Asianet Suvarna News Asianet Suvarna News

IPL Auction 2022: ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡು ಅದೃಷ್ಟ ಪರೀಕ್ಷೆಗೆ ಮುಂದಾದ ಬಂಗಾಳ ಕ್ರೀಡಾ ಸಚಿವ..!

* ಐಪಿಎಲ್ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿದ ಮನೋಜ್ ತಿವಾರಿ

* ಮನೋಜ್ ತಿವಾರಿ ಪಶ್ಚಿಮ ಬಂಗಾಳದ ಕ್ರೀಡಾ ಹಾಗೂ ಯುವಜನ ಖಾತೆ ಸಚಿವ

* ಹರಾಜಿನಲ್ಲಿ ಮನೋಜ್ ತಿವಾರಿ ಮೂಲ ಬೆಲೆ 50 ಲಕ್ಷ ರುಪಾಯಿ ನಿಗದಿ

IPL Auction 2022 West Bengal sports minister Manoj Tiwary among shortlist kvn
Author
Bengaluru, First Published Feb 2, 2022, 2:22 PM IST

ಕೋಲ್ಕತಾ(ಫೆ.02): ಭಾರತದ ಕ್ರಿಕೆಟಿಗ ಹಾಗೂ ಪಶ್ಚಿಮ ಬಂಗಾಳದ ಕ್ರೀಡಾ ಮತ್ತು ಯುವಜನ ಖಾತೆ ಸಚಿವ ಮನೋಜ್ ತಿವಾರಿ (Manoj Tiwary) ಐಪಿಎಲ್ ಆಟಗಾರರ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೌದು, ಬಿಸಿಸಿಐ ಅಂತಿಮಗೊಳಿಸಿದ 590 ಆಟಗಾರರ ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಮನೋಜ್ ತಿವಾರಿ ಯಶಸ್ವಿಯಾಗಿದ್ದಾರೆ. ಬಹುನಿರೀಕ್ಷಿತ ಐಪಿಎಲ್ ಆಟಗಾರರ ಹರಾಜು (IPL Mega Auction) ಪ್ರಕ್ರಿಯೆಯು ಇದೇ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ (Bengaluru) ನಡೆಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಮನೋಜ್ ತಿವಾರಿ ಈ ಮೊದಲು ಡೆಲ್ಲಿ ಡೇರ್‌ಡೆವಿಲ್ಸ್(ಈಗ ಡೆಲ್ಲಿ ಕ್ಯಾಪಿಟಲ್ಸ್), ಕೋಲ್ಕತಾ ನೈಟ್ ರೈಡರ್ಸ್‌, ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್‌ ಹಾಗೂ ಪಂಜಾಬ್ ಕಿಂಗ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಮನೋಜ್ ತಿವಾರಿ ಇದುವರೆಗೂ ಐಪಿಎಲ್‌ನಲ್ಲಿ (IPL) ಒಟ್ಟು 98 ಪಂದ್ಯಗಳನ್ನಾಡಿ 7 ಅರ್ಧಶತಕ ಸಹಿತ 1,695 ರನ್ ಬಾರಿಸಿದ್ಧಾರೆ. 2018ರಲ್ಲಿ ಪಂಜಾಬ್ ಕಿಂಗ್ಸ್‌ ಪರ ಮನೋಜ್ ತಿವಾರಿ ಕೊನೆಯ ಐಪಿಎಲ್ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಐಪಿಎಲ್‌ ತಂಡದಲ್ಲಿ ಮನೋಜ್ ತಿವಾರಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಇದೀಗ 15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಮನೋಜ್ ತಿವಾರಿಯವರ ಮೂಲ ಬೆಲೆ 50 ಲಕ್ಷ ರುಪಾಯಿಗೆ ನಿಗದಿ ಪಡಿಸಲಾಗಿದೆ.

2020ರ ಐಪಿಎಲ್ ಆಟಗಾರರ ಹರಾಜಿನಲ್ಲಿಯೂ ಮನೋಜ್ ತಿವಾರಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಪಶ್ಚಿಮ ಬಂಗಾಳ ಮೂಲದ ಆಟಗಾರನನ್ನು ಖರೀದಿಸಲು ಯಾವುದೇ ಫ್ರಾಂಚೈಸಿಯು ಮನಸ್ಸು ಮಾಡಿರಲಿಲ್ಲ. 2018ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಮನೋಜ್ ತಿವಾರಿ ಒಂದು ಕೋಟಿ ರುಪಾಯಿಗೆ ಹರಾಜಾಗಿದ್ದರು. 

ಬಂಗಾಳ ಕ್ರಿಕೆಟ್ (West Bengal Cricket) ತಂಡದ ನಾಯಕರಾಗಿದ್ದ 36 ವರ್ಷದ ಮನೋಜ್ ತಿವಾರಿ 2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರವು ಮನೋಜ್ ತಿವಾರಿ ಅವರಿಗೆ ಕ್ರೀಡಾ ಹಾಗೂ ಯುವಜನ ಖಾತೆ ನೀಡಿದೆ.

IPL Auction: ಐಪಿಎಲ್‌ ಹರಾಜಿಗೆ 590 ಆಟಗಾರರು ಶಾರ್ಟ್‌ಲಿಸ್ಟ್‌..!

ಈ ವರ್ಷಾರಂಭದಲ್ಲಿ ಪಶ್ಚಿಮ ಬಂಗಾಳ ಕ್ರಿಕೆಟ್ ಮಂಡಳಿಯು ಪ್ರಕಟಿಸಿದ 21 ಆಟಗಾರರನ್ನೊಳಗೊಂಡ ರಣಜಿ ತಂಡದಲ್ಲಿ ಮನೋಜ್ ತಿವಾರಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ರಣಜಿ ಟೂರ್ನಿಯ ವೇಳಾಪಟ್ಟಿಯು ಇದೀಗ ಪರಿಷ್ಕರಣೆಗೊಂಡಿದೆ. ಇನ್ನು 2020ರಲ್ಲಿ ನಡೆದ ಸೌರಾಷ್ಟ್ರ ವಿರುದ್ದದ ರಣಜಿ ಟ್ರೋಫಿ ಫೈನಲ್‌ನಲ್ಲೂ ಮನೋಜ್ ತಿವಾರಿ ಪಶ್ಚಿಮ ಬಂಗಾಳ ತಂಡದ ಪರ ಕಣಕ್ಕಿಳಿದಿದ್ದರು. ಇದಾದ ಬಳಿಕ ಮನೋಜ್‌ ತಿವಾರಿ 2021ರ ಜನವರಿಯಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕಣಕ್ಕಿಳಿಯುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು.

ಮನೋಜ್ ತಿವಾರಿ ಭಾರತ ಪರ 12 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದ್ದಾರೆ. 2015ರಲ್ಲಿ ಕೊನೆಯ ಬಾರಿಗೆ ಮನೋಜ್ ತಿವಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು 125 ಪ್ರಥಮ ದರ್ಜೆ ಹಾಗೂ 163 ಲಿಸ್ಟ್ 'ಎ' ಪಂದ್ಯಗಳನ್ನಾಡಿ 14,000ಕ್ಕೂ ಅಧಿಕ ರನ್‌ಗಳನ್ನು ತಿವಾರಿ ಬಾರಿಸಿದ್ದಾರೆ.

ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕೂಡಾ ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದು, ಅರ್ಜುನ್ ತೆಂಡುಲ್ಕರ್ ಅವರ ಮೂಲ ಬೆಲೆ 20 ಲಕ್ಷ ರುಪಾಯಿಗಳೆಂದು ನಿಗದಿ ಪಡಿಸಲಾಗಿದೆ. ಕಳೆದ ಆವೃತ್ತಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ 20 ಲಕ್ಷ ರುಪಾಯಿ ಮೂಲ ಬೆಲೆಗೆ ಅರ್ಜುನ್ ತೆಂಡುಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಖರೀದಿಸಿತ್ತು.

Follow Us:
Download App:
  • android
  • ios