Asianet Suvarna News Asianet Suvarna News

IPL retention:ಕೊಹ್ಲಿ, ಮ್ಯಾಕ್ಸ್‌ವೆಲ್ ತಂಡದಲ್ಲಿ ಉಳಿಸಲು ಮುಂದಾದ RCB,ಕನ್ನಡಿಗನಿಗೂ ಸ್ಥಾನ ಸಾಧ್ಯತೆ!

  • ಐಪಿಎಲ್ 2022ರ ಹರಾಜಿಗೆ ಆರ್‌ಸಿಬಿ ತಂಡದ ತಯಾರಿ
  • ನಾಲ್ವರು ಆಟಗಾರರ ರಿಟೈನ್ ಮಾಡಿಕೊಳ್ಳಲು ಇದೇ ಅವಕಾಶ
  • ಎಬಿಡಿ ವಿದಾಯ ಕಾರಣ ಕೊಹ್ಲಿ ಜೊತೆ ಮ್ಯಾಕ್ಸ್‌ವೆಲ್‌ಗೆ ಚಾನ್ಸ್
  • ಕನ್ನಡಿದ ದೇವದತ್ ಪಡಿಕ್ಕಲ್ ಉಳಿಸಲು RCB ಪ್ಲಾನ್
IPL retention RCB set to retain 4 payers include Virat Kohli and Glenn Maxwell says report ckm
Author
Bengaluru, First Published Nov 26, 2021, 8:19 PM IST

ಬೆಂಗಳೂರು(ನ.26): IPL 2022 ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಆರಂಭಗೊಂಡಿದೆ. ಇದೀಗ ಮೆಘಾ ಹರಾಜಿಗೆ ಎಲ್ಲಾ ತಂಡಗಳು ಯಾರನ್ನು ತಂಡದಲ್ಲಿ ಉಳಿಸಬೇಕು, ಯಾವ ಆಟಗಾರನ ಹರಾಜಿನಲ್ಲಿ ಖರೀದಿಸಬೇಕು ಅನ್ನೋ ಲೆಕ್ಕಾಚಾರದಲ್ಲಿ ಮುಳುಗಿದೆ. ಇದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(royal challengers bangalore) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ(Virat Kohli) ಹಾಗೂ ಆಸೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಉಳಿಸಲು ಸಿದ್ಧತೆ ನಡಸಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.

ಆರ್‌ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಕಾರಣ ಈ ಅವಕಾಶ ಇದೀಗ ಗ್ಲೆನ್ ಮ್ಯಾಕ್ಸ್‌ವೆಲ್ ಪಾಲಾಗಿದೆ. ವಿರಾಟ್ ಕೊಹ್ಲಿ ಜೊತೆಗೆ ಗ್ಲೆನ್ ಮ್ಯಾಕ್ಸ್‌ವೆಲ್ ಉಳಿಸಲು(retention) ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಸಿದ್ಧತೆ ಮಾಡಿಕೊಂಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. 

IPL 2022: ಸಂಭಾವ್ಯ ವೇಳಾಪಟ್ಟಿ ಪ್ರಕಟ, ಚೆನ್ನೈನಲ್ಲಿ ಮೊದಲ ಪಂದ್ಯ..?

ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆ ಕನ್ನಡಿಗ ದೇವದತ್ ಪಡಿಕ್ಕಲ್(devdutt padikkal) ಉಳಿಸಲು ಆರ್‌ಸಿಬಿ ಸಿದ್ಧತೆ ನಡೆಸಿದೆ. ದೇವದತ್ ಪಡಿಕ್ಕಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸ್ಫೋಟಕ ಆರಂಭ ನೀಡುವ ಮೂಲಕ ತಂಡದ ಯಶಸ್ಸಿನಲ್ಲಿ ಪ್ರಮುಖ ಕಾರಣರಾಗಿದ್ದಾರೆ. ಯುವ ಬ್ಯಾಟ್ಸ್‌ಮನ್ ಉಳಿಸುವ ಸಾಧ್ಯತೆ ಹೆತ್ತು. ಇದರ ಜೊತೆಗೆ ಸುದೀರ್ಘ ವರ್ಷದಿಂದ ಬೆಂಗಳೂರು ತಂಡದ ಭಾಗವಾಗಿರುವ ಸ್ಪಿನ್ನರ್ ಯಜುವೇಂದ್ರ ಚಹಾಲ್(yuzvendra chahal) ಕೂಡ ತಂಡದಲ್ಲಿ ಉಳಿಯುವ ಸಾಧ್ಯತ ಇದೆ.

RCB ರಿಟೈನ್ ಮಾಡಲಿರುವ ಸಂಭವನೀಯ ನಾಲ್ವರು ಕ್ರಿಕೆಟಿಗರ ಪಟ್ಟಿ:
ವಿರಾಟ್ ಕೊಹ್ಲಿ
ಗ್ಲೆನ್ ಮ್ಯಾಕ್ಸ್‌ವೆಲ್
ದೇವದತ್ ಪಡಿಕ್ಕಲ್
ಯಜುವೇಂದ್ರ ಚಹಾಲ್

ಡಿಸೆಂಬರ್‌ನಲ್ಲಿ ಮೆಘಾ ಹರಾಜು ನಡೆಯಲಿದೆ. ಈ ಹರಾಜಿನಲ್ಲಿ 8 ಫ್ರಾಂಚೈಸಿಗಳ ಜೊತೆ ಹೊಸ ಎರಡು ಫ್ರಾಂಚೈಸಿ ಸೇರಿಕೊಳ್ಳುತ್ತಿದೆ. ಅಹಮ್ಮದಾಬಾದ್ ಹಾಗೂ ಲಕ್ನೋ ತಂಡಗಳಿಗೆ ಆರಂಭಿಕ 3 ಖರೀದಿ ಅವಕಾಶ ನೀಡಲಾಗಿದೆ. ಹೀಗಾಗಿ ತಂಡದ ಆಟಗಾರರು ಬಹುತೇಕ ಅದಲು ಬದಲಾಗಲಿದ್ದಾರೆ.

RCB video:ಮ್ಯೂಸಿಕ್ ವಿಡಿಯೋದಲ್ಲಿ ಜೊತೆಯಾಗಿ ಹೆಜ್ಜೆ ಹಾಕಿದ ಕೊಹ್ಲಿ ಎಬಿಡಿ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಟಗಾರರ ಖರೀದಿ ಜೊತೆಯಲ್ಲಿ ಹೊಸ ನಾಯಕನ ಹುಡುಕಾಟವು ಮಾಡಬೇಕಿದೆ. ಕಳೆದ ಐಪಿಎಲ್ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಗುಡ್‌ಬೈ ಹೇಳಿದ್ದಾರೆ. ಕೊಹ್ಲಿ ಆಟಗಾರನಾಗಿ ಮುಂದುವರಿಯಲಿದ್ದಾರೆ. ಹೀಗಾಗಿ ಹರಾಜಿನಲ್ಲಿ ನಾಯಕತ್ವ ಜವಾಬ್ದಾರಿ ನೀಡಬಲ್ಲ ಕ್ರಿಕೆಟಿಗನ ಖರೀದಿಸಲು ಆರ್‌ಸಿಬಿ ಮುಂದಾಗಿದೆ. 

2021ರಲ್ಲಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಈ ಮೂಲಕ 405 ರನ್ ಸಿಡಿಸಿದ್ದಾರೆ. ಮುಂದಿನ ಆವೃತ್ತಿಗಳಲ್ಲಿ ಕೊಹ್ಲಿ ನಾಯಕತ್ವ ಜವಾಬ್ದಾರಿ ಇಲ್ಲದ ಕಾರಣ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಸಾಧ್ಯತೆ ಇದೆ. IPL ಆರಂಭದಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ಕೊಹ್ಲಿ ಇದುವರೆಗೆ 207 ಪಂದ್ಯ ಆಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ 6283 ರನ್ ಸಿಡಿಸಿದ್ದಾರೆ. 5 ಶತಕ ಹಾಗೂ 42 ಅರ್ಧಶತಕ ಸಿಡಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸಂಭಾವನೆ ಪಡೆಯುವ ಆಟಗಾರ ವಿರಾಟ್ ಕೊಹ್ಲಿ. ಮಾಜಿ ನಾಯಕ ಸದ್ಯ 17 ಕೋಟಿ ರೂಪಾಯಿ ಪ್ರತಿ ಆವೃತ್ತಿಯಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 14.25 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಕಳೆದ ಆವೃತ್ತಿಯಲ್ಲಿ ಮ್ಯಾಕ್ಸ್‌ವೆಲ್ 513 ರನ್ ಸಿಡಿಸಿದ್ದಾರೆ. 

ನವೆಂಬರ್ 30ರೊಳಗೆ 8 ಫ್ರಾಂಚೈಸಿಗಳು ರಿಟೈನ್ ಆಟಗಾರರ ಲಿಸ್ಟ್ ಪ್ರಕಟಿಸಬೇಕಿದೆ.  ಹೀಗಾಗಿ ಇದೀಗ ಕುತೂಹಲ ಹೆಚ್ಚಾಗಿದೆ.ಮುಂಬೈ ಇಂಡಿಯನ್ಸ್ ಸೇರಿದಂತ ಇತರ ತಂಡಗಳು ಯಾರನ್ನು ಉಳಿಸಿಕೊಳ್ಳಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

Follow Us:
Download App:
  • android
  • ios