ಕಡಪ(ಫೆ.27): ಚಂಢೀಗಡ ಅಂಡರ್‌-19 ತಂಡದ ನಾಯಕಿ ಕಾಶ್ವಿ ಗೌತಮ್‌ ಮಂಗಳವಾರ ಸೀಮಿತ ಓವರ್‌ ಕ್ರಿಕೆಟ್‌ ಪಂದ್ಯದಲ್ಲಿ 10 ವಿಕೆಟ್‌ ಕಬಳಿಸಿದ ಭಾರತದ ಮೊದಲ ಬೌಲರ್‌ ಎನ್ನುವ ದಾಖಲೆ ಬರೆದರು. ಇಲ್ಲಿ ನಡೆದ ಅಂಡರ್‌-19 ಏಕದಿನ ಟ್ರೋಫಿಯ ಪಂದ್ಯದಲ್ಲಿ ಅರುಣಾಚಲ ಪ್ರದೇಶವನ್ನು 25 ರನ್‌ಗೆ ಆಲೌಟ್‌ ಮಾಡಲು ಕಾಶ್ವಿ ಕೇವಲ 29 ಎಸೆತಗಳನ್ನು ತೆಗೆದುಕೊಂಡರು.

ಇದನ್ನೂ ಓದಿ: ಭಾರತೀಯಳ ಜೊತೆ ಆಸೀಸ್ ಕ್ರಿಕೆಟಿಗ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ!.

ಬಲಗೈ ವೇಗಿಯಾಗಿರುವ ಕಾಶ್ವಿ, 4.5 ಓವರಲ್ಲಿ 12 ರನ್‌ಗೆ 10 ವಿಕೆಟ್‌ ಕಿತ್ತರು. ಅವರ ಈ ಅಮೋಘ ಪ್ರದರ್ಶನದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ ಸಹ ಇತ್ತು. ಮತ್ತೊಂದು ಆಸಕ್ತಿದಾಯಕ ವಿಚಾರವೆಂದರೆ ಕಾಶ್ವಿಗೆ 10 ವಿಕೆಟ್‌ ಸಾಧನೆ ಮಾಡಲು ಯಾವ ಫೀಲ್ಡರ್‌ಗಳ ಸಹಾಯವೂ ಬೇಕಾಗಲಿಲ್ಲ. ನಾಲ್ವರನ್ನು ಬೌಲ್ಡ್‌ ಮಾಡಿದ ಕಾಶ್ವಿ, 6 ಆಟಗಾರ್ತಿಯರನ್ನು ಎಲ್‌ಬಿ ಬಲೆಗೆ ಕೆಡವಿದರು.

 

ಪಾಕಿಸ್ತಾನ ವಿರುದ್ಧ ಅನಿಲ್‌ ಕುಂಬ್ಳೆ, ದಕ್ಷಿಣ ವಲಯದ ವಿರುದ್ಧ ದೇಬಾಶಿಶ್‌ ಮೊಹಾಂತಿ, ಮಿಜೋರಾಮ್‌ ವಿರುದ್ಧ ರಣಜಿ ಪಂದ್ಯದಲ್ಲಿ ಮಣಿಪುರದ ರೆಕ್ಸ್‌ ಸಿಂಗ್‌ ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ ಕಬಳಿಸಿದ್ದರು. ಆದರೆ ಅವರೆಲ್ಲಾ ಪ್ರಥಮ ದರ್ಜೆ ಮಾದರಿಯಲ್ಲಿ ಸಾಧನೆಗೈದಿದ್ದರು.