IPL 2024 ಪಂಜಾಬ್ ವಿರುದ್ಧ ಲಖನೌ ಸ್ಫೋಟಕ ಬ್ಯಾಟಿಂಗ್, 200 ರನ್ ಟಾರ್ಗೆಟ್!
ಲಖನೌ ಹಾಗೂ ಪಂಜಾಬ್ ನಡುವಿನ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಕುಸಿತದ ನಡುವೆಯೂ ಕ್ವಿಂಟನ್ ಡಿಕಾಕ್, ನಾಯಕ ನಿಕೋಲಸ್ ಪೂರನ್,ಕ್ರುನಾಲ್ ಪಾಂಡ್ಯ ಅಬ್ಬರಿಂದ ಲಖನೌ ಸೂಪರ್ ಜೈಂಟ್ಸ್ 199 ರನ್ ಸಿಡಿಸಿದೆ.
ಲಖನೌ(ಮಾ.30) ಪಂಜಾಬ್ ಕಿಂಗ್ಸ್ ವಿರುದ್ಧ ಇಂಜುರಿ ಚೇತರಿಸಿಕೊಂಡು ಇಂಪಾಕ್ಟ್ ಪ್ಲೇಯರ್ ಬ್ಯಾಟಿಂಗ್ ಇಳಿದರೂ ಕೆಎಲ್ ರಾಹುಲ್ ಅಬ್ಬರಿಸಲು ಸಾಧ್ಯವಾಗಲಿಲ್ಲ.ಇತ್ತ ಕ್ವಿಂಟನ್ ಡಿಕಾಕ್ , ನಾಯಕ ನಿಕೋಲಸ್ ಪೂರನ್ ಹಾಗೂ ಕ್ರುನಾಲ್ ಪಾಂಡ್ಯ ಅಬ್ಬರದ ಬ್ಯಾಟಿಂಗ್‌ನಿಂದ ಲಖನೌ ಸೂಪರ್ ಜೈಂಟ್ಸ್ 8 ವಿಕೆಟ್ ನಷ್ಟಕ್ಕೆ 199 ರನ್ ಸಿಡಿಸಿದೆ. ಪ್ರಮುಖ ಬ್ಯಾಟ್ಸ್‌ಮನ್‌ಗಳ ಅಬ್ಬರದಿಂದ ಲಖನೌ ಉತ್ತಮ ಮೊತ್ತ ಸಿಡಿಸಿದೆ. ಇದೀಗ 200 ರನ್ ಟಾರ್ಗೆಟ್ ಚೇಸ್ ಮಾಡಲು ಪಂಜಾಬ್ ಸಜ್ಜಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಲಖನೌ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕೆಎಲ್ ರಾಹುಲ್ 15 ರನ್ ಸಿಡಿಸಿ ನಿರ್ಗಮಿಸಿದರು. ಲಖನೌ 35 ರನ್‌ಗಳಿಗೆ ಮೊದಲ ವಿಕೆಟ್ ಕಳೆದಕೊಂಡಿತು. ಇದರ ಬೆನ್ನಲ್ಲೇ ದೇವದತ್ ಪಡಿಕ್ಕಲ್ ವಿಕೆಟ್ ಪತನಗೊಂಡಿತು. ಪಡಿಕ್ಕಲ್ ಕೇವಲ 9 ರನ್ ಸಿಡಿಸಿ ನಿರ್ಗಮಿಸಿದರು. ಕ್ವಿಂಟನ್ ಡಿಕಾಕ್ ಹೋರಾಟ ಮುಂದವರಿಸಿದರೆ, ಇತರರಿಂದ ನಿರೀಕ್ಷಿತ ಸಾಥ್ ಸಿಗಲಿಲ್ಲ. ಮಾರ್ಕಸ್ ಸ್ಟೊಯ್ನಿಸ್ 19 ರನ್ ಕಾಣಿಕೆ ನೀಡಿದರು.
1500+ ಸಿಕ್ಸರ್ ಸಿಡಿಸಿ 2ನೇ ಸ್ಥಾನದಲ್ಲಿದ್ರೂ RCB ಕಪ್ ಗೆದ್ದಿಲ್ಲ, ಫಸ್ಟ್ ಪ್ಲೇಸಲ್ಲಿರೋ ತಂಡ ಕಪ್ ಗೆದ್ದಿದ್ಯಾ?
ಹೋರಾಟ ನೀಡಿದ ಡಿಕಾಕ್ ಹಾಫ್ ಸೆಂಚುರಿ ಸಿಡಿಸಿದರು. ನಾಯಕ ನಿಕೋಲಸ್ ಪೂರನ್ ಜೊತೆ ಸೇರಿ ಲಖನೌ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಡಿಕಾಕ್ 51 ರನ್ ಸಿಡಿಸಿ ಔಟಾದರು. ಇತ್ತ ಪೂರನ್ ಅಬ್ಬರ ಆರಂಭಗೊಂಡಿತು. ಬೌಂಡರಿ ಸಿಕ್ಸರ್ ಮೂಲಕ ಅಬ್ಬರಿಸಿದ ಪೂರನ್ 21 ಎಸೆತದಲ್ಲಿ 42 ರನ್ ಸಿಡಿಸಿದರು. ಪೂರನ್ ಸ್ಫೋಟಕ ಬ್ಯಾಟಿಂಗ್ ಲಖನೌ ತಂಡಕ್ಕೆ ನೆರವಾಯಿತು.
ಆಯುಷ್ ಬದೋನಿ ಕೇವಲ 8 ರನ್ ಸಿಡಿಸಿ ಔಟಾದರು. ಆದರೆ ಕ್ರುನಾಲ್ ಪಾಂಡ್ಯ ಸ್ಪೋಟಕ ಬ್ಯಾಟಿಂಗ್‌ನಿಂದ ಲಖನೌ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಇದರ ನಡುವೆ ರವಿ ಬಿಶ್ನೋಯ್ ವಿಕೆಟ್ ಪತನಗೊಂಡಿತು. ಆದರೆ ಕ್ರುನಾಲ್ ಪಾಂಡ್ಯ ಅಬ್ಬರಿಸಿದರು. ಮೊಹ್ಸಿನ್ ಖಾನ್ ರನೌಟ್‌ಗೆ ಬಲಿಯಾದರು. ಆದರೆ ಹೋರಾಡಿದ ಕ್ರುನಾಲ್ ಪಾಂಡ್ಯ 22 ಎಸೆತದಲ್ಲಿ ಅಜೇಯ 43 ರನ್ ಸಿಡಿಸಿದರು. ಈ ಮೂಲಕ ಲಖನೌ ಸೂಪರ್ ಜೈಂಟ್ಸ್ 8 ವಿಕೆಟ್ ನಷ್ಟಕ್ಕೆ 199 ರನ್ ಸಿಡಿಸಿತು.
ಈ ಬೌಲಿಂಗ್ ಪಡೆ ಇಟ್ಟುಕೊಂಡು RCB ಈ ಸಲ ಐಪಿಎಲ್ ಕಪ್ ಗೆಲ್ಲೋದು ಸಾಧ್ಯವೇ ಇಲ್ಲ
200 ರನ್ ಟಾರ್ಗೆಟ್ ಮಾಡಲು ಪಂಜಾಬ್ ರೆಡಿಯಾಗಿದೆ. ಪಂಜಾಬ್ ಬಳಿ ಉತ್ತಮ ಬ್ಯಾಟಿಂಗ್ ಲೈನ್ ಅಪ್ ಇದೆ. ಆದರೆ ಬೃಹತ್ ಮೊತ್ತದ ಒತ್ತಡ ನಿಭಾಯಿಸಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11
ಶಿಖರನ ಧವನ್(ನಾಯಕ), ಜಾನಿ ಬೈರ್‌ಸ್ಟೋ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕುರನ್, ಜಿತೇಶ್ ಶರ್ಮಾ, ಶಶಾಂಕ್ ಸಿಂಗ್, ಹರ್ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಾಗಿಸೋ ರಬಾಡ, ರಾಹುಲ್ ಚಹಾರ್, ಅರ್ಶದೀಪ್ ಸಿಂಗ್