ಚೆನ್ನೈ(ಫೆ.18):  ಸಚಿನ್ ಬೇಬಿ, ರಜತ್ ಪಾಟೀದಾರ್ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಕೇರಳ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ಅವರನ್ನು ಖರೀದಿಸಿದೆ.  20 ಲಕ್ಷ ರುಪಾಯಿ ಮೂಲ ಬೆಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊಹಮ್ಮದ್ ಅಜರುದ್ದೀನ್ ಖರೀದಿಸಿದ್ದಾರೆ.

IPL Auction 2021: RCB ಸೇರಿಕೊಂಡ ಸಚಿನ್ ಹಾಗೂ ರಜತ್!

ಕೇರಳ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ದೇಸಿ ಕ್ರಿಕೆಟ್‌ನಲ್ಲಿ ಬಾರಿ ಸಂಚಲನ ಸೃಷ್ಟಿಸಿದ ಹೆಸರು.  ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮುಂಬೈ ವಿರುದ್ಧ 137 ರನ್ ಸಿಡಿಸಿ ಆಯ್ಕೆ ಸಮಿತಿ ಗಮನಸೆಳೆದಿದ್ದರು.