಂಪಿನಲ್ಲಿದ್ದು, ಅ.19ರಂದು ಪಾಕಿಸ್ತಾನ ವಿರುದ್ದ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

ತಂಡ: ತಿಲಕ್ ವರ್ಮಾ(ನಾಯಕ), ಅಭಿಷೇಕ್ ಶರ್ಮಾ, ಪ್ರಬ್‌ಸಿಮ್ರನ್ ಸಿಂಗ್, ನಿಶಾಂತ್ ಸಿಂಧು, ರಮನ್‌ದೀಪ್ ಸಿಂಗ್, ನೇಹಲ್ ವಧೇರಾ, ಆಯುಶ್ ಬದೋನಿ, ಅನುಜ್ ರಾವತ್, ಸಾಯಿ ಕಿಶೋರ್, ಹೃತಿಕ್ ಶೋಕೀನ್, ರಾಹುಲ್ ಚಹರ್, ವೈಭವ್ ಅರೋರಾ, ಅನುಲ್ ಕಂಬೋಜ್‌, ಆಖಿಬ್ ಖಾನ್, ರಾಸಿಕ್ ಸಲಾಂ.

ಹಾಲಿ ಚಾಂಪಿಯನ್ ಮುಂಬೈಗೆ ಸೋಲಿನ ಆಘಾತ

ವಡೋದರಾ: ಹಾಲಿ ರಣಜಿ ಹಾಗೂ ಇರಾನಿ ಕಪ್ ಚಾಂಪಿಯನ್ ಮುಂಬೈ ತಂಡ ಈ ಬಾರಿ ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಸೋಲಿನ ಆರಂಭ ಪಡೆದಿದೆ. ಸೋಮವಾರಮುಕ್ತಾಯ ಗೊಂಡ ಬರೋಡಾ ವಿರುದ್ಧ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನಾಯಕತ್ವದ ಮುಂಬೈ 6 ವಿಕೆಟ್ ಸೋಲನುಭವಿಸಿತು. 

ನಾವು ದಿನಕ್ಕೆ 500 ರನ್ ಗಳಿಸಲೂ ಸಿದ್ದ: ಗೌತಮ್ ಗಂಭೀರ್ ದಿಟ್ಟ ನುಡಿ

ಗೆಲುವಿಗೆ 262 ರನ್ ಗುರಿ ಪಡೆದಿದ್ದ ಮುಂಬೈ ಕೊನೆ ದಿನ 48.2 ಓವರ್‌ಗಳಲ್ಲಿ 177 ರನ್‌ಗೆ ಆಲೌಟಾಯಿತು.ಎಡಗೈ ಸ್ಪಿನ್ನರ್‌ ಭಾರ್ಗವ್ ಭಟ್ 6 ವಿಕೆಟ್ ಕಿತ್ತರು. ಇದಕ್ಕೂ ಮುನ್ನ ಬರೋಡಾ ಮೊದಲ ಇನ್ನಿಂಗ್ಸ್‌ನಲ್ಲಿ 290 ರನ್ ಗಳಿಸಿದ್ದರೆ ಮುಂಬೈ 214ಕ್ಕೆ ಆಲೌಟಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಬರೋಡಾ 185 ರನ್ ಗಳಿಸಿತ್ತು.

ಗಾಯ: ಭಾರತ ವಿರುದ್ಧ ಟೆಸ್ಟ್‌ಗೆ ಗ್ರೀನ್ ಅಲಭ್ಯ

ಮೆಲ್ಬರ್ನ್: ಬೆನ್ನಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆಸ್ಟ್ರೇಲಿಯಾದ ತಾರಾ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಭಾರತ ವಿರುದ್ದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. 25 ವರ್ಷದ ಗ್ರೀನ್ ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸದ ವೇಳೆ ಗಾಯಗೊಂಡಿದ್ದರು. ಅವರು ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಲು 6 ತಿಂಗಳು ಅಗತ್ಯವಿದೆ. ಹೀಗಾಗಿ ಅವರು ಭಾರತ ವಿರುದ್ಧ ಸರಣಿಗೆ ಗೈರಾಗಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. 

ಕಿವೀಸ್ ಎದುರು ಹೀನಾಯ ಸೋಲು ಕಂಡ ಪಾಕ್; ಭಾರತ ವನಿತೆಯರ ಸೆಮಿಫೈನಲ್‌ ಕನಸು ಭಗ್ನ!

ಅವರು 2025ರ ಚಾಂಪಿಯನ್ಸ್‌ ಟ್ರೋಫಿ, ಐಪಿಎಲ್‌ಗೂ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ನ.22ರಿಂದ ಆರಂಭವಾಗಲಿದೆ