ಬೆನ್ನುನೋವಿನಿಂದ ಬಳಲುತ್ತಿರುವ ಬುಮ್ರಾ, ಎನ್‌ಸಿಎಯಲ್ಲಿ ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಆಗಮಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೆ ಅವರ ಲಭ್ಯತೆ ಪ್ರಶ್ನಾರ್ಹವಾಗಿದ್ದು, ಅಲಭ್ಯರಾದರೆ ಸಿರಾಜ್ ಅಥವಾ ರಾಣಾ ಆಯ್ಕೆಯಾಗಬಹುದು. ಭಾರತ ತಂಡ ಈಗಾಗಲೇ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ನಾಗ್ಪುರದಲ್ಲಿ ಅಭ್ಯಾಸ ಆರಂಭಿಸಿದೆ.

ನವದೆಹಲಿ: ಬೆನ್ನು ನೋವಿನಿಂದ ಬಳಲುತ್ತಿರುವ ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬುಮ್ರಾ ಬೆಂಗಳೂರಿಗೆ ಆಗಮಿಸಿದ್ದು, ಇಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿರುವ ಬಿಸಿಸಿಐನ ಫಿಸಿಯೋ, ವೈದ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅಗತ್ಯ ಚಿಕಿತ್ಸೆ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ನಿರ್ಧರಿಸಲಿದ್ದು, ತಜ್ಞ ವೈದ್ಯರ ಸಲಹೆ ಪಡೆಯಲು ನ್ಯೂಜಿಲೆಂಡ್‌ಗೂ ಪ್ರಯಾಣಿಸಬಹುದು ಎನ್ನಲಾಗುತ್ತಿದೆ. 

ಕಳೆದ ಬಾರಿ ಬುಮ್ರಾ ನ್ಯೂಜಿಲೆಂಡ್‌ನಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೇ ತಿಂಗಳು 19ರಿಂದ ಚಾಂಪಿಯನ್ಸ್‌ ಟ್ರೋಫಿ ಆರಂಭಗೊಳ್ಳಲಿದ್ದು, ಆ ವೇಳೆಗೆ ಬುಮ್ರಾ ಫಿಟ್‌ ಆಗಲಿದ್ದಾರೆಯೇ ಎನ್ನುವ ಪ್ರಶ್ನೆ ಎದ್ದಿದೆ. ಒಂದು ವೇಳೆ ಬುಮ್ರಾ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅಲಭ್ಯರಾದರೇ, ಮೊಹಮ್ಮದ್ ಸಿರಾಜ್ ಇಲ್ಲವೇ ಹರ್ಷಿತ್ ರಾಣಾ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಆರ್ಶದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ರವೀಂದ್ರ ಜಡೇಜಾ

ಏಕದಿನ ಸರಣಿ: ಅಭ್ಯಾಸ ಆರಂಭಿಸಿದ ಭಾರತ ತಂಡ

ನಾಗ್ಪುರ: ಫೆ.6ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡಲು ಭಾರತ ಕ್ರಿಕೆಟ್‌ ತಂಡ ಸೋಮವಾರ ನಾಗ್ಪುರ ತಲುಪಿತು. ನಾಯಕ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ, ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಯಶಸ್ವಿ ಜೈಸ್ವಾಲ್‌ ಸೇರಿ ತಂಡದ ಬಹುತೇಕ ಆಟಗಾರರು ನಾಗ್ಪುರ ತಲುಪಿದ್ದು, ಸೋಮವಾರವೇ ಅಭ್ಯಾಸ ಆರಂಭಿಸಿದರು.

ಟಿ20 ಸರಣಿಯನ್ನು 4-1ರಲ್ಲಿ ಗೆದ್ದ ಭಾರತ, ಏಕದಿನ ಸರಣಿಯನ್ನೂ ವಶಪಡಿಸಿಕೊಂಡು ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ಏಕದಿನ ಸರಣಿ: ನಾಗ್ಪುರ ತಲುಪಿದ ಭಾರತ ತಂಡ

ನಾಗ್ಪುರ: ಫೆ.6ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆಡಲು ಭಾರತ ಕ್ರಿಕೆಟ್‌ ತಂಡ ಸೋಮವಾರ ನಾಗ್ಪುರ ತಲುಪಿತು. ನಾಯಕ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಯಶಸ್ವಿ ಜೈಸ್ವಾಲ್‌ ಸೇರಿ ತಂಡದ ಬಹುತೇಕ ಆಟಗಾರರು ನಾಗ್ಪುರ ತಲುಪಿದ್ದು, ಮಂಗಳವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ.