ಮಿಥಾಲಿ ರಾಜ್‌ ಬಾರಿಸಿದ ಅಜೇಯ ಅರ್ಧಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ದ ಭಾರತ ಸಾಧಾರಣ ಮೊತ್ತ ಕಲೆಹಾಕಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಲಖನೌ(ಮಾ.17): ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್(79*) ಏಕಾಂಗಿ ಹೋರಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ದದ 5ನೇ ಏಕದಿನ ಪಂದ್ಯದಲ್ಲಿ ಭಾರತ 9 ವಿಕೆಟ್‌ ಕಳೆದುಕೊಂಡು ಕೇವಲ 188 ರನ್‌ ಬಾರಿಸಿದ್ದು, ಹರಿಣಗಳಿಗೆ ಸಾಧಾರಣ ಗುರಿ ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ಉತ್ತಮ ಆರಂಭವನ್ನೇ ಪಡೆಯಿತು. ಆರಂಭಿಕ ಬ್ಯಾಟ್‌ವುಮೆನ್‌ಗಳಾದ ಪ್ರಿಯಾ ಪೂನಿಯಾ ಹಾಗೂ ಸ್ಮೃತಿ ಮಂಧನಾ ತಲಾ 18 ರನ್‌ ಬಾರಿಸಿದರು. ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದ ಪೂನಂ ರಾವತ್‌ ಬ್ಯಾಟಿಂಗ್ 10 ರನ್‌ಗಳಿಗೆ ಸೀಮಿತವಾಯಿತು. ಉತ್ತಮವಾಗಿ ಆಡುತ್ತಿದ್ದ ಹರ್ಮನ್‌ಪ್ರೀತ್ ಕೌರ್ 30 ರನ್ ಬಾರಿಸಿ ಗಾಯಗೊಂಡು ರಿಟೈರ್ಡ್‌ ಹರ್ಟ್ ಆದರು.

Scroll to load tweet…

ಮಹಿಳಾ ಕ್ರಿಕೆಟ್: ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ

ಮಿಥಾಲಿ ಏಕಾಂಗಿ ಹೋರಾಟ: ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಬರೋಬ್ಬರಿ 104 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ಅಜೇಯ 79 ರನ್‌ ಬಾರಿಸುವ ಮೂಲಕ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. 

ಮಧ್ಯಮ ಕ್ರಮಾಂಕ ದಿಢೀರ್ ಕುಸಿತ: ಹರ್ಮನ್‌ಪ್ರೀತ್‌ ಕೌರ್ ಪೆವಿಲಿಯನ್‌ ಸೇರುತ್ತಿದ್ದಂತೆ ಭಾರತ ತಂಡ ನಾಟಕೀಯ ಕುಸಿತ ಕಂಡಿತು. ಅಗ್ರಕ್ರಮಾಂಕದ ಐವರು ಆಟಗಾರ್ತಿಯರು ಎರಡಂಕಿ ಮೊತ್ತ ದಾಖಲಿಸಿದ್ದು ಬಿಟ್ಟರೆ, ಅದಾದ ಬಳಿಕ ಕ್ರೀಸ್‌ಗಿಳಿದ ಯಾವೊಬ್ಬ ಆಟಗಾರ್ತಿಯೂ ಎರಡಂಕಿ ಮೊತ್ತ ಕಲೆಹಾಕಲು ಯಶಸ್ವಿಯಾಗಲಿಲ್ಲ. 

ಸಂಕ್ಷಿಪ್ತ ಸ್ಕೋರ್
ಭಾರತ: 188/9
ಮಿಥಾಲಿ ರಾಜ್‌: 79
ನದೀನೆ ಡಿ ಕ್ಲಾರ್ಕ್‌: 35/5