Asianet Suvarna News Asianet Suvarna News

IPL 2023: ರಾಯಲ್ಸ್ ಎದುರು ಟಾಸ್ ಗೆದ್ದ ಸನ್‌ರೈಸರ್ಸ್‌ ಬೌಲಿಂಗ್ ಆಯ್ಕೆ

ಹೈದರಾಬಾದ್‌ನಲ್ಲಿ ರಾಜಸ್ಥಾನ ರಾಯಲ್ಸ್‌-ಸನ್‌ರೈಸರ್ಸ್‌ ಹೈದರಾಬಾದ್‌ ಮುಖಾಮುಖಿ
ಟಾಸ್ ಗೆದ್ದ ಸನ್‌ರೈಸರ್ಸ್‌ ನಾಯಕ ಭುವನೇಶ್ವರ್ ಕುಮಾರ್ ಬೌಲಿಂಗ್ ಆಯ್ಕೆ
ಶುಭಾರಂಭ ಮಾಡುವ ನಿರೀಕ್ಷೆಯಲ್ಲಿ ಉಭಯ ತಂಡಗಳು

IPL 2023 Sunrisers Hyderabad win the toss elect to Bowling first against Rajasthan Royals kvn
Author
First Published Apr 2, 2023, 3:07 PM IST | Last Updated Apr 2, 2023, 3:38 PM IST

ಹೈದರಾಬಾದ್‌(ಏ.02): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 4ನೇ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಭುವನೇಶ್ವರ್ ಕುಮಾರ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಸನ್‌ರೈಸರ್ಸ್‌ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯಕ್ಕೆ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಏಯ್ಡನ್ ಮಾರ್ಕ್‌ರಮ್ ಬದಲಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಭುವನೇಶ್ವರ್ ಕುಮಾರ್ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ರಾಜಸ್ಥಾನ ರಾಯಲ್ಸ್‌ ತಂಡದ ಪರ ಕೆ ಎಂ ಆಸಿಫ್ ಹಾಗೂ ಜೇಸನ್ ಹೋಲ್ಡರ್‌ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಪರ ಪ್ರಮುಖವಾಗಿ ಕನ್ನಡಿಗ ಮಯಾಂಕ್‌ ಅಗರ್‌ವಾಲ್‌, ಹ್ಯಾರಿ ಬ್ರೂಕ್ ಪಾದಾರ್ಪಣೆ ಮಾಡಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪರ ವಿದೇಶಿ ಆಟಗಾರರ ರೂಪದಲ್ಲಿ ಫಜಲ್‌ಹಕ್ ಫಾರೂಕಿ, ಹ್ಯಾರಿ ಬ್ರೂಕ್, ಆದಿಲ್ ರಶೀದ್ ಹಾಗೂ ಗ್ಲೆನ್ ಫಿಲಿಫ್ಸ್ ಸ್ಥಾನ ಪಡೆದಿದ್ದಾರೆ, ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್‌ ತಂಡದ ಪರ ಜೋಸ್ ಬಟ್ಲರ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಶಿಮ್ರೋನ್ ಹೆಟ್ಮೇಯರ್ ಸ್ಥಾನ ಪಡೆದಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಒಟ್ಟು 16 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಉಭಯ ತಂಡಗಳು ಸಮಾನ ಹೋರಾಟವನ್ನು ನಡೆಸಿವೆ. 16 ಪಂದ್ಯಗಳ ಪೈಕಿ ರಾಜಸ್ಥಾನ ರಾಯಲ್ಸ್ ತಂಡವು 8 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೇ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

IPL 2023: ಮುಂಬೈ ಎದುರಿನ ಮೊದಲ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಸ್ಥಾನ?

ತಂಡಗಳು ಹೀಗಿವೆ ನೋಡಿ

ರಾಜ​ಸ್ಥಾ​ನ ರಾಯಲ್ಸ್: ಯಶಸ್ವಿ ಜೈಸ್ವಾಲ್‌, ಜೋಸ್ ಬಟ್ಲರ್‌, ಸಂಜು ಸ್ಯಾಮ್ಸನ್‌ ​(​ನಾ​ಯ​ಕ), ದೇವ​ದ​ತ್‌ ಪಡಿಕ್ಕಲ್, ಶಿಮ್ರಾನ್ ಹೆಟ್ಮೇ​ಯರ್‌, ರಿಯಾನ್‌ ಪರಾಗ್, ಜೇಸನ್ ಹೋಲ್ಡರ್‌, ರವಿಚಂದ್ರನ್ ಅಶ್ವಿನ್‌, ಟ್ರೆಂಟ್ ಬೌಲ್ಟ್‌, ಕೆ ಎಂ ಆಸಿಫ್, ಯುಜುವೇಂದ್ರ ಚಹ​ಲ್‌

ಸನ್‌ರೈಸರ್ಸ್‌ ಹೈದ್ರಾ​ಬಾ​ದ್‌: ಮಯಾಂಕ್‌ ಅಗರ್‌ವಾಲ್‌, ಅಭಿಷೇಕ್‌ ಸಿಂಗ್, ಹ್ಯಾರಿ ಬ್ರೂಕ್‌, ರಾಹುಲ್ ತ್ರಿಪಾಠಿ, ವಾಷಿಂಗ್ಟನ್‌ ಸುಂದರ್, ಗ್ಲೆನ್‌ ಫಿಲಿಫ್ಸ್‌, ಟಿ ನಟರಾಜನ್‌, ಫಜಲ್‌ಹಕ್ ಫಾರೂಕಿ, ಆದಿಲ್ ರಶೀದ್ ಭುವನೇಶ್ವರ್‌ ಕುಮಾರ್(ನಾಯಕ), ಉಮ್ರಾನ್‌ ಮಲಿಕ್.

ಪಂದ್ಯ: ಮಧ್ಯಾಹ್ನ 3.30ರಿಂದ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನಿಮಾ

Latest Videos
Follow Us:
Download App:
  • android
  • ios