ಕೇರಳ(ಫೆ.05): ರೈತ ಪ್ರತಿಭಟನೆಯನ್ನು ಬೆಂಬಲಿ ದೇಶ ಒಡೆಯುವ ಪ್ರಯತ್ನ ಮಾಡಿದ ವಿದೇಶಿ ಸೆಲೆಬ್ರೆಟಿಗಳಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸೇರಿದಂತೆ ಭಾರತೀಯ ಸೆಲೆಬ್ರೆಟಿಗಳು ತಿರುಗೇಟು ನೀಡಿದ್ದಾರೆ. ಭಾರತಕ್ಕೆ ಏನು ಮಾಡಬೇಕು ಎಂಬುದು ಗೊತ್ತಿದೆ. ಭಾರತದ ಆತಂರಿಕ ವಿಚಾರದಲ್ಲಿ ಹಸ್ತಕ್ಷೇಪ ಒಳಿತಲ್ಲ ಎಂದು ಖಡಕ್ ಟ್ವೀಟ್ ಮಾಡಿದ್ದರು. ಇದು ಕೇರಳ ಜನತೆ ಹಾಗೂ ಯೂಥ್ ಕಾಂಗ್ರೆಸ್ ಕಣ್ಣು ಕೆಂಪಾಗಿಸಿದೆ.

ಇದು ನಮ್ಮ ಆಂತರಿಕ ವಿಚಾರ; ವಿದೇಶಿ ತಾರೆಯರಿಗೆ ತಿರುಗೇಟು ನೀಡಿದ ತೆಂಡುಲ್ಕರ್

ವಿಶ್ವದ ಕ್ರಿಕೆಟ್ ಐಕಾನ್ ವಿರುದ್ಧ ಕೇರಳ ಯೂಥ್ ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿದೆ. ಸಚಿನ್ ಕಟೌಟ್‌ಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಚ್ಚಿ ಪ್ರಮುಖ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಕೇರಳ ಯೂಥ್ ಕಾಂಗ್ರೆಸ್, ಸಚಿನ್ ಕಟೌಟ್‌ನಲ್ಲಿ ಮುಖಕ್ಕೆ ಮಸಿ ಬಳಿದು ಅವಮಾನ ಮಾಡಲಾಗಿದೆ

 

ಯೂಥ್ ಕಾಂಗ್ರೆಸ್ ನಡೆಗೆ ಕೇರಳದ ಕೆಲೆವೆಡೆ ಬೆಂಬಲ ವ್ಯಕ್ತವಾಗಿದೆ. ಆದರೆ ದೇಶಾದ್ಯಂತ ಕೇರಳ ಯೂಥ್ ಕಾಂಗ್ರೆಸ್ ಹಾಗೂ ಸಚಿನ್ ವಿರುದ್ಧ ಪ್ರತಿಭಟನೆಗೆ ಇಳಿದಿರುವ ಕೇರಳ ಜನತೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.  ಕೇರಳದಲ್ಲಿ ಸಂಪೂರ್ಣ ಸಾಕ್ಷರತೆ ಮಾತ್ರ ಬುದ್ದಿ ಮಾತ್ರ ಬೆಳೆದಿಲ್ಲ ಎಂದು ನೆಟ್ಟಿಗರು ಸಚಿನ್ ವಿರುದ್ಧ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ರೈತರ ಪ್ರತಿಭಟನೆ ಕುರಿತು ಅಮೆರಿಕ ಪಾಪ್ ಗಾಯಕಿ ರಿಹಾನ, ಸ್ವೀಡರ್ ಹೋರಗಾರ್ತಿ ಗ್ರೇಟಾ ಥನ್ಬರ್ಗ್ ಸೇರಿದಂತೆ ಹಲವು ವಿದೇಶಿ ಸೆಲೆಬ್ರೆಟಿಗಳು ಭಾರತ ವಿರೋಧಿ ಪಿತೂರಿ ನಡೆಸಿದ್ದರು. ಭಾರತವನ್ನು ಒಡೆಯುವ ಪ್ರಯತ್ನ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಭಾರತ ವಿರೋಧಿ ಷಡ್ಯಂತ್ರ  ಹೆಚ್ಚಾಗುತ್ತಿದ್ದಂತೆ, ಸಚಿನ್ ತೆಂಡುಲ್ಕರ್ ಖಡಕ್ ಪ್ರತಿಕ್ರಿಯೆ ನೀಡಿದ್ದರು.

 

ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ ಬೆನ್ನಲ್ಲೇ ಕೇರಳದ ಕೆಲ ಮಂದಿ ರೊಚ್ಚಿಗೆದ್ದಿದ್ದರು. ಸಚಿನ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲ 2015ರಲ್ಲಿ ಸಚಿನ್ ತೆಂಡುಲ್ಕರ್ ಯಾರು ಎಂದು ಕೇಳಿದ್ದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾಗೆ ಕೇರಳಿಗರು ಕ್ಷಮೆ ಕೇಳಿದ್ದರು. ಅಂದು ಸಚಿನ್ ಯಾರೆಂದು ಕೇಳಿದ್ದೀರಿ, ನೀವು ಕೇಳಿದ್ದು ಸರಿಯಾಗಿದೆ. ಸಚಿನ್ ಅಷ್ಟು ದೊಡ್ಡ ವ್ಯಕ್ತಿಯಲ್ಲ ಎಂದು ಸಚಿನ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.