Asianet Suvarna News Asianet Suvarna News

India tour of Zimbabwe: ಏಕದಿನ ಸರಣಿಯನ್ನಾಡಲು ಹರಾರೆಗೆ ಬಂದಿಳಿದ ಟೀಂ ಇಂಡಿಯಾ..!

ಏಕದಿನ ಸರಣಿಯನ್ನಾಡಲು ಜಿಂಬಾಬ್ವೆಗೆ ಬಂದಿಳಿದ ಟೀಂ ಇಂಡಿಯಾ
ನಾಯಕನಾಗಿ ಟೀಂ ಇಂಡಿಯಾ ಮುನ್ನಡೆಸಲಿರುವ ಕೆ ಎಲ್ ರಾಹುಲ್
ಮೂರು ಪಂದ್ಯಗಳ ಏಕದಿನ ಸರಣಿ ಆಗಸ್ಟ್ 18ರಿಂದ ಆರಂಭ

KL Rahul led Team India arrive in Harare ahead of 3 match ODI series against Zimbabwe kvn
Author
Bengaluru, First Published Aug 14, 2022, 2:01 PM IST

ಹರಾರೆ(ಆ.14): ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್‌ 18ರಿಂದ ಆರಂಭವಾಗಲಿದ್ದು, ಈ ಸರಣಿಯಲ್ಲಿ ಪಾಲ್ಗೊಳ್ಳಲು ಕೆ ಎಲ್ ರಾಹುಲ್‌ ನೇತೃತ್ವದ ಟಿಂ ಇಂಡಿಯಾ, ಶನಿವಾರ ಸಂಜೆ ಜಿಂಬಾಬ್ವೆ ರಾಜಧಾನಿ ಹರಾರೆಗೆ ಬಂದಿಳಿದಿದೆ. ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 18, 20 ಹಾಗೂ 22ರಂದು ನಡೆಯಲಿದೆ. ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 18, 20 ಹಾಗೂ 22ರಂದು ನಡೆಯಲಿದೆ. 

ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್, ಟೀಂ ಇಂಡಿಯಾ ಹಂಗಾಮಿ ಹೆಡ್‌ಕೋಚ್‌ ಆಗಿ ಈ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಟೀಂ ಇಂಡಿಯಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು ಈಗಾಗಲೇ ಜಿಂಬಾಬ್ವೆಗೆ ಬಂದಿಳಿದಿದ್ದಾರೆ. ಜಿಂಬಾಬ್ವೆ ಪ್ರವಾಸದ ವೇಳೆ ಭಾರತ ಆಡಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿವಿಎಸ್‌ ಲಕ್ಚ್ಮಣ್‌, ಭಾರತ ಕ್ರಿಕೆಟ್ ತಂಡದ ಹೆಡ್‌ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಜಿಂಬಾಬ್ವೆ ಎದುರಿನ ಸರಣಿಯು ಆಗಸ್ಟ್ 22ಕ್ಕೆ ಮುಕ್ತಾಯವಾಗಲಿದೆ. ಇನ್ನು ಆಗಸ್ಟ್ 23ರಂದು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಜತೆಗೆ ರಾಹುಲ್ ದ್ರಾವಿಡ್, ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಯುಎಇಗೆ ತೆರಳಬೇಕಿದೆ. ಎರಡು ಟೂರ್ನಿಗಳ ನಡುವೆ ಸಣ್ಣ ಅಂತರ ಇರುವುದರಿಂದಾಗಿ ಜಿಂಬಾಬ್ವೆ ಪ್ರವಾಸಕ್ಕೆ ವಿವಿಎಸ್ ಲಕ್ಷ್ಮಣ್ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಸ್ಪಷ್ಟಪಡಿಸಿದ್ದಾರೆ.

ಇನ್ನು ಟೀಂ ಇಂಡಿಯಾ, ಜಿಂಬಾಬ್ವೆಗೆ ಬಂದಿಳಿದಿರುವ ಬಗ್ಗೆ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಈ ವಿಚಾರವನ್ನು ಖಚಿತಪಡಿಸಿದೆ. ಅವರು ಇಲ್ಲಿಗೆ ಬಂದಿದ್ದಾರೆ. ಭಾರತವು ಈಗಷ್ಟೇ ಹರಾರೆಗೆ ಬಂದಿಳಿದಿದ್ದು, ಜಿಂಬಾಬ್ವೆ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಏಕದಿನ ಸರಣಿಯು ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಆಗಸ್ಟ್ 18, 20 ಹಾಗೂ 22 ರಂದು ನಡೆಯಲಿದೆ ಎಂದು ಟ್ವೀಟ್ ಮಾಡಿದೆ.

ಜಿಂಬಾಬ್ವೆ ಎದುರಿನ ಪ್ರವಾಸಕ್ಕೆ ಈ ಮೊದಲು ತಂಡವನ್ನು ಪ್ರಕಟಿಸಿದಾಗ, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಅನುಭವಿ ಕ್ರಿಕೆಟಿಗ ಶಿಖರ್ ಧವನ್‌ಗೆ ನಾಯಕ ಪಟ್ಟ ಕಟ್ಟಲಾಗಿತ್ತು. ಆದರೆ ಜಿಂಬಾಬ್ವೆ ಪ್ರವಾಸಕ್ಕೂ ಮುನ್ನ ಕೆ ಎಲ್ ರಾಹುಲ್ ಸಂಪೂರ್ಣ ಫಿಟ್ ಆದ ಹಿನ್ನೆಲೆಯಲ್ಲಿ ಕೆ ಎಲ್ ರಾಹುಲ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿದ್ದು, ಶಿಖರ್ ಧವನ್‌ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಇತ್ತೀಚೆಗಷ್ಟೇ ಶಿಖರ್ ಧವನ್ ನೇತೃತ್ವದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಮಾಡಿ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ಸ್ವೀಪ್ ಮಾಡಿತ್ತು.

Follow Us:
Download App:
  • android
  • ios