Asianet Suvarna News Asianet Suvarna News

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ ನಾಯಕರಾಗಿದ್ದು ಯಾರಿಗೂ ಇಷ್ಟವಿಲ್ವಾ..?

IPLನಲ್ಲಿ ಹಾರ್ದಿಕ್ ಪಾಂಡ್ಯಗೆ  ಮುಂಬೈ ಇಂಡಿಯನ್ಸ್ ತಂಡದ ನಾಯಕನ ಪಟ್ಟ ಕಟ್ಟಲಾಗಿದೆ. ಇನ್ಮೇಲೆ ಮುಂಬೈ ತಂಡದಲ್ಲಿ ಹಾರ್ದಿಕ್ ಯುಗ ಆರಂಭ ವಾಗಲಿದೆ. ಆದ್ರೆ, ಈ ನಡುವೆ ಮತ್ತೊಂದೆಡೆ ರೋಹಿತ್ ಶರ್ಮಾರನ್ನ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದನ್ನು ರೋಹಿತ್ ಅಭಿಮಾನಿಗಳಿಂದ ಸಹಿಸಲು ಆಗುತ್ತಿಲ್ಲ.

Massive unrest broken hearts in Mumbai Indians camp after Hardik Pandya replace Rohit Sharma as captain kvn
Author
First Published Dec 18, 2023, 4:15 PM IST

ಬೆಂಗಳೂರು(ಡಿ.18): ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಸ್ಥಾನದಿಂದ ರೋಹಿತ್ ಶರ್ಮಾರನ್ನ ಕೆಳಗಿಳಿಸಲಾಗಿದೆ. ಆದ್ರೆ, ಹಿಟ್‌ಮ್ಯಾನ್‌ರನ್ನ ಕೆಳಗಿಳಿಸಿದ್ದು ದಿನಕ್ಕೊಂದು ಹೊಸ ಸ್ವರೂಪ ಪಡೆಯುತ್ತಿದೆ. ರೋಹಿತ್ ಬದಲು ಹಾರ್ದಿಕ್‌ಗೆ ನಾಯಕನ ಪಟ್ಟ ಕಟ್ಟಿದ್ದಕ್ಕೆ ಮುಂಬೈ ತಂಡದ ಸೀನಿಯರ್ ಆಟಗಾರ ಅಸಮಾಧಾನ ಹೊರಹಾಕಿದ್ದಾನೆ. ಯಾರದು ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ.

ಸೂರ್ಯನ ಕನಸು ನೂಚ್ಚು ನೂರು ಮಾಡಿದ್ರಾ ಪಾಂಡ್ಯ..!

IPLನಲ್ಲಿ ಹಾರ್ದಿಕ್ ಪಾಂಡ್ಯಗೆ  ಮುಂಬೈ ಇಂಡಿಯನ್ಸ್ ತಂಡದ ನಾಯಕನ ಪಟ್ಟ ಕಟ್ಟಲಾಗಿದೆ. ಇನ್ಮೇಲೆ ಮುಂಬೈ ತಂಡದಲ್ಲಿ ಹಾರ್ದಿಕ್ ಯುಗ ಆರಂಭ ವಾಗಲಿದೆ. ಆದ್ರೆ, ಈ ನಡುವೆ ಮತ್ತೊಂದೆಡೆ ರೋಹಿತ್ ಶರ್ಮಾರನ್ನ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದನ್ನು ರೋಹಿತ್ ಅಭಿಮಾನಿಗಳಿಂದ ಸಹಿಸಲು ಆಗುತ್ತಿಲ್ಲ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿರುದ್ಧ ಹಿಟ್‌ಮ್ಯಾನ್ ಫ್ಯಾನ್ಸ್  ತಿರುಗಿ ಬಿದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮುಂಬೈ ಇಂಡಿಯನ್ಸ್‌ನ ಅನ್‌ಫಾಲೋ ಮಾಡ್ತಿದ್ದಾರೆ. 

ಮೂವರು ದಿಗ್ಗಜರಿಗೆ ಕೊನೆಯ ಐಪಿಎಲ್..! ಟ್ರೋಫಿಯೊಂದಿಗೆ ವಿದಾಯ ಹೇಳ್ತಾರಾ ತ್ರಿಮೂರ್ತಿಗಳು..?

ಅಭಿಮಾನಿಗಳು ಮಾತ್ರ ಅಲ್ಲ. ಮುಂಬೈ ತಂಡದ ಸ್ಟಾರ್ ಆಟಗಾರ ಸೂರ್ಯಕುಮಾರ್ ಯಾದವ್‌ಗೂ ಇಷ್ಟ ಇಲ್ಲ ಎನ್ನಲಾಗಿದೆ. ಇನ್ಸ್ಟಾಗ್ರಾಮ್ ಸ್ಟೋರಿ ಯಲ್ಲಿ ಸೂರ್ಯ ಕುಮಾರ್ ಪೋಸ್ಟ್ ಮಾಡಿದ್ದ ಹಾರ್ಟ್ ಬ್ರೇಕ್ ಎಮೋಜಿಯೇ ಈ ಅನುಮಾನಕ್ಕೆ ಕಾರಣವಾಗಿದೆ. 

SKY ನಾಯಕನ ಪಟ್ಟ ಕಸಿದುಕೊಂಡ್ರಾ ಹಾರ್ದಿಕ್ ಪಾಂಡ್ಯ..?

ಯೆಸ್, ಸೂರ್ಯಕುಮಾರ್ ಮುಂಬೈ ಇಂಡಿಯನ್ಸ್ ನಾಯನಕ ಸ್ಥಾನದಿಂದ ಮೇಲೆ ಕಣ್ಣಿಟ್ಟಿದ್ರು. ರೋಹಿತ್  ನಂತರ ತಂಡದ ನಾಯಕನಾಗೋ ಕನಸು ಕಂಡಿದ್ರು. ಅದ್ರೆ. ಫ್ರಾಂಚೈಸಿ ಹಾರ್ದಿಕ್ಗೆ ನಾಯಕತ್ವ ನೀಡಿದೆ. ಇದೇ ಕಾರಣಕ್ಕೆ ಸೂರ್ಯ ನೊಂದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. 

ಬುಮ್ರಾ ಕನಸಿಗೂ ಕೊಳ್ಳಿ ಇಟ್ಟ ಆಲ್ರೌಂಡರ್..?

ಸೂರ್ಯಕುಮಾರ್ ಯಾದವ್ಗೆ ಅಷ್ಟೇ ಅಲ್ಲ. ಮುಂಬೈ ಇಂಡಿಯನ್ಸ್ ತಂಡದ ಮತ್ತೊಬ್ಬ  ಸ್ಟಾರ್ ಪ್ಲೇಯರ್ ಜಸ್ಪ್ರೀತ್ ಬುಮ್ರಾಗೂ, ಹಾರ್ದಿಕ್ಗೆ ಕ್ಯಾಪ್ಟೆನ್ಸಿ ನೀಡಿರೋದು ಇಷ್ಟವಿಲ್ಲ. ಹಾರ್ದಿಕ್ ಮುಂಬೈಗೆ ಕಮ್ಬ್ಯಾಕ್ ಮಾಡಿದ ದಿನವೇ ಬುಮ್ರಾ, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ರು. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವೊಮ್ಮೆ ಮೌನವೂ ಅತ್ಯುತ್ತಮ ಉತ್ತರ ಅಂತ ಬರೆದುಕೊಂಡಿದ್ರು. ಜೊತೆಗೆ ಆ ದಿನವೇ  ಮುಂಬೈ ಇಂಡಿಯನ್ಸ್ ಎಕ್ಸ್, ಇನ್‌ಸ್ಟಾಗ್ರಾಮ್ ಖಾತೆಯನ್ನು ಅನ್ಫಾಲೋ ಮಾಡಿದ್ರು. 

IPL 2024 ಈ ದಿಗ್ಗಜ ಕ್ರಿಕೆಟಿಗರ ಪಾಲಿಗೆ ಕೊನೆಯ ಐಪಿಎಲ್‌..? ಈ ಪಟ್ಟಿಯಲ್ಲಿವೆ ಇಂಟ್ರೆಸ್ಟಿಂಗ್ ಹೆಸರುಗಳು

ಹಾರ್ದಿಕ್ ನಾಯಕರಾಗಿದ್ದು ಯಾರಿಗೂ ಇಷ್ಟವಿಲ್ವಾ..? 

ಯೆಸ್, ಹಾರ್ದಿಕ್ ಪಾಂಡ್ಯಗಾಗಿ ಮುಂಬೈ ಇಂಡಿಯನ್ಸ್ ರೋಹಿತ್, ಬುಮ್ರಾ, ಸೂರ್ಯರನ್ನ ಕಡೆಗಣಿಸ್ತಾ..? ಇವರ ಮಾತಿಗೆ ಮನ್ನಣೆ ನೀಡದೆ ಪಾಂಡ್ಯಗೆ ಮಣೆ ಹಾಕ್ತಾ..? ಆ ಮೂಲಕ ಒಬ್ಬನಿಗಾಗಿ  ಈ ಮೂವರನ್ನ ಎದುರು ಹಾಕಿಕೊಳ್ತಾ ಅನ್ನೋ ಅನುಮಾನಗಳು ಮೂಡಿವೆ. 

ಡೆಲ್ಲಿ ಕ್ಯಾಪಿಟಲ್ಸ್ ಸೈನ್ಯ ಸೇರ್ತಾರಾ ಹಿಟ್‌ಮ್ಯಾನ್..? 

ಹೌದು, ತಮ್ಮನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ರೋಹಿತ್ ಶರ್ಮಾ ಮುನಿಸಿಕೊಂಡಿದ್ದಾರೆ. ರೋಹಿತ್ರ ಈ ಅಸಮಾಧಾನದ ಲಾಭ ಪಡೆದು, ಅವರನ್ನ ತಮ್ಮ ತಂಡಕ್ಕೆ ಸೆಳೆಯಲು ಕೆಲ ಫ್ರಾಂಂಚೈಸಿಗಳು ರೆಡಿಯಾಗಿವೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ,  ರೋಹಿತ್ನ ಟ್ರೇಡ್ ಮಾಡಿಕೊಳ್ಳಲು ಮುಂಬೈ ಇಂಡಿಯನ್ಸ್ ಜೊತೆ ಮಾತುಕತೆ ನಡೆಸಿದೆ. ಆದರೆ ಈ ಮಾತುಕತೆ ಸಕ್ಸಸ್ ಅಗಿಲ್ಲ ಅಂತ ಹೇಳಲಾಗ್ತಿದೆ. 

ಒಟ್ಟಿನಲ್ಲಿ ಒಂದೆಡೆ ಹಾರ್ದಿಕ್ ನಾಯಕನಾಗಿರೋದು ಯಾರಿಗೂ ಇಷ್ಟವಿಲ್ಲ. ಮತ್ತೊಂದೆಡೆ ರೋಹಿತ್ ಇನ್ನು ಎಷ್ಟು ದಿನ ಮುಂಬೈ ತಂಡದಲ್ಲಿ ಇರ್ತಾರೋ ಅನ್ನೋದೂ ಗ್ಯಾರಂಟಿ ಇಲ್ಲ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Follow Us:
Download App:
  • android
  • ios