KSCA ಫ್ರಾಂಚೈಸಿ ಟಿ20 ಲೀಗ್ ಮತ್ತೆ ಶುರು; ಟೂರ್ನಿಗೆ ಡೇಟ್ ಫಿಕ್ಸ್

ಫ್ರಾಂಚೈಸಿ ಆಧಾರಿತ ಟಿ20 ಲೀಗ್‌ ಆರಂಭಿಸಿದ ಕೆಎಸ್‌ಸಿಎ
ಬೆಂಗಳೂರಲ್ಲಿ ಆಗಸ್ಟ್‌ 14ರಿಂದ 30ರ ವರೆಗೆ ಟೂರ್ನಿ
ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಗುಲ್ಬರ್ಗ ಸೇರಿ 6 ತಂಡಗಳು ಭಾಗಿ

Maharaja Trophy KSCA T20 set to return with second edition this August kvn

ಬೆಂಗಳೂರು(ಜು.09): ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಮತ್ತೆ ಫ್ರಾಂಚೈಸಿ ಆಧಾರಿತ ಟಿ20 ಲೀಗ್‌ ಆರಂಭಿಸುತ್ತಿದ್ದು, ಆಗಸ್ಟ್‌ 14ರಿಂದ 30ರ ವರೆಗೆ ಟೂರ್ನಿ ನಡೆಯಲಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಹಾಗೂ ಗುಲ್ಬರ್ಗ ಸೇರಿ 6 ತಂಡಗಳು ಪಾಲ್ಗೊಳ್ಳಲಿದ್ದು, ಎಲ್ಲಾ 33 ಪಂದ್ಯಗಳೂ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

2009ರಿಂದ 2019ರ ವರೆಗೆ ಕರ್ನಾಟಕ ಪ್ರೀಮಿಯರ್ ಲೀಗ್ ಫ್ರಾಂಚೈಸಿ ಟೂರ್ನಿ ಆಯೋಜಿಸಿದ್ದ ಕೆಎಸ್‌ಸಿಎ ಕಳೆದ ವರ್ಷ ಮಹಾರಾಜ ಟ್ರೋಫಿ ಟೂರ್ನಿ ಪರಿಚಯಿಸಿತ್ತು. ಆದರೆ ಅದು ಫ್ರಾಂಚೈಸಿ ಆಗಿರಲಿಲ್ಲ. ಪ್ರಾಯೋಜಕತ್ವ ಮಾದರಿಯಲ್ಲಿ ಟೂರ್ನಿ ನಡೆದಿತ್ತು. ಈ ಬಾರಿ ಮತ್ತೆ ಫ್ರಾಂಚೈಸಿ ಲೀಗ್‌ ಆರಂಭಿಸಲು ಕೆಎಸ್‌ಸಿಎ ನಿರ್ಧರಿಸಿದ್ದು, ಜು.22ರಂದು ಆಟಗಾರರ ಹರಾಜು ಕೂಡಾ ನಡೆಯಲಿದೆ. ಪ್ರತಿ ಫ್ರಾಂಚೈಸಿ ಗರಿಷ್ಠ 50 ಲಕ್ಷ ರುಪಾಯಿ ವ್ಯಯಿಸಲು ಅವಕಾಶ ನೀಡಲಾಗಿದೆ.

ಭಾರತೀಯರ ವಿದೇಶಿ ಲೀಗ್ ಆಟಕ್ಕೆ ಬಿಸಿಸಿಐ ಕಡಿವಾಣ?

ಮುಂಬೈ: ಭಾರತೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ವಿದೇಶಿ ಲೀಗ್‌ಗಳಲ್ಲಿ ಆಡಲು ಬಯಸುವ ಆಟಗಾರರಿಗೆ ಕಡಿವಾಣ ಹಾಕಲು ಬಿಸಿಸಿಐ ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಕಠಿಣಗೊಳಿಸುವ ಸುಳಿವು ನೀಡಿದೆ. ಶುಕ್ರವಾರ ಬಿಸಿಸಿಐ ಅಪೆಕ್ಸ್‌ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. 

ಭಾರತ ಎದುರಿನ ಮೊದಲ ಟೆಸ್ಟ್‌ಗೆ ವೆಸ್ಟ್ ಇಂಡೀಸ್‌ ತಂಡ ಪ್ರಕಟ; 2 ವರ್ಷಗಳ ಬಳಿಕ ದೈತ್ಯ ಕ್ರಿಕೆಟಿಗ ಕಮ್‌ಬ್ಯಾಕ್‌..!

ಈಗ ಚರ್ಚಿಸಿರುವ ಹೊಸ ನೀತಿಯ ಪ್ರಕಾರ, ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆಟಗಾರರು ವಿದೇಶಿ ಲೀಗ್‌ಗಳಲ್ಲಿ ಆಡಬೇಕಿದ್ದರೆ ಬಿಸಿಸಿಐನಿಂದ ಎನ್‌ಒಸಿ ಪಡೆಯಬೇಕು. ಅಲ್ಲದೇ, ನಿವೃತ್ತ ಆಟಗಾರರಿಗೆ ಕೂಲಿಂಗ್-ಆಫ್ ಅವಧಿಯನ್ನು ಪರಿಚಯಿಸಲು ಬಿಸಿಸಿಐ ಮುಂದಾಗಿದೆ. ಅಂದರೆ ಆಟಗಾರರು ನಿವೃತ್ತಿ ಘೋಷಿಸಿದ ಬಳಿಕ ನಿರ್ದಿಷ್ಟ ಸಮಯದವರೆಗೆ ವಿದೇಶಿ ಲೀಗ್‌ಗಳಲ್ಲಿ ಆಡುವಂತಿಲ್ಲ. ಸದ್ಯ ಭಾರತೀಯ ಕ್ರಿಕೆಟಿಗರಿಗೆ ವಿದೇಶಿ ಲೀಗ್‌ಗಳಲ್ಲಿ ಆಡುವ ಅವಕಾಶವಿಲ್ಲದಿದ್ದರೂ, ನಿವೃತ್ತಿ ಬಳಿಕ ಅವರು ಆಡಬಹುದು.

2 ಬೌನ್ಸರ್‌ಗೆ ಚಾನ್ಸ್‌

ಮುಷ್ತಾಕ್‌ ಅಲಿ ಟಿ20 ಲೀಗ್‌ನಲ್ಲಿ ಬೌಲರ್‌ಗೆ ಪ್ರತಿ ಓವರ್‌ನಲ್ಲಿ 2 ಬೌನ್ಸರ್‌ ಎಸೆಯಲು ಬಿಸಿಸಿಐ ಅವಕಾಶ ನೀಡಿದೆ. ಈ ಮೊದಲು ಪ್ರತಿ ಓವರ್‌ಗೆ 1 ಬಾರಿ ಮಾತ್ರ ಬೌನ್ಸರ್‌ ಎಸೆಯಬಹುದಿತ್ತು.

ಆ್ಯಷಸ್‌: 3ನೇ ದಿನ ಮಳೆಯದ್ದೇ ಆಟ!

ಲಂಡನ್‌: ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿಯ 3ನೇ ಪಂದ್ಯದ 3ನೇ ದಿನದಾಟ ಬಹುತೇಕ ಮಳೆಯಿಂದಾಗಿ ಸ್ಥಗಿತಗೊಂಡಿತು. ದಿನದಾಟ ಆರಂಭಕ್ಕೂ ಮುನ್ನವೇ ಧಾರಾಕಾರ ಮಳೆ ಸುರಿಯುತ್ತಿದ್ದ ಕಾರಣ ಪಂದ್ಯ ಬರೋಬ್ಬರಿ 5 ಗಂಟೆ ತಡವಾಗಿ ಆರಂಭಗೊಂಡಿತು. ಭಾರತೀಯ ಕಾಲಮಾನ ರಾತ್ರಿ 9.15ರ ಸುಮಾರಿಗೆ ಪಂದ್ಯ ಆರಂಭಗೊಂಡರೂ ಮತ್ತೆ ಮಳೆ ಅಡ್ಡಿಪಡಿಸಿದ ಕಾರಣ ಕೆಲ ಕಾಲ ಮತ್ತೆ ಪಂದ್ಯ ಸ್ಥಗಿತಗೊಳಿಸಲಾಯಿತು. 

ವಿಶ್ವಕಪ್ ಗೆಲ್ಲಿಸುವ ಆಟಗಾರರು ಭಾರತ ತಂಡದಲ್ಲಿದ್ದಾರೆ: ಕೈಫ್‌ ವಿಶ್ವಾಸ

ಇನ್ನು ಇದಾದ ಬಳಿಕ ಮಳೆ ಬಿಡುವು ನೀಡಿತು. ಇದಾದ ಬಳಿಕ ಸ್ಟುವರ್ಟ್‌ ಬ್ರಾಡ್‌, ಕ್ರೀಸ್‌ ವೋಕ್ಸ್ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು 224 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಆತಿಥೇಯ ಇಂಗ್ಲೆಂಡ್‌ಗೆ 250 ರನ್ ಗುರಿ ಸಿಕ್ಕಿದೆ. ಆಸ್ಟ್ರೇಲಿಯಾ ಪರ ಎರಡನೇ ಇನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ ಸಮಯೋಚಿತ ಅರ್ಧಶತಕ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು. ಟ್ರಾವಿಸ್ ಹೆಡ್‌ 112 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ ಆಕರ್ಷಕ 77 ರನ್‌ ಸಿಡಿಸಿದರು. 

ಇನ್ನು ಇಂಗ್ಲೆಂಡ್ ಪರ ಶಿಸ್ತುಬದ್ದ ದಾಳಿ ನಡೆಸಿದ ಸ್ಟುವರ್ಟ್ ಬ್ರಾಡ್ ಹಾಗೂ ಕ್ರಿಸ್ ವೋಕ್ಸ್ ತಲಾ 3 ವಿಕೆಟ್ ಪಡೆದರೆ, ಮಾರ್ಕ್‌ ವುಡ್‌ ಹಾಗೂ ಆಫ್‌ಸ್ಪಿನ್ನರ್ ಮೋಯಿನ್ ಅಲಿ ಕೂಡಾ ಎರಡು ವಿಕೆಟ್ ತಮ್ಮ ಖಾತೆಗೆ ಹಾಕಿಕೊಂಡರು.

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿರುವ ಇಂಗ್ಲೆಂಡ್ ತಂಡವು 4ನೇ ದಿನದಾಟದಂತ್ಯದ ವೇಳೆಗೆ ವಿಕೆಟ್‌ ನಷ್ಟವಿಲ್ಲದೇ 27 ರನ್‌ ಗಳಿಸಿದೆ. ಮೂರನೇ ಟೆಸ್ಟ್ ಗೆಲ್ಲಬೇಕಿದ್ದರೇ, ಆತಿಥೇಯ ಇಂಗ್ಲೆಂಡ್ ತಂಡವು ಕೊನೆಯ ದಿನ ಇನ್ನೂ 224 ರನ್ ಬಾರಿಸಬೇಕಿದೆ. ಇನ್ನು ಆ್ಯಷಸ್‌ ಟೆಸ್ಟ್‌ ಸರಣಿ ಕೈವಶ ಮಾಡಿಕೊಳ್ಳಬೇಕಿದ್ದರೇ, ಆಸ್ಟ್ರೇಲಿಯಾ ತಂಡವು ಕೊನೆಯ ದಿನ ಇಂಗ್ಲೆಂಡ್‌ನ 10 ವಿಕೆಟ್ ಕಬಳಿಸಬೇಕಿದೆ. 5 ಪಂದ್ಯಗಳ  ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಸದ್ಯ ಆಸ್ಟ್ರೇಲಿಯಾ ತಂಡವು 2-0 ಮುನ್ನಡೆಯಲ್ಲಿದೆ.

Latest Videos
Follow Us:
Download App:
  • android
  • ios