ವಿಜಯ್ ಹಜಾರೆ ಟ್ರೋಫಿ: ಮುಂಬೈ ಸಂಭಾವ್ಯರ ಪಟ್ಟಿಯಲ್ಲಿ 104 ಕ್ರಿಕೆಟಿಗರು!
ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಗೆ ಮುಂಬೈ ಕ್ರಿಕೆಟ್ ಸಂಸ್ಥೆ 104 ಆಟಗಾರರನ್ನೊಳಗೊಂಡ ಸಂಭಾವ್ಯ ಮುಂಬೈ ತಂಡವನ್ನು ಪ್ರಕಟಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಫೆ.01): ವಿಜಯ್ ಹಜಾರೆ ಏಕದಿನ ಟೂರ್ನಿಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) 104 ಆಟಗಾರರ ಸಂಭವನೀಯ ಪಟ್ಟಿಬಿಡುಗಡೆ ಮಾಡಿದೆ.
ಸಾಮಾನ್ಯವಾಗಿ ಯಾವುದೇ ತಂಡವಾದರೂ 30 ಆಟಗಾರರ ಪಟ್ಟಿ ಬಿಡುಗಡೆ ಮಾಡುತ್ತದೆ. ಆದರೆ 100ಕ್ಕೂ ಹೆಚ್ಚು ಆಟಗಾರರನ್ನು ಆಯ್ಕೆ ಟ್ರಯಲ್ಸ್‌ಗೆ ಕರೆದು ಎಂಸಿಎ ಭಾರೀ ಅಚ್ಚರಿ ಮೂಡಿಸಿದೆ. ಸೋಮವಾರದಿಂದ ನಡೆಯಲಿರುವ ಶಿಬಿರದಲ್ಲಿ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್, ಶ್ರೇಯಸ್ ಅಯ್ಯರ್, ಪೃಥ್ವಿ ಶಾ ಸೇರಿ ತಾರಾ ಆಟಗಾರರ ದಂಡೇ ಪಾಲ್ಗೊಳ್ಳಲಿದೆ.
ವಿಜಯ್ ಹಜಾರೆ: ಇಂದು ಕರ್ನಾಟಕ ತಂಡದ ಆಯ್ಕೆ
ಬೆಂಗಳೂರು: ಬಿಸಿಸಿಐ ವಿಜಯ್ ಹಜಾರೆ ಏಕದಿನ ಟೂರ್ನಿಯನ್ನು ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.
ಮುಷ್ತಾಕ್ ಅಲಿ ಟಿ20: ಬರೋಡಾ ಮಣಿಸಿ ತಮಿಳುನಾಡು ಚಾಂಪಿಯನ್
ಇದೇ ವೇಳೆ ಜ.31 ರಿಂದ ನಡೆಸಲು ನಿರ್ಧರಿಸಲಾಗಿದ್ದ ಶಫಿ ದರಾಶ ಕ್ರಿಕೆಟ್ ಟೂರ್ನಿಯನ್ನು ರದ್ದುಗೊಳಿಸಲಾಗಿದೆ. ವಿಜಯ್ ಹಜಾರೆ ಟೂರ್ನಿ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳು ಒಂದು ವಾರ ಬಯೋ-ಬಬಲ್‌ನಲ್ಲಿ ಇರಲಿರುವ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ವಿಜಯ್ ಹಜಾರೆ ಮುಕ್ತಾಯದವರೆಗೂ ರಾಜ್ಯ ತಂಡದ ಹಿರಿಯ ಆಟಗಾರರಿಗೆ ಯಾವುದೇ ಟೂರ್ನಿ ನಡೆಸಲಾಗುವುದಿಲ್ಲ ಎಂದು ಹೇಳಿದ್ದಾರೆ.