ಶಿಖರ್ ಧವನ್ , ಪ್ರಭಾಸಿಮ್ರನ್ ಹೋರಾಟದಿಂದ ಪಂಜಾಬ್ ಕಿಂಗ್ಸ್ ಸದ್ಯ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಸ್ಫೋಟಕ ಬ್ಯಾಟಿಂಗ್‌ನಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ 197 ರನ್ ಸಿಡಿಸಿದೆ. 

ಗುವ್ಹಾಟಿ(ಏ.05): ನಾಯಕ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್, ಪ್ರಭಾಸಿಮ್ರನ್ ಹಾಫ್ ಸೆಂಚುರಿ ನೆರವಿನಿಂದ ಪಂಜಾಬ್ ಕಿಂಗ್ಸ್ 197 ರನ್ ಸಿಡಿಸಿದೆ. ರಾಜಸ್ಥಾನ ರಾಯಲ್ಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಪಂಜಾಬ್ ಕಿಂಗ್ಸ್ ಇದೀಗ ಬೃಹತ್ ಮೊತ್ತ ಟಾರ್ಗೆಟ್ ನೀಡಿದೆ. ನಾಯಕ ಧವನ್ ಅದ್ಭುತ ಬ್ಯಾಟಿಂಗ್ ಪಂಜಾಬ್ ತಂಡಕ್ಕೆ ನೆರವಾಯಿತು. ಧವನ್ 56 ಎಸೆತದಲ್ಲಿ ಅಜೇಯ 86 ರನ್ ಸಿಡಿಸುವ ಮೂಲಕ ಸಂಪೂರ್ಣ ಜವಾಬ್ದಾರಿ ಹೊತ್ತು ಬ್ಯಾಟಿಂಗ್ ಪ್ರದರ್ಶನ ನೀಡಿದರು.

Add Asianetnews Kannada as a Preferred SourcegooglePreferred

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಭಾಸಿಮ್ರನ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಆರಂಭಿಕ 10 ಓವರ್‌ಗಳಲ್ಲಿ ಸರಾಸರಿ 10ರ ರನ್‌ರೇಟ್ ಮೂಲಕ ಬ್ಯಾಟಿಂಗ್ ಮಾಡಿತು. ಇಬ್ಬರು ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಮೊದಲ ವಿಕೆಟ್‌ಗೆ ಈ ಜೋಡಿ 90 ರನ್ ಸಿಡಿಸಿತು. ಪ್ರಭಾಸಿಮ್ರನ್ ಸಿಂಗ್ 34 ಎಸೆತದಲ್ಲಿ 60 ರನ್ ಕಾಣಿಕೆ ನೀಡಿದರು.

ಇತ್ತ 1 ರನ್ ಸಿಡಿಸಿದ ಭಾನುಕಾ ರಾಜಪಕ್ಸ್ ರಿಟೈರ್ಡ್ ಹರ್ಟ್ ಆದರು. ಇತ್ತ ಧವನ್ ಜೊತೆ ಜಿತೇಶ್ ಶರ್ಮಾ ಅಬ್ಬರಿಸುವ ಸೂಚನೆ ನೀಡಿದರು. ಆದರೆ 16 ಎಸೆತದಲ್ಲಿ 27 ರನ್ ಸಿಡಿಸಿ ಜಿತೇಶ್ ಶರ್ಮಾ ವಿಕೆಟ್ ಕೈಚೆಲ್ಲಿದರು. ಆದರೆ ಶಿಖರ್ ಧವನ್ ಹೋರಾಟ ಮುಂದುವರಿಸಿದರು. ಇತ್ತ ಸಿಕಂದರ್ ರಾಜಾ 1 ರನ್ ಸಿಡಿಸಿ ನಿರ್ಗಮಿಸಿದರು.

ಶಾರುಖ್ ಖಾನ್ 11 ರನ್ ಕಾಣಿಕೆ ನೀಡಿದರು. ಇತ್ತ ಶಿಖರ್ ಧವನ್ 56 ಎಸೆತದಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ ಅಜೇಯ 86 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿತು.