ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್‌ ನೋಡುವುದಕ್ಕಿಂತ ಫ್ಲೈಟ್‌ನಲ್ಲಿ ಫಾರಿನ್ ಟೂರ್ ಹೋಗೋದೇ ಚೀಪ್..!

ಬೇರೆ ಬೇರೆ ಕಾರಣಗಳಿಂದ ಐಪಿಎಲ್ ಟಿಕೆಟ್ ದರದಲ್ಲಿ ವ್ಯತ್ಯಾಸವಿರುತ್ತದೆ. ಪಂದ್ಯ ನಡೆಯುವ ಸ್ಥಳ, ಸಮಯ, ಮುಖಾಮುಖಿಯಾಗಲಿರುವ ತಂಡಗಳ, ಆ ತಂಡಗಳ ಬ್ರ್ಯಾಂಡ್‌ ವ್ಯಾಲ್ಯೂ ಆಧಾರದಲ್ಲಿ ಟಿಕೆಟ್ ದರದಲ್ಲಿ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ತವರಿನ ಚೆಪಾಕ್ ಮೈದಾನದಲ್ಲಿನ ಒಂದು ಪಂದ್ಯದ ಕನಿಷ್ಠ ಟಿಕೆಟ್ ಬೆಲೆ 1,700 ರುಪಾಯಿಗಳಾಗಿದ್ದರೆ, ಗರಿಷ್ಠ ಟಿಕೆಟ್ ಬೆಲೆ ಕೇವಲ 6,000 ರುಪಾಯಿಗಳು ಮಾತ್ರ. 

IPL 2024 ticket price Flying to Istanbul cheaper than watching RCB match in Bengaluru kvn

ಬೆಂಗಳೂರು(ಏ.17): ನೀವೇನಾದರೂ ಕೊನೆಯ ಕ್ಷಣದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನ ಕಾರ್ಪೋರೇಟ್‌ ಬಾಕ್ಸ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯವನ್ನು ನೋಡುಬೇಕು ಅಂದುಕೊಂಡರೆ, ಎರಡೆರಡು ಬಾರಿ ಆಲೋಚಿಸಿ. ಯಾಕೆಂದರೆ, ಆರ್‌ಸಿಬಿ ಪಂದ್ಯವನ್ನು ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಕಾರ್ಪೋರೇಟ್ ಬಾಕ್ಸ್‌ನಲ್ಲಿ ಒಂದು ಪಂದ್ಯ ನೋಡಲು ಖರ್ಚು ಮಾಡುವ ಹಣದಲ್ಲಿ ನೀವು ಫ್ಲೈಟ್‌ನಲ್ಲಿ ಬೇಸಿಗೆ ರಜೆಗಾಗಿ ಟರ್ಕಿಯ ಇಸ್ತಾಂಬುಲ್‌ಗೆ ಹೋಗಿ ಬರಬರಬಹುದು..! ಇದು ನಿಮಗೆ ಕೇಳಲು ಅಚ್ಚರಿ ಎನಿಸಿದರೂ ಸತ್ಯ.

ಹೌದು, ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕ್ರೇಝ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದ ದಿಗ್ಗಜ ಆಟಗಾರರು ಸೇರಿದಂತೆ ವಿದೇಶಿ ಆಟಗಾರರು ಈ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಫ್ರಾಂಚೈಸಿಗಳು ದುಡ್ಡು ಮಾಡಿಕೊಳ್ಳಲು ಮುಂದಾಗಿದ್ದು, ಪಂದ್ಯದ ಟಿಕೆಟ್ ದರ ಮುಗಿಲು ಮುಟ್ಟಿದೆ.

ಬೆಂಗಳೂರು-ಮುಂಬೈ ಪಂದ್ಯದ ಟಾಸ್ ಟ್ಯಾಂಪರಿಂಗ್ ಆಗಿದ್ಯಾ..? ಪ್ಯಾಟ್ ಕಮಿನ್ಸ್ ಬಳಿ ಡು ಪ್ಲೆಸಿಸ್ ಹೇಳಿದ್ದೇನು..?

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿತ್ತು. ಮಾರ್ಚ್ 25ರಂದು ನಡೆದ ಈ ಹೈವೋಲ್ಟೇಜ್ ಪಂದ್ಯದ ಒಂದು ಕಾರ್ಪೋರೇಟ್ ಬಾಕ್ಸ್ ಟಿಕೆಟ್‌ ಬೆಲೆ ಬರೋಬ್ಬರಿ 52,938 ರುಪಾಯಿಗಳು..! ಹಾಗಂತೂ ಎಲ್ಲಾ ಟಿಕೆಟ್ ಬೆಲೆ ಇಷ್ಟು ಇರುವುದಿಲ್ಲ, ಆದರೆ ಕಾರ್ಪೋರೇಟ್ ಟಿಕೆಟ್ ಬೆಲೆಯಲ್ಲಿ ನೀವು ಒಂದು ಫಾರಿನ್ ಟ್ರಿಪ್ ಮಾಡಬಹುದು.

ಬೇರೆ ಬೇರೆ ಕಾರಣಗಳಿಂದ ಐಪಿಎಲ್ ಟಿಕೆಟ್ ದರದಲ್ಲಿ ವ್ಯತ್ಯಾಸವಿರುತ್ತದೆ. ಪಂದ್ಯ ನಡೆಯುವ ಸ್ಥಳ, ಸಮಯ, ಮುಖಾಮುಖಿಯಾಗಲಿರುವ ತಂಡಗಳ, ಆ ತಂಡಗಳ ಬ್ರ್ಯಾಂಡ್‌ ವ್ಯಾಲ್ಯೂ ಆಧಾರದಲ್ಲಿ ಟಿಕೆಟ್ ದರದಲ್ಲಿ ವ್ಯತ್ಯಾಸವಾಗುತ್ತದೆ. ಉದಾಹರಣೆಗೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ತವರಿನ ಚೆಪಾಕ್ ಮೈದಾನದಲ್ಲಿನ ಒಂದು ಪಂದ್ಯದ ಕನಿಷ್ಠ ಟಿಕೆಟ್ ಬೆಲೆ 1,700 ರುಪಾಯಿಗಳಾಗಿದ್ದರೆ, ಗರಿಷ್ಠ ಟಿಕೆಟ್ ಬೆಲೆ ಕೇವಲ 6,000 ರುಪಾಯಿಗಳು ಮಾತ್ರ. 

ಇನ್ನು ಡೆಲ್ಲಿ ಹಾಗೂ ಪಂಜಾಬ್‌ನಲ್ಲಿ ನಡೆಯಲಿರುವ ಪಂದ್ಯಗಳ ಟಿಕೆಟ್ ಬೆಲೆ ಕನಿಷ್ಠ 2000 ರುಪಾಯಿನಿಂದ ಹಿಡಿದು ಗರಿಷ್ಠ 5000 ರುಪಾಯಿಗಳೊಳಗೆ ಇದೆ. ಇದೇ ಮೊದಲ ಬಾರಿಗೆ ಪಂಜಾಬ್ ಕಿಂಗ್ಸ್ ತಂಡವು ಮುಲ್ಲಾನ್‌ಪುರವನ್ನು ತನ್ನ ತವರಿನ ಸ್ಟೇಡಿಯಂ ಆಗಿಸಿಕೊಂಡಿದ್ದು, ಇಲ್ಲಿ ಕನಿಷ್ಠ ಟಿಕೆಟ್ ಬೆಲೆ 750 ರುಪಾಯಿಗಳಾಗಿದ್ದರೇ, ಗರಿಷ್ಠ ಟಿಕೆಟ್ ಬೆಲೆ 9,000 ರುಪಾಯಿಗಳಾಗಿದೆ.

ಈ ಕುರಿತಂತೆ ಮಾತನಾಡಿರುವ ಪಂಜಾಬ್ ಕಿಂಗ್ಸ್‌ನ ಅಧಿಕಾರಿಯೊಬ್ಬರು, "ಚಂಢೀಗಢದಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್ ಬೆಲೆ 1000 ರುಪಾಯಿಗಳಾಗಿದ್ದರೇ, ಅದೇ ಪಂದ್ಯ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದರೆ, ಒಂದು ಟಿಕೆಟ್ ಬೆಲೆ 5000 ರುಪಾಯಿಗಳಿರುತ್ತದೆ. ಇದು ಬೇಡಿಕೆ ಹಾಗೂ ಪೂರೈಕೆ ನಿಯಮವನ್ನು ಅವಲಂಭಿಸಿದೆ. ಮುಂಬೈನ ಅಭಿಮಾನಿ 5000 ರುಪಾಯಿ ಕೊಟ್ಟು ಬೇಕಿದ್ದರೂ ಪಂದ್ಯ ನೋಡಲು ರೆಡಿ ಇರುತ್ತಾನೆ, ಆದರೆ ಮೊಹಾಲಿಯ ವ್ಯಕ್ತಿ ಒಂದು ಪಂದ್ಯಕ್ಕಾಗಿ ಅಷ್ಟು ಖರ್ಚು ಮಾಡಲು ಮುಂದಾಗುವುದಿಲ್ಲ" ಎಂದು ಹೇಳಿದ್ದಾರೆ.

IPL 2024 ಆರ್‌ಸಿಬಿಗೆ ಅರ್ಧದಲ್ಲೇ ಕೈಕೊಟ್ಟ ಮ್ಯಾಕ್ಸ್‌ವೆಲ್‌..! ಆದ್ರೂ ಒಂದು ಮಾತು ಕೊಟ್ಟ ಸ್ಟಾರ್ ಆಲ್ರೌಂಡರ್

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನಂತಹ ಫ್ರಾಂಚೈಸಿಗೆ ನಂಬಿಗಸ್ಥ ಅಭಿಮಾನಿಗಳೇ ಅವರ ಬಂಡವಾಳವಾಗಿದ್ದಾರೆ. ಆರ್‌ಸಿಬಿ ಫ್ರಾಂಚೈಸಿಯು ಅದ್ಭುತವಾಗಿ ತನ್ನ ಬ್ರ್ಯಾಂಡ್ ಪ್ರಮೋಷನ್ ಮಾಡುತ್ತಾ ಬಂದಿದೆ. ಈ ಕಾರಣಕ್ಕಾಗಿಯೇ ಕಾರ್ಪೊರೇಟ್‌ ಬಾಕ್ಸ್‌ನ ಟಿಕೆಟ್‌ವೊಂದರ ಬೆಲೆ 42,350 ರುಪಾಯಿಗಳಿಂದ ಇದೀಗ 52,938 ರುಪಾಯಿಗೆ ಏರಿದ್ದರಲ್ಲಿ ಅಚ್ಚರಿಯಿಲ್ಲ. ಇನ್ನು ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡದ ತವರು ಮೈದಾನವಾದ ಮುಂಬೈನಲ್ಲೂ ಐಪಿಎಲ್ ಟಿಕೆಟ್ ಬೇಡಿಕೆ ಬೆಂಗಳೂರಿನಲ್ಲಿದ್ದಷ್ಟು ಇಲ್ಲ. ವಾಂಖೇಡೆ ಸ್ಟೇಡಿಯಂನಲ್ಲಿ ಕನಿಷ್ಠ ಟಿಕೆಟ್ ಬೆಲೆ 990 ರುಪಾಯಿಗಳಾಗಿದ್ದರೇ, ಗರಿಷ್ಠ ಟಿಕೆಟ್ ಬೆಲೆ 18,000 ರುಪಾಯಿಗಳಾಗಿವೆ.
 

Latest Videos
Follow Us:
Download App:
  • android
  • ios