* ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಕುರುಣಾ ಜೈನ್* 2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕರುಣಾ ಜೈನ್* ಭಾರತದ ಪರ 5 ಟೆಸ್ಟ್‌, 44 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿರುವ ಕರುಣಾ ಜೈನ್

ಬೆಂಗಳೂರು(ಜು.25): ಭಾರತ ಮಹಿಳಾ ತಂಡದ ಮಾಜಿ ವಿಕೆಟ್‌ ಕೀಪರ್‌ ಬ್ಯಾಟರ್‌, ಕರ್ನಾಟಕದ ಕರುಣಾ ಜೈನ್‌ ಭಾನುವಾರ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಬೆಂಗಳೂರಿನ 36 ವರ್ಷದ ಕರುಣಾ ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದು, ‘ಕ್ರಿಕೆಟ್‌ ಬದುಕಿನ ಪಯಣದಲ್ಲಿ ಜೊತೆಯಾದ ಎಲ್ಲರಿಗೂ ಧನ್ಯವಾದಗಳು. ಬಹಳ ಸಂತೋಷ ಹಾಗೂ ತೃಪ್ತಿಯಿಂದ ಕ್ರಿಕೆಟ್‌ ತೊರೆಯುತ್ತಿದ್ದೇನೆ’ ಎಂದಿದ್ದಾರೆ. 

2004ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕರುಣಾ ಜೈನ್ ಭಾರತದ ಪರ 5 ಟೆಸ್ಟ್‌, 44 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು 2014ರಲ್ಲಿ ಕೊನೆ ಬಾರಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು.

Scroll to load tweet…

ಭಾರತದಲ್ಲಿ ಆಸೀಸ್‌ ಪಂದ್ಯ ಪ್ರಸಾರ ಹಕ್ಕು ಡಿಸ್ನಿ ಸ್ಟಾರ್‌ಗೆ

ಮೆಲ್ಬರ್ನ್‌: ಆಸ್ಪ್ರೇಲಿಯಾದ ಪಂದ್ಯಗಳನ್ನು ಭಾರತದಲ್ಲಿ ಪ್ರಸಾರ ಮಾಡುವ ಹಕ್ಕನ್ನು ಡಿಸ್ನಿ ಸ್ಟಾರ್‌ ತನ್ನದಾಗಿಸಿಕೊಂಡಿದೆ. 2017-18ರಿಂದ ಸೋನಿ ಸಂಸ್ಥೆ ಭಾರತದಲ್ಲಿ ಆಸೀಸ್‌ ಪಂದ್ಯಗಳ ಪ್ರಸಾರ ಹಕ್ಕನ್ನು ಪಡೆದುಕೊಂಡಿತ್ತು. ಅದನ್ನು ಡಿಸ್ನಿ ತನ್ನ ತೆಕ್ಕೆಗೆ ಪಡೆದುಕೊಂಡಿದ್ದು, ಇದನ್ನು ಕ್ರಿಕೆಟ್‌ ಆಸ್ಪ್ರೇಲಿಯಾ ಖಚಿತಪಡಿಸಿದೆ. ಭಾನುವಾರ ಕ್ರಿಕೆಟ್‌ ಆಸ್ಪ್ರೇಲಿಯಾ ಜೊತೆ 7 ವರ್ಷಗಳ ಒಪ್ಪಂದಕ್ಕೆ ಡಿಸ್ನಿ ಸ್ಟಾರ್‌ ಸಂಸ್ಥೆಯು ಸಹಿ ಹಾಕಿದೆ. ಒಪ್ಪಂದದ ಪ್ರಕಾರ 2023-24ರ ಆವೃತ್ತಿಯಿಂದ 7 ವರ್ಷ ಆಸ್ಪ್ರೇಲಿಯಾದ ಅಂತಾರಾಷ್ಟ್ರೀಯ ಪಂದ್ಯಗಳು, ಪುರುಷ ಮತ್ತು ಮಹಿಳೆಯರ ಬಿಗ್‌ಬ್ಯಾಶ್‌ ಟೂರ್ನಿಯನ್ನು ಡಿಸ್ನಿ ಭಾರತದಲ್ಲಿ ಪ್ರಸಾರ ಮಾಡಲಿದೆ.

ಮೊದಲ ಏಕದಿನದಲ್ಲಿ ನಿಧಾನ ಬೌಲಿಂಗ್‌: ಭಾರತಕ್ಕೆ ದಂಡ

ಪೋರ್ಚ್‌ ಆಫ್‌ ಸ್ಪೇನ್‌: ವೆಸ್ಟ್‌ಇಂಡೀಸ್‌ ವಿರುದ್ಧ ಶುಕ್ರವಾರ(ಜು.22)ರಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕೆ ಭಾರತ ಕ್ರಿಕೆಟ್‌ ತಂಡಕ್ಕೆ ಐಸಿಸಿ ಪಂದ್ಯದ ಸಂಭಾವನೆಯ ಶೇ.20ರಷ್ಟುಮೊತ್ತವನ್ನು ದಂಡವಾಗಿ ವಿಧಿಸಿದೆ. ನಿಗದಿತ ಸಮಯ ಮುಕ್ತಾಯಗೊಂಡಾಗ ಭಾರತ ಒಂದು ಓವರ್‌ ಹಿಂದೆ ಇದ್ದ ಕಾರಣ, ಪಂದ್ಯದ ರೆಫ್ರಿ ರಿಚ್ಚಿ ರಿಚರ್ಡ್‌ಸನ್‌, ಶಿಖರ್‌ ಧವನ್‌ ಪಡೆಗೆ ದಂಡ ಹಾಕಿದರು. ಭಾರತದ ನಾಯಕ ಧವನ್‌ ತಪ್ಪು ಒಪ್ಪಿಕೊಂಡ ದಂಡ ಪಾವತಿಸುವುದಾಗಿ ತಿಳಿಸಿದ ಕಾರಣ, ಅಧಿಕೃತ ವಿಚಾರಣೆಯ ಅಗತ್ಯ ಕಂಡುಬರಲಿಲ್ಲ ಎಂದು ರೆಫ್ರಿ ಹೇಳಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ಭಾರತ 3 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು.

Commonwealth Games 2022 ‌: ಭಾರತ ವನಿತಾ ಕ್ರಿಕೆಟಿಗರಿಗೆ ವೀಸಾ ಸಮಸ್ಯೆ

ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ 3ನೇ ಏಕದಿನ ಪಂದ್ಯ ರದ್ದು

ಲೀಡ್ಸ್‌: ಇಂಗ್ಲೆಂಡ್‌-ದ.ಆಫ್ರಿಕಾ ನಡುವಿನ 3ನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದು, 3 ಪಂದ್ಯಗಳ ಸರಣಿಯನ್ನು ಉಭಯ ತಂಡಗಳು 1-1ರಲ್ಲಿ ಹಂಚಿಕೊಂಡಿವೆ. ಟಾಸ್‌ ಗೆದ್ದ ದ.ಆಫ್ರಿಕಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. 27.4 ಓವರ್‌ಗಳಲ್ಲಿ 2 ವಿಕೆಟ್‌ಗೆ 159 ರನ್‌ ಗಳಿಸಿದ್ದಾಗ ಸುರಿದ ಮಳೆ ಮತ್ತೆ ನಿಲ್ಲದ ಕಾರಣ ಅಂಪೈರ್‌ಗಳು ಪಂದ್ಯ ರದ್ದುಗೊಳಿಸಿದರು. ಮೊದಲ ಪಂದ್ಯದಲ್ಲಿ ಆಫ್ರಿಕಾ, 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ ಗೆದ್ದಿತ್ತು.