ಕುಟುಂಬ, ಮುಂಬೈ ಇಂಡಿಯನ್ಸ್ ಜೊತೆ ರೋಹಿತ್ ಶರ್ಮಾ ಹೋಳಿ ಆಚರಣೆ, ವಿಡಿಯೋ ವೈರಲ್!
ದೇಶ ವಿದೇಶಗಳಲ್ಲಿ ಹೋಳಿ ಹಬ್ಬ ಆಚರಿಸಲಾಗಿದೆ. ಬಣ್ಣ ಒಕುಳಿಯಲ್ಲಿ ಹಲವರು ಮಿಂದೆದ್ದಿದ್ದಾರೆ. ಮುಂಬೈ ಇಂಡಿಯನ್ಸ್ ಕೂಡ ಅದ್ದೂರಿಯಾಗಿ ಹೋಳಿ ಹಬ್ಬ ಆಚರಿಸಿದೆ. ಕುಟುಂಬ ಹಾಗೂ ತಂಡದ ಜೊತೆ ರೋಹಿತ್ ಶರ್ಮಾ ಹಬ್ಬ ಆಚರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಅಹಮ್ಮದಾಬಾದ್(ಮಾ.25) ಐಪಿಎಲ್ ಟೂರ್ನಿಯಲ್ಲಿ ಬ್ಯೂಸಿಯಾಗಿರುವ ತಂಡಗಳು ಇದೀಗ ಬಣ್ಣಗಳ ಹಬ್ಬ ಹೋಳಿ ಆಚರಿಸಿದೆ. ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ತಂಡದ ಜೊತೆ ಹಾಗೂ ಕುಟುಂಬದ ಜೊತೆ ಹೋಳಿ ಹಬ್ಬ ಆಚರಿಸಿದ್ದಾರೆ. ಮುಂಬೈ ಇಂಡಿಯನ್ಸ್ ಆಟಗಾರರಿಗೆ ಅದ್ಧೂರಿಯಾಗಿ ಹೋಳಿ ಹಬ್ಬ ಆಚರಿಸಿದೆ. ಈ ಆಚರಣೆಯಲ್ಲಿ ರೋಹಿತ್ ಶರ್ಮಾ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಕುಟುಂಬ ಹಾಗೂ ತಂಡದ ಸಹ ಆಟಗಾರರ ಜೊತೆ ಹೋಳಿ ಆಚರಿಸಿದ ವಿಡಿಯೋ ಭಾರಿ ವೈರಲ್ ಆಗಿದೆ.
ಆರಂಭದಲ್ಲಿ ಬಣ್ಣದ ಪುಡಿ ಎರಚಿ ಹೋಳಿ ಆಚರಿಸಲಾಯಿತು. ಪತ್ನಿ ಹಾಗೂ ಪುತ್ರಿ ಜೊತೆಗೆ ಮಕ್ಕಳಾದ ರೋಹಿತ್ ಶರ್ಮಾ ಬಣ್ಣ ಹಚ್ಚಿ ಸಂಭ್ರಮಿಸಿದರು. ಬಳಿಕ ತಂಡದ ಸಹ ಆಟಗಾರರಿಗೂ ಬಣ್ಣ ಹಚ್ಚಿದ್ದಾರೆ. ಇತ್ತ ಪೈಪ್ ಮೂಲಕ ನೀರು ಹಾಕಿ ಹೋಳಿ ಹಬ್ಬ ಆಚರಣೆಯನ್ನು ಮತ್ತಷ್ಟು ರೋಚಕವಾಗಿಸಿದ್ದಾರೆ. ಮುಂಬೈ ಇಂಂಡಿಯನ್ಸ್ ತಂಡ ಹೋಳಿ ಹಬ್ಬ ಆಚರಣೆ ವಿಡಿಯೋ ಪೋಸ್ಟ್ ಮಾಡಿದೆ.
IPL 2024 Full Schedule: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಫೈನಲ್‌ಗೆ ಚೆನ್ನೈ ಆತಿಥ್ಯ
ಹೋಳಿ ಆಚರಣೆಯಿಂದ ಇಡೀ ಆವರಣ ಬಣ್ಣದಲ್ಲಿ ಮುಳುಗಿತ್ತು. ರೋಹಿತ್ ಶರ್ಮಾ ಸೇರಿದಂತೆ ಆಟಗಾರರು ಬಣ್ಣದಲ್ಲಿ ಗುರತೇ ಸಿಗದಷ್ಟು ಬದಲಾಗಿದ್ದರು. ಅದ್ಧೂರಿ ಹೋಳಿ ಆಚರಣೆಯಲ್ಲಿ ವಿದೇಶಿ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಬಣ್ಮಗಳನ್ನು ಎರಚಿ ಸಂಭ್ರಮಪಟ್ಟಿದ್ದಾರೆ.
Happy Holi, everyone! 😍🎨
— Mumbai Indians (@mipaltan) March 25, 2024
Brb, admin needs to get the phone repaired 🥲#MumbaiMeriJaan #MumbaiIndians | @ImRo45 pic.twitter.com/4I0aIqnvru
ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲಿ ಮುಗ್ಗರಿಸಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಮುಂಬೈ ಸೋಲು ಕಂಡಿದೆ. ಈ ಪಂದ್ಯದ ಸೋಲಿನ ಜೊತೆಗೆ ಮುಂಬೈ ಇಂಡಿಯನ್ಸ್ ನಾಯಕತ್ವ ಕೂಡ ಭಾರಿ ಚರ್ಚೆಯಾಗುತ್ತಿದೆ. ಗುಜರಾತ್ ಟೈಟಾನ್ಸ್ ತಂಡ ತೊರೆದು ಮುಂಬೈ ಇಂಡಿಯನ್ಸ್ ಸೇರಿಕೊಂಡ ಹಾರ್ದಿಕ್ ಪಾಂಡ್ಯ ವಿರುದ್ದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇತ್ತ ಹೈದರಾಬಾದ್ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೊನೆಯ ಕ್ಷಣದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆದ ಕಾರಣ ಆಕ್ರೋಶಗೊಂಡಿದ್ದಾರೆ. ಇಷ್ಟೇ ಅಲ್ಲ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧದ ಗೆಲವನ್ನು ಸಂಭ್ರಮಿಸಿದ್ದಾರೆ.
ನೀನು ಬೌಂಡರಿ ಗೆರೆಯಲ್ಲಿ ಫೀಲ್ಡಿಂಗ್ ಮಾಡು...! ರೋಹಿತ್ ಶರ್ಮಾಗೆ ಶಾಕ್ ಕೊಟ್ಟ ಹಾರ್ದಿಕ್ ಪಾಂಡ್ಯ..! ನೆಟ್ಟಿಗರು ಗರಂ
ಟಾಸ್ ವೇಳೆ ಪಾಂಡ್ಯ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಪಂದ್ಯದ ನಡುವೆ ರೋಹಿತ್ ಶರ್ಮಾರನ್ನು ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಕಳುಹಿಸಿದ ರೀತಿಗೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಇದರ ಜೊತೆಗೆ ಸೋಲನ್ನು ಟ್ರೋಲ್ ಮಾಡುತ್ತಿದ್ದಾರೆ. ರೋಹಿತ್ ಶರ್ಮಾಗೆ ನಾಯಕತ್ವ ನೀಡಿ ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.