ಚೆನ್ನೈ(ಫೆ.18):  ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದ ಕರ್ನಾಟಕದ ಆಟಗಾರ ಕೆ ಗೌತಮ್ ಕೋಟಿ ಮೊತ್ತಕ್ಕೆ ಸೇಲಾಗಿದ್ದಾರೆ. ಯುವ ಕನ್ನಡಿಗ ಆಟಗಾರ ದುಬಾರಿ ಮೊತ್ತಕ್ಕೆ ಸೇಲಾಗೋ ಮೂಲಕ ದಾಖಲೆ ಬರೆದಿದ್ದಾರೆ.

IPL Auction 2021: RCB ಸೇರಿಕೊಂಡ ಸಚಿನ್ ಹಾಗೂ ರಜತ್!.

ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ಸೈನ್ ರೈಸರ್ಸ್ ಹೈದರಾಬಾದ್ ತೀವ್ರ ಪೈಪೋಟಿ ನಡೆಸಿತು. ಅಂತಿಮವಾಗಿ 9.25 ಕೋಟಿ ರೂಪಾಯಿ ನೀಡಿ ಸಿಎಸ್‌ಕೆ ತಂಡ ಖರೀದಿಸಿತು. ಈ ಮೂಲಕ ಕರ್ನಾಟಕದ ಯುವ ಆಟಾಗರ ಗರಿಷ್ಠ ಮೊತ್ತಕ್ಕೆ ಬಿಕರಿಯಾಗೋ ಮೂಲಕ ದಾಖಲೆ ಬರೆದಿದ್ದಾರೆ.

20 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಕೆ ಗೌತಮ್, ದೇಸಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಪ್ರತಿಭೆ.