IPL 2024 ಸೋಲಿಲದ ರಾಯಲ್ಸ್‌ನ್ನು ಸೋಲಿಸುತ್ತಾ ಆರ್‌ಸಿಬಿ?

ಆರ್‌ಸಿಬಿಗೆ ಹ್ಯಾಟ್ರಿಕ್ ಪಂದ್ಯ ಗೆದ್ದಿರುವ ರಾಜಸ್ಥಾನದ ಕಠಿಣ ಸವಾಲು | 
ಸುಧಾರಿತ ಪ್ರದರ್ಶನ ನೀಡದಿದ್ದರೆ ಜೈಪುರದಲ್ಲೂ ಸೋಲೇ ಗತಿ ಬದಲಾವಣೆಯೊಂದಿಗೆ ಕಣಕ್ಕಿಳಿವ ನಿರೀಕ್ಷೆ | 
ಈ ಪಂದ್ಯದಲ್ಲಾದರೂ ವಿಲ್ ಜ್ಯಾಕ್ಸ್‌ಗೆ ಸಿಗುತ್ತಾ ಚಾನ್ಸ್? |

IPL 2024 Rajasthan Royals take on RCB at Jaipur kvn

ಜೈಪುರ: ಹೊಸ ಅಧ್ಯಾಯದ ನಿರೀಕ್ಷೆಯೊಂದಿಗೆ ಕಣಕ್ಕಿಳಿದರೂ ತನ್ನ ಹಳೆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಆರ್‌ಸಿಬಿ ಈಗ ಗೆಲುವಿಗಾಗಿ ಹುಡುಕಾಟ ನಡೆಸುತ್ತಿದೆ. ಅದೇನೇ ಮಾಡಿದರೂ ಸೋಲು ಮಾತ್ರ ಆರ್‌ಸಿಬಿಯ ಬೆಂಬಿಡದೆ ಕಾಡುತ್ತಿದ್ದು, ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ಜಯದ ಹಳಿಗೆ ಮರಳುವ ಕಾತರದಲ್ಲಿದೆ. ಆದರೆ ರಾಯಲ್ಸ್‌ನ ತವರು ಜೈಪುರದಲ್ಲಿ ಪಂದ್ಯ ಗೆಲ್ಲುವುದು ತನ್ನ ಈ ವರೆಗಿನ ಪ್ರದರ್ಶನದಿಂದ ಅಸಾಧ್ಯ ಎಂಬ ಅರಿವು ಆರ್‌ಸಿಬಿಗೆ ಇದೆ.

ಆರ್‌ಸಿಬಿಈವರೆಗೆ 4 ಪಂದ್ಯಗಳನ್ನಾಡಿದ್ದು, ಒಂದರಲ್ಲಿ ಮಾತ್ರ ಗೆದ್ದಿದೆ. ತವರಿನ 2 ಪಂದ್ಯಗಳಲ್ಲೇ ಸೋತಿದ್ದು ತಂಡದ ಹೀನಾಯ ಸ್ಥಿತಿಗೆ ಹಿಡಿದ ಕೈಗನ್ನಡಿ, ವಿರಾಟ್ ಕೊಹ್ಲಿಯನ್ನು ಬಿಟ್ಟರೆ ಇತರ ಯಾರೊಬ್ಬರೂ ಆರ್‌ಸಿಬಿ ಗೆಲ್ಲಬೇಕೆಂದು ಆಡುವಂತೆ ತೋರುತ್ತಿಲ್ಲ. ಫಾಫ್ ಡು ಪ್ಲೆಸಿ, ಮ್ಯಾಕ್ಸ್‌ವೆಲ್, ಗ್ರೀನ್ ಜೊತೆ ದೇಸಿ ಕ್ರಿಕೆಟ್ ತಾರೆ ಪಾಟೀದಾರ್ ಕೂಡಾ ವಿಫಲರಾಗುತ್ತಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಇಂಗ್ಲೆಂಡ್‌ನ ಪ್ರತಿಭೆ ವಿಲ್ ಜ್ಯಾಕ್ಸ್‌ರನ್ನು ಆಡಿಸಿದರೆ ಬ್ಯಾಟಿಂಗ್ ಜೊತೆ ಬೌಲಿಂಗ್ ವಿಭಾಗಕ್ಕೂ ನೆರವಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಆದರೆ ಅವರಿಗೆ ಫ್ರಾಂಚೈಸಿ ಅವಕಾಶ ನೀಡುತ್ತದೆಯೇ ಎಂಬ ಕುತೂಹಲ ವಿದೆ. 

IPL 2024 ಸಿಎಸ್‌ಕೆ ಮಣಿಸಿದ ಹೈದರಾಬಾದ್, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಏರಿಕೆ!

ಇನ್ನು ಮಹಿಪಾಲ್ ಲೊಮೊರ್, ದಿನೇಶ್ ಕಾರ್ತಿಕ್ ಕೆಳ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸುವ ನಿರೀಕ್ಷೆ ಯಿದ್ದರೂ, ರಾಜಸ್ಥಾನದ ಬಲಿಷ್ಠ ಬೌಲಿಂಗ್ ಪಡೆ ಯನ್ನು ಯಾವ ರೀತಿ ಹಿಮ್ಮೆಟ್ಟಿಸುತ್ತಾರೆ ಎಂಬ ಕಾತರ ಅಭಿಮಾನಿಗಳಲ್ಲಿದೆ. ಆರ್‌ಸಿಬಿಯ ಬೌಲಿಂಗ್ ವಿಭಾಗ ಕೂಡಾ ಮೊನಚು ಕಳೆದು ಕೊಂಡಿದ್ದು, ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಉತ್ತಮ ಪ್ರದರ್ಶನದ ಹೊರತಾಗಿ ಯೂ ಕಳೆದ ಪಂದ್ಯದಲ್ಲಿ ಬೆಂಚ್ ಕಾಯ್ದಿದ್ದ ಕನ್ನಡಿಗ ವೇಗಿ ವೈಶಾಕ್, ಎಲ್ಲಾ ಪಂದ್ಯದಿಂದಲೂ ಹೊರಗುಳಿದಿದ್ದ ಮನೋಜ್ ಈ ಬಾರಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. 

ಬ್ಯಾಟಿಂಗ್ ಚಿಂತೆ: ರಾಜಸ್ಥಾನ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದರೂ ತಂಡದಲ್ಲಿ ಕೆಲ ಸಮಸ್ಯೆಗಳಿರುವುದು ಸುಳ್ಳಲ್ಲ. ಯಶಸ್ವಿ ಜೈಸ್ವಾಲ್, ಜೋಶ್ ಬಟ್ಲರ್ ಇನ್ನಷ್ಟೇ ತಮ್ಮ ನೈಜ ಪ್ರದರ್ಶನ ತೋರಬೇಕಿದೆ. ಆದರೆ ರಿಯಾನ್ ಪರಾಗ್ ಲಯಕ್ಕೆ ಮರಳಿ ರುವುದು ತಂಡಕ್ಕೆ ಪ್ಲಸ್ ಪಾಯಿಂಟ್. ಜೊತೆಗೆ ನಾಯಕ ಸ್ಯಾಮನ್ ಕೂಡಾ ಅಬ್ಬರಿಸ ಬಲ್ಲರು. ಜುರೆಲ್, ಹೆಟ್ಮೇಯರ್‌ ಮೇಲೂ ನಾಯಕನಿಗೆ ಭಾರೀ ನಿರೀಕ್ಷೆಯಿದೆ. ಇನ್ನು, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಚಹಲ್, ಅಶ್ವಿನ್, ಆವೇಶ್ ಖಾನ್, ನಂಡ್ರೆ ಬರ್ಗರ್ ಅವರನ್ನೊಳಗೊಂಡ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು, ಆರ್‌ಸಿಬಿ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

Watch: ಪ್ರ್ಯಾಕ್ಟೀಸ್‌ ಜೆರ್ಸಿಯಲ್ಲಿ ಟ್ರೋಫಿ ಸ್ವೀಕರಿಸಿ, ಬಾಂಗ್ಲಾಕ್ಕೆ ಕಿಚಾಯಿಸಿದ ಶ್ರೀಲಂಕಾ!

ಪಿಚ್ ರಿಪೋರ್ಟ್: ಜೈಪುರ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಮತ್ತೊಮ್ಮೆ ದೊಡ್ಡ ಮೊತ್ತ ಹರಿಯುವ ಸಾಧ್ಯತೆ ಹೆಚ್ಚು. ಇಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚಿನ ಯಶಸ್ಸು ಗಳಿಸಿದ ಉದಾಹರಣೆ ಇದೆ. ಆದರೆ ಈ ಬಾರಿ ಐಪಿಎಲ್ 2 ಪಂದ್ಯಗಳಲ್ಲೂ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದೆ.

ಪಂದ್ಯ: ಸಂಜೆ. 7:30ಕ್ಕೆ
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

Latest Videos
Follow Us:
Download App:
  • android
  • ios