ದುಬೈ: ವೆಸ್ಟ್‌ಇಂಡೀಸ್‌ನ ಜಾಕ್ವೆಲಿನ್‌ ವಿಲಿಯಮ್ಸ್‌, ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ಥರ್ಡ್‌ ಅಂಪೈರ್‌ ಎನ್ನುವ ದಾಖಲೆ ಬರೆದಿದ್ದಾರೆ.

ಬುಧವಾರ ಗ್ರೆನಡಾದಲ್ಲಿ ನಡೆದ ವಿಂಡೀಸ್‌ ಹಾಗೂ ಐರ್ಲೆಂಡ್‌ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಜಾಕ್ವೆಲಿನ್‌ ಮೂರನೇ ಅಂಪೈರ್‌ ಆಗಿದ್ದರು. ಸರಣಿಯ ಇನ್ನುಳಿದ 2 ಪಂದ್ಯಗಳಲ್ಲೂ ಅವರು ಕಾರ್ಯನಿರ್ವಹಿಸಲಿದ್ದಾರೆ. 43 ವರ್ಷದ ಜಾಕ್ವೆಲಿನ್‌ ತಮಗೆ ಸಿಕ್ಕಿರುವ ಅವಕಾಶದಿಂದ ಸಂತಸವಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಬಿಸಿಸಿಐ ವಾರ್ಷಿಕ ಗುತ್ತಿಗೆ ಪ್ರಕಟ: ಧೋನಿಗಿಲ್ಲ ಸ್ಥಾನ..!

'ನನಗೆ ಸಿಕ್ಕಿರುವ ದೊಡ್ಡ ಗೌರವವಿದು. ಪುರುಷರ ಪಂದ್ಯದಲ್ಲಿ ನಾನು 3ನೇ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇದೇ ಮೊದಲು. ನನಗೆ ಅವಕಾಶ ನೀಡಿದ್ದಕ್ಕೆ ಐಸಿಸಿಗೆ ಧನ್ಯವಾದ ಹೇಳುತ್ತೇನೆ’ ಎಂದು ಜಾಕ್ವೆಲಿನ್‌ ಹೇಳಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಐರ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ ಬಾರಿಸಿತ್ತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ 7 ವಿಕೆಟ್ ಕಳೆದುಕೊಂಡು 204 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಐರ್ಲೆಂಡ್ 4 ರನ್‌ಗಳ ಭರ್ಜರಿ ಜಯ ಸಾಧಿಸಿದೆ.