Asianet Suvarna News Asianet Suvarna News

ಮುಷ್ತಾಕ್‌ ಅಲಿ: ಕರ್ನಾಟಕ Vs ಸೌರಾಷ್ಟ್ರ ; ಮಹಿಳಾ ಕ್ರಿಕೆಟ್‌: ಕರ್ನಾಟಕ-ಮಧ್ಯಪ್ರದೇಶ ಕ್ವಾರ್ಟರ್‌ ಫೈನಲ್‌!

*ಮುಷ್ತಾಕ್‌ ಅಲಿ : ಪ್ರಿ ಕ್ವಾರ್ಟರ್‌ನಲ್ಲಿ ಕರ್ನಾಟಕ   ಸೌರಾಷ್ಟ್ರ ಹಣಾಹಣಿ
*ಮಹಿಳಾ ಏಕದಿನ : 4ನೇ ಕ್ವಾರ್ಟರ್‌ ಫೈನಲ್‌  ಕರ್ನಾಟಕ Vs ಮಧ್ಯಪ್ರದೇಶ 

Karnataka to face Sourashtra in Syed Mushtaq Ali Trophy at delhi mnj
Author
Bengaluru, First Published Nov 16, 2021, 8:53 AM IST
  • Facebook
  • Twitter
  • Whatsapp

ನವದೆಹಲಿ(ನ.16): ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿ (Syed Mushtaq Ali Trophy) ನಾಕೌಟ್‌ ಹಂತದ ಪಂದ್ಯಗಳು ಮಂಗಳವಾರದಿಂದ ಆರಂಭವಾಗಲಿದ್ದು, ಕರ್ನಾಟಕ (Karnataka) ಪ್ರಿ ಕ್ವಾರ್ಟರ್‌ನಲ್ಲಿ ಸೌರಾಷ್ಟ್ರ ವಿರುದ್ಧ ಸೆಣಸಾಡಲಿದೆ. ಟೂರ್ನಿಯ ಗುಂಪು ಹಂತದ 5 ಪಂದ್ಯಗಳಲ್ಲಿ ನಾಲ್ಕು ಗೆಲುವಿನೊಂದಿಗೆ ರಾಜ್ಯ ತಂಡ ಎಲೈಟ್‌ ‘ಬಿ’ (Elite B) ಗುಂಪಿನಲ್ಲಿ 2ನೇ ಸ್ಥಾನ ಪಡೆದಿದ್ದರೆ, ಸೌರಾಷ್ಟ್ರ (Sourashtra) ಸಹ 4 ಪಂದ್ಯಗಳಲ್ಲಿ ಜಯ ಸಾಧಿಸಿ ಎಲೈಟ್‌ ಇ ಗುಂಪಿನಲ್ಲಿ 2ನೇ ಸ್ಥಾನ ಗಳಿಸಿತ್ತು. ರಾಜ್ಯ ತಂಡದ ಪರ ಗುಂಪು ಹಂತದಲ್ಲಿ ಆಡಿದ್ದ ಮಯಾಂಕ್‌ (Mayank) , ಪ್ರಸಿದ್ಧ್ ಕಿವೀಸ್‌ ಸರಣಿಗೆ ಆಯ್ಕೆಯಾಗಿದ್ದರೆ, ದೇವದತ್ತ ಪಡಿಕ್ಕಲ್‌ (devadutt Padikal), ಕೆ.ಗೌತಮ್‌ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಅನುಪಸ್ಥಿತಿ ತಂಡಕ್ಕೆ ಕಾಡುವ ಸಾಧ್ಯತೆ ಇದೆ. ನಾಯಕ ಮನೀಷ್‌ ಪಾಂಡೆ (Manish Pandey) , ಕರುಣ್‌ ನಾಯರ್‌ (Karun Nair) ಬ್ಯಾಟಿಂಗ್‌ ಬಲವಾಗಿದ್ದು, ವೈಶಾಕ್‌, ಕಾರಿಯಪ್ಪ ಬೌಲಿಂಗ್‌ ಅಸ್ತ್ರವಾಗಿದ್ದಾರೆ.

ಮಹಿಳಾ ಕ್ರಿಕೆಟ್‌: ಇಂದು ಕರ್ನಾಟಕ-ಮಧ್ಯಪ್ರದೇಶ ಕ್ವಾರ್ಟರ್‌ ಫೈನಲ್‌ ಕದನ

ಬೆಂಗಳೂರು: ರಾಷ್ಟ್ರೀಯ ಮಹಿಳಾ ಏಕದಿನ (Women's Senior One Day Trophy 2021) ಟೂರ್ನಿಯ 4ನೇ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮಂಗಳವಾರ ಕರ್ನಾಟಕ ಮಹಿಳಾ ತಂಡ (Karnataka Womens's Cricket0 ಮಧ್ಯಪ್ರದೇಶ ವಿರುದ್ಧ ಆಡಲಿದೆ. ಗುಂಪು ಹಂತದಲ್ಲಿ ಕರ್ನಾಟಕ ಆಡಿರುವ ಎಲ್ಲಾ 5 ಪಂದ್ಯಗಳಲ್ಲಿ ಜಯಗಳಿಸಿ ಎಲೈಟ್‌ ಇ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಮಧ್ಯಪ್ರದೇಶ (Madhya Pradeh) ಸಹ ಐದೂ ಪಂದ್ಯಗಳಲ್ಲಿ ಜಯ ಸಾಧಿಸಿ ಎಲೈಟ್‌ ಡಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಫಿಲ್ಡಿಂಗ್‌ ವೇಳೆ ಡಿಕ್ಕಿ: ಯುವ ಕ್ರಿಕೆಟಿಗನ ತಲೆಗೆ ಬಲವಾದ ಪೆಟ್ಟು!

ಕೆಎಸ್‌ಸಿಎ (KSCA) ಮೊದಲ ಡಿವಿಷನ್‌ ಕ್ರಿಕೆಟ್‌ (First Division Cricket) ಟೂರ್ನಿಯ ಪಂದ್ಯದ ಫೀಲ್ಡಿಂಗ್‌ನಲ್ಲಿದ್ದ (Fielding) ಆಟಗಾರರು ಪರಸ್ಪರ ಡಿಕ್ಕಿಯಾದ ಪರಿಣಾಮ ಪ್ರಜ್ವಲ್‌ ಶಿರೋಳ (Prajwal Shirol) ಎಂಬಾತ ಪ್ರಜ್ಞಾ ಹೀನನಾಗಿ ಮೈದಾನದಲ್ಲಿ ಕುಸಿದು ಬಿದ್ದ ಘಟನೆ ಶನಿವಾರ (ನ.13) ನಡೆದಿದೆ. ಗಂಭೀರ ಗಾಯಗೊಂಡ ಆತನಿಗೆ ಶಸ್ತ್ರಚಿಕಿತ್ಸೆ (Operation) ನಡೆಸಲಾಗಿದ್ದು, ಸಧ್ಯ ಐಸಿಯುನಲ್ಲಿ (ICU) ಚಿಕಿತ್ಸೆ ಮುಂದುವರಿದಿದ್ದು, ಚೇತರಿಸಿಕೊಂಡಿದ್ದಾರೆ. ಇಲ್ಲಿನ ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (Hubli Cricket Academy) ‘ಎ’-ಧಾರವಾಡದ ಎಸ್‌ಡಿಎಂ ‘ಬಿ’ ತಂಡಗಳ ನಡುವೆ ಶನಿವಾರ ಪಂದ್ಯದ ವೇಳೆ ದುರ್ಘಟನೆ ನಡೆದಿದೆ.

19ನೇ ಓವರ್‌ನಲ್ಲಿ ಫೀಲ್ಡಿಂಗ್‌ ಮಾಡುವಾಗ ಕವರ್ಸ್‌ (covers) ಹಾಗೂ ಪಾಯಿಂಟ್‌ (Point Fielder) ಕ್ಷೇತ್ರದ ನಡುವೆ ಎಸ್‌ಡಿಎಂ (SDM) ತಂಡದ ಪ್ರಜ್ವಲ್‌ ಶಿರೋಳ ಮತ್ತು ಪ್ರಜ್ವಲ್‌ ಬೋರಣ್ಣನವರ ಡಿಕ್ಕಿಯಾದರು. ಪ್ರಜ್ವಲ್‌ ಶಿರೋಳ ಕಿವಿ ಮತ್ತು ಹಣೆಗೆ ಪ್ರಜ್ವಲ್‌ ಬೋರಣ್ಣನವರ ಮೊಣಕಾಲು ಜೋರಾಗಿ ಬಡಿದ ಪರಿಣಾಮ ಪ್ರಜ್ಞಾ ಹೀನರಾಗಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದವರು ಪ್ರಜ್ವಲರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕ್ಯಾ‌ನಿಂಗ್‌ (Scaning) ಮಾಡಿದಾಗ ಮೆದುಳಿಗೆ ಬಲವಾಗಿ ಪೆಟ್ಟು ಬಿದ್ದಿರುವುದು ಕಂಡುಬಂತು. ತಲೆಬುರುಡೆ ಮೆದುಳಿಗೆ (Head Injury) ತಾಕಿತ್ತು. ಹೀಗಾಗಿ ತಕ್ಷಣವೆ ಶಸ್ತ್ರ- ಚಿಕಿತ್ಸೆ ಮಾಡಲಾಗಿದೆ. ಮಂಗಳವಾರದ ವರೆಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸುವುದಾಗಿ ವೈದ್ಯರು ತಿಳಿಸಿದರು.

Follow Us:
Download App:
  • android
  • ios