Asianet Suvarna News Asianet Suvarna News

ಏಕದಿನ ಕ್ರಿಕೆಟ್‌ಗೆ ಐರ್ಲೆಂಡ್ ಸ್ಟಾರ್ ಬ್ಯಾಟ್ಸ್‌ಮನ್‌ ಕೆವಿನ್‌ ಓಬ್ರಿಯನ್‌ ಗುಡ್‌ಬೈ

* ಐರ್ಲೆಂಡ್ ಏಕದಿನ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ ಕೆವಿನ್‌ ಒಬ್ರಿಯನ್

* 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೆವಿನ್‌

* 15 ವರ್ಷಗಳ ಕಾಲ ಐರ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ ಒಬ್ರಿಯನ್

Ireland Cricketer Kevin OBrien Retires from ODI career kvn
Author
Dublin, First Published Jun 19, 2021, 10:12 AM IST

ಡಬ್ಲಿನ್(ಜೂ.19)‌: ಐರ್ಲೆಂಡ್‌ನ ತಾರಾ ಆಲ್ರೌಂಡರ್‌ ಕೆವಿನ್‌ ಓಬ್ರಿಯನ್‌ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 37 ವರ್ಷದ ಕೆವಿನ್‌, ಟೆಸ್ಟ್‌ ಹಾಗೂ ಟಿ20 ಮಾದರಿಯಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದು, ಟಿ20 ವೃತ್ತಿಬದುಕಿನ ಮೇಲೆ ಹೆಚ್ಚು ಗಮನ ಹರಿಸುವುದಾಗಿ ತಿಳಿಸಿದ್ದಾರೆ. 

15 ವರ್ಷಗಳ ಕಾಲ ಐರ್ಲೆಂಡ್ ತಂಡವನ್ನು ಪ್ರತಿನಿಧಿಸಿದ ಬಳಿಕ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸರಿಯಾದ ಸಮಯ ಎಂದು ನನಗನಿಸಿದೆ. ನಾನು 153 ಬಾರಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ ಎನ್ನುವುದೇ ನನ್ನ ಪಾಲಿನ ದೊಡ್ಡ ಗೌರವ. ಈ ನೆನಪುಗಳು ನನ್ನ ಕೊನೆಯ ಕ್ಷಣದ ವರೆಗೂ ಜತೆಗಿರಲಿವೆ ಎಂದು ಒಬ್ರಿಯನ್ ಹೇಳಿದ್ದಾರೆ.

ಕೆವಿನ್ ಒಬ್ರಿಯನ್ 2011ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ದ ಕೇವಲ 50 ಎಸೆತಗಳಲ್ಲಿ ಶತಕ ಚಚ್ಚುವ ಮೂಲಕ ವಿಶ್ವದಾಖಲೆ ಬರೆದಿದ್ದರು. ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಅತಿವೇಗದ ಶತಕ ದಾಖಲೆ ಈಗಲೂ ಐರ್ಲೆಂಡ್ ಆಟಗಾರನ ಹೆಸರಿನಲ್ಲಿದೆ. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 328 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಐರ್ಲೆಂಡ್ 5 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಆ ಪಂದ್ಯದಲ್ಲಿ ಒಬ್ರಿಯನ್‌ 63 ಎಸೆತಗಳಲ್ಲಿ 113 ರನ್ ಚಚ್ಚಿದ್ದರು. 

ಚೊಚ್ಚಲ ಟೆಸ್ಟ್‌ನ 2 ಇನಿಂಗ್ಸಲ್ಲಿ ಅರ್ಧಶತಕ: ಶಫಾಲಿ ವರ್ಮಾ ದಾಖಲೆ

2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಕೆವಿನ್‌ 153 ಏಕದಿನ ಪಂದ್ಯಗಳನ್ನು ಆಡಿದ್ದು 3618 ರನ್‌ ಕಲೆಹಾಕಿದ್ದಾರೆ. ಜೊತೆಗೆ 114 ವಿಕೆಟ್‌ ಸಹ ಕಬಳಿಸಿದ್ದಾರೆ. 68 ಕ್ಯಾಚ್‌ಗಳನ್ನು ಹಿಡಿದಿರುವ ಕೆವಿನ್‌, ಅತಿಹೆಚ್ಚು ಕ್ಯಾಚ್‌ಗಳನ್ನು ಹಿಡಿದ ಐರ್ಲೆಂಡ್‌ ಆಟಗಾರ ಎನಿಸಿದ್ದಾರೆ. ಕೆವಿನ್‌ರ ಸಹೋದರ ನಿಯಾಲ್‌ ಓಬ್ರಿಯನ್‌ 2018ರಲ್ಲೇ ನಿವೃತ್ತಿ ಪಡೆದಿದ್ದರು.

Follow Us:
Download App:
  • android
  • ios