ನವವದೆಹಲಿ(ಮಾ.14): ಕೊರೋನಾ ವೈರಸ್‌ನಿಂದ ವಿಶ್ವವೇ ಬೆಚ್ಚಿ ಬಿದ್ದಿದೆ. ಭಾರತದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದೆ. ಸ್ವಾತಂತ್ರ್ಯ ಭಾರತದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಭಾರತವೇ ವೈರಸ್ ಕಾರಣಕ್ಕೆ ಸ್ಥಬ್ಥವಾಗುತ್ತಿದೆ. ಕಾರ್ಯಕ್ರಮಗಳು, ಕ್ರೀಡೆಗಳು ರದ್ದಾಗುತ್ತಿದೆ. ಮುನ್ನಚ್ಚೆರಿಕಾ ಕ್ರಮವಾಗಿ ಕೇಂದ್ರ ಆರೋಗ್ಯ ಇಲಾಖೆ ಹಾಗೂ ಆಯಾ ರಾಜ್ಯ ಆರೋಗ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡಿದೆ. 

ಇದನ್ನೂ ಓದಿ: ಕೊರೋನಾ ಪರಿಣಾಮ, ಪ್ರೇಕ್ಷಕರಿಲ್ಲದೆ ಚೆಂಡು ಹುಡುಕಲು ಫೀಲ್ಡರ್‌ಗಳ ಪರದಾಟ!.

ಕರ್ನಾಟಕದಲ್ಲೂ ಹಲವು ಕಾರ್ಯಕ್ರಮ ಸ್ಥಗಿತಿಗೊಳಿಸಲಾಗಿದೆ. ಮದುವೆ, ಸಮಾರಂಭಕ್ಕೆ ಬ್ರೇಕ್ ಹಾಕಲಾಗಿದೆ. ಯಾವುದೇ ಕ್ರೀಡಾಕೂಟ, ಕ್ರಿಕೆಟ್ ಆಯೋಜಿಸದಂತೆ ನಿರ್ಬಂಧ ಹೇರಲಾಗಿದೆ. ಕೊರೋನಾ ವೈರಸ್‌ನಿಂದ ವಿಶ್ವಮಟ್ಟದಲ್ಲಿ ರದ್ದಾದ ಹಾಗೂ ಮುಂದೂಡಲ್ವಟ್ಟ ಕ್ರಿಕೆಟ್ ಹಾಗೂ ಕ್ರೀಡಾ ಕೂಟಗಳ ವಿವರ ಇಲ್ಲಿದೆ. 

ಕೊರೋನಾದಿಂದ ರದ್ದಾದ/ ಮುಂದೂಡಲ್ಪಟ್ಟಕೂಟಗಳು

  • ಐಪಿಎಲ್ 2020 ಟೂರ್ನಿ ಎಪ್ರಿಲ್ 15ರ ವರೆಗೆ ರದ್ದು
  • ಭಾರತ-ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿ ರದ್ದು
  • ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಶ್ರೀಲಂಕಾ ಪ್ರವಾಸ ಮುಂದೂಡಿಕೆ
  • ಏ.4ರ ವರೆಗೂ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌ ಅಮಾನತು
  • ಏಪ್ರಿಲ್‌ ಕೊನೆ ವರೆಗೂ ಅಂ.ರಾ.ಟೇಬಲ್‌ ಟೆನಿಸ್‌ ಟೂರ್ನಿಗಳು ಅಮಾನತು
  • ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಅನುಮಾನ
  • ಮೇ 31ರ ವರೆಗೂ ರಾಷ್ಟ್ರೀಯ ಚೆಸ್‌ ಟೂರ್ನಿಗಳು ಅಮಾನತು
  •  ದೇಶಾದ್ಯಂತ ಎಲ್ಲಾ ಗಾಲ್‌್ಫ ಟೂರ್ನಿಗಳು ಅರ್ನಿದಿಷ್ಟಾವಧಿಗೆ ಮುಂದೂಡಿಕೆ
  •  ದಕ್ಷಿಣ ಅಮೆರಿಕ ಫೀಫಾ ವಿಶ್ವಕಪ್‌ ಫುಟ್ಬಾಲ್‌ ಅರ್ಹತಾ ಟೂರ್ನಿ ಮುಂದೂಡಿಕೆ
  • ದೆಹಲಿಯಲ್ಲಿ ಆಯೋಜಿಸಿದ್ದ ವಿಶ್ವಕಪ್ ಶೂಟಿಂಗ್ ಮುಂದೂಡಿಕೆ