ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ವಿರುದ್ಧ ರೋಚ​ಕ​ವಾಗಿ ಜಯಿ​ಸಿದ್ದ ಲಖನೌಈ ಪಂದ್ಯ ಗೆದ್ದು ಅಂಕ​ಪ​ಟ್ಟಿ​ಯಲ್ಲಿ ಮೇಲೇ​ರಲು ಆರ್‌​ಸಿಬಿ ಕಾತ​ರಮಧ್ಯಮ ಕ್ರಮಾಂಕ, ಬೌಲಿಂಗ್‌ ಸಮ​ಸ್ಯೆಗೆ ಇನ್ನೂ ಪರಿ​ಹಾರ ಕಂಡು​ಕೊ​ಳ್ಳದ ಆರ್‌​ಸಿಬಿಪ್ಲೇ-ಆಫ್‌ ದೃಷ್ಟಿಯಿಂದ ತಂಡಕ್ಕೆ ಮಹತ್ವದ ಪಂದ್ಯ 

ಲಖ​ನೌ(ಮೇ.01): ಭಾರೀ ಹೈಡ್ರಾ​ಮದ ಬಳಿಕ ಎದು​ರಾದ ಸೋಲು, ಅಭಿ​ಮಾ​ನಿ​ಗ​ಳನ್ನು ಕೆಣ​ಕಿದ್ದ ಗೌತಮ್ ಗಂಭೀರ್‌ ಹಾಗೂ ಆವೇಶ್ ಖಾನ್ ಅತಿ​ರೇ​ಕದ ಸಂಭ್ರ​ಮಾ​ಚ​ರಣೆ. ತನ್ನದೇ ತವ​ರಿ​ನಲ್ಲಿ ಲಖನೌ ವಿರುದ್ಧದ ಪಂದ್ಯ​ದಲ್ಲಿ ಎದು​ರಾದ ಈ ಸನ್ನಿ​ವೇ​ಶ​ಗ​ಳನ್ನು ಆರ್‌​ಸಿಬಿ ಇನ್ನೂ ಮರೆ​ತಿ​ರ​ಲಿ​ಕ್ಕಿಲ್ಲ. ಸೋಮ​ವಾ​ರ ನಡೆ​ಯ​ಲಿ​ರುವ ಲಖನೌ ಸೂಪರ್ ಜೈಂಟ್ಸ್‌ ವಿರು​ದ್ಧದ ಮಹ​ತ್ವದ ಪಂದ್ಯ​ದಲ್ಲಿ ಈ ಎಲ್ಲ​ದಕ್ಕೂ ಸೇಡು ತೀರಿ​ಸಿ​ಕೊ​ಳ್ಳು​ವು​ದರ ಜೊತೆಗೆ ಅಂಕ​ಪ​ಟ್ಟಿ​ಯಲ್ಲಿ ಮೇಲೇ​ರಲು ಆರ್‌​ಸಿಬಿ ಕಾತ​ರಿ​ಸು​ತ್ತಿದೆ.

ಪ್ಲೇ-ಆಫ್‌ ದೃಷ್ಟಿ​ಯಿಂದ ಆರ್‌​ಸಿ​ಬಿಗೆ ಈ ಪಂದ್ಯ ಮಹ​ತ್ವ​ದ್ದಾ​ಗಿ​ದ್ದರೆ, ಕಳೆದ ಪಂದ್ಯದ ಸ್ಫೋಟಕ ಬ್ಯಾಟಿಂಗ್‌ ಪ್ರದ​ರ್ಶನ ನೀಡಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ರಾಹುಲ್‌ ಪಡೆ ತವ​ರಿ​ನಲ್ಲಿ ಪಂದ್ಯ ಗೆದ್ದು ಅಂಕ​ಪ​ಟ್ಟಿ​ಯಲ್ಲಿ ಮತ್ತೆ ಅಗ್ರ​ಸ್ಥಾ​ನ​ಕ್ಕೇ​ರುವ ನಿರೀ​ಕ್ಷೆ​ಯ​ಲ್ಲಿದೆ.

ಕೆಕೆ​ಆರ್‌ ವಿರು​ದ್ಧದ ಪಂದ್ಯದ ಬಳಿಕ ವಿರಾಟ್‌ ಕೊಹ್ಲಿಯೇ ಹೇಳಿ​ದಂತೆ ಆರ್‌​ಸಿಬಿ ತನ್ನ ಗೆಲು​ವನ್ನು ಎದು​ರಾ​ಳಿಗೆ ಬಿಟ್ಟು​ಕೊ​ಡು​ವು​ದ​ರಲ್ಲಿ ಹೆಸ​ರು​ವಾಸಿ. ಒಂದಿ​ಬ್ಬ​ರ ಮೇಲೆಯೇ ಅವ​ಲಂಬಿ​ತ​ಗೊಂಡು ಆಡು​ತ್ತಿ​ರುವ ತಂಡ ಇನ್ನಾ​ದರೂ ತನ್ನ ಸಮ​ಸ್ಯೆ​ಗ​ಳಿಗೆ ಪರಿ​ಹಾರ ಕಂಡು​ಕೊ​ಳ್ಳ​ದಿ​ದ್ದರೆ ಪ್ಲೇ-ಆಫ್‌​ಗೇ​ರು​ವುದು ಕಷ್ಟ​ವಿದೆ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್‌ ಮ್ಯಾಕ್ಸ್‌​ವೆಲ್‌ ಅಭೂ​ತ​ಪೂರ್ವ ಲಯ​ದ​ಲ್ಲಿ​ದ್ದರೂ ಲಖ​ನೌನ ಸ್ಪರ್ಧಾ​ತ್ಮಕ ಪಿಚ್‌​ನಲ್ಲಿ ಇತ​ರ​ರಿಂದಲೂ ಅಗತ್ಯ ಕೊಡುಗೆ ಸಿಗ​ಬೇ​ಕಿದೆ. 8 ಪಂದ್ಯ​ವಾ​ಡಿ​ದರೂ ಇನ್ನೂ 85ಕ್ಕಿಂತ ಹೆಚ್ಚು ರನ್‌ ಗಳಿ​ಸದ ಕಾರ್ತಿಕ್‌ರ ಜೊತೆ​ಗೆ ಮಹಿಪಾಲ್ ಲೊಮ್ರೊರ್‌, ಶಾಜಾಬ್‌ ಅಹಮ್ಮದ್, ಸುಯಾಶ್‌ ದೇಸಾಯಿ ಕೂಡಾ ಜವಾ​ಬ್ದಾ​ರಿ​ಯು​ತ ಆಟ​ವಾ​ಡ​ಬೇ​ಕಿದೆ. ಡು ಪ್ಲೆಸಿಸ್ ಬದಲು ಈ ಪಂದ್ಯ​ದಲ್ಲೂ ವಿರಾಟ್ ಕೊಹ್ಲಿಯೇ ತಂಡ ಮುನ್ನ​ಡೆ​ಸುವ ಸಾಧ್ಯತೆಯಿದೆ.

IPL 2023 ಅಂತಿಮ ಓವರ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಮುಂಬೈಗೆ ಗೆಲುವು ತಂದುಕೊಟ್ಟ ಡೇವಿಡ್!

ಇನ್ನು ಬೌಲಿಂಗ್‌ ವಿಭಾ​ಗ​ದಲ್ಲಿ ಮೊಹಮ್ಮದ್ ಸಿರಾಜ್‌ ಹೊರ​ತು​ಪ​ಡಿಸಿ ಉಳಿ​ದ​ವರ ಕೊಡುಗೆ ಅಷ್ಟ​ಕ್ಕಷ್ಟೇ. ಹರ್ಷಲ್‌ ಪಟೇಲ್‌ ಮೇಲೆ ಭಾರೀ ನಿರೀಕ್ಷೆ ಇದ್ದು, 10ರ ಸಮೀ​ಪ​ವಿ​ರುವ ಅವರ ಎಕಾ​ನಮಿ ರೇಟನ್ನು ಕಡಿ​ಮೆ​ಗೊ​ಳಿ​ಸ​ಬೇ​ಕಿದೆ. ಸ್ಪಿನ್‌ ಪಿಚ್‌ ಆಗಿ​ರು​ವು​ದ​ರಿಂದ ಲಖನೌ ಸ್ಫೋಟಕ ಬ್ಯಾಟ​ರ್‌​ಗ​ಳನ್ನು ಕಟ್ಟಿ​ಹಾ​ಕು​ವಲ್ಲಿ ಹಸ​ರಂಗ ಟ್ರಂಪ್‌​ಕಾರ್ಡ್‌ ಎನಿ​ಸ​ಬ​ಹುದು.

ಅಸ್ಥಿರ ಆಟ: ಮತ್ತೊಂದೆಡೆ ಕಳೆದ ಪಂದ್ಯ​ದಲ್ಲಿ ಪಂಜಾಬ್‌ ವಿರುದ್ಧ 257 ರನ್‌ ಚಚ್ಚಿದ್ದ ಲಖನೌ ಅಸ್ಥಿರ ಆಟಕ್ಕೂ ಹೆಸ​ರು​ವಾಸಿ. ಇದೇ ಕ್ರೀಡಾಂಗ​ಣ​ದಲ್ಲಿ ಗುಜ​ರಾತ್‌ ವಿರುದ್ಧ 135 ರನ್‌ ಬೆನ್ನ​ತ್ತಲೂ ಲಖ​ನೌ ವಿಫ​ಲ​ವಾ​ಗಿತ್ತು. ತವ​ರಿನ ಕಳೆ​ದೆ​ರಡು ಪಂದ್ಯದ ಸೋಲು ಕೂಡಾ ತಂಡ​ವನ್ನು ಕಾಡು​ತ್ತಿದ್ದು, ಒಂದಿ​ಬ್ಬ​ರನ್ನು ನೆಚ್ಚಿ​ಕೊ​ಳ್ಳ​ದೇ ಸಂಘಟಿತ ಪ್ರದ​ರ್ಶನ ನೀಡಲು ಕಾಯು​ತ್ತಿದೆ.

ಒಟ್ಟು ಮುಖಾಮುಖಿ: 03

ಆರ್‌​ಸಿ​ಬಿ: 02

ಲಖನೌ: 01

ಸಂಭವನೀಯ ಆಟಗಾರರ ಪಟ್ಟಿ

ಆರ್‌​ಸಿ​ಬಿ: ವಿರಾಟ್ ವಿರಾ​ಟ್‌​(​ನಾ​ಯ​ಕ), ಫಾಫ್ ಡು ಪ್ಲೆಸಿಸ್​, ಗ್ಲೆನ್‌ ಮ್ಯಾಕ್ಸ್‌ವೆಲ್‌, ಶಾ​ಬಾಜ್‌ ಅಹಮ್ಮದ್, ಮಹಿಪಾಲ್ ಲೊಮ್ರೊರ್‌, ದಿನೇಶ್ ಕಾರ್ತಿಕ್‌, ಸುಯಾಶ್ ಪ್ರಭು​ದೇ​ಸಾಯಿ, ವನಿಂದು ಹಸ​ರಂಗ, ವೇಯ್ನ್‌ ಪಾರ್ನೆಲ್‌, ವೈಶಾಕ್ ವಿಜಯ್‌ಕುಮಾರ್, ಹರ್ಷಲ್‌ ಪಟೇಲ್‌, ಮೊಹಮ್ಮದ್ ಸಿರಾಜ್‌.

ಲಖನೌ ಸೂಪರ್ ಜೈಂಟ್ಸ್‌: ಕೈಲ್ ಮೇಯ​ರ್ಸ್‌, ಕೆ ಎಲ್ ರಾಹುಲ್‌(ನಾಯಕ), ದೀಪಕ್‌ ಹೂಡಾ, ಮಾರ್ಕಸ್‌ ಸ್ಟೋಯ್ನಿಸ್‌, ಕೃನಾಲ್‌ ಪಾಂಡ್ಯ, ನಿಕೋಲಸ್ ಪೂರನ್‌, ಆಯುಷ್ ಬದೋನಿ, ನವೀನ್‌ ಉಲ್‌ ಹಕ್‌, ರವಿ ಬಿಷ್ಣೋಯ್‌, ಆವೇಶ್‌ ಖಾನ್‌, ಅಮಿತ್‌ ಮಿಶ್ರಾ.

ಪಂದ್ಯ: ಸಂಜೆ 7.30ಕ್ಕೆ, 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್‌

ಏಕನಾ ಕ್ರೀಡಾಂಗ​ಣದ ಪಿಚ್‌ ಸ್ಪರ್ಧಾ​ತ್ಮಕವಾಗಿದ್ದು, ದೊಡ್ಡ ಮೊತ್ತ ದಾಖ​ಲಾ​ಗುವ ನಿರೀಕ್ಷೆ ಕಡಿಮೆ. ಇಲ್ಲಿ ನಡೆದ 4 ಪಂದ್ಯ​ಗ​ಳಲ್ಲಿ ಒಮ್ಮೆ ಮಾತ್ರ 165+ ರನ್‌ ದಾಖ​ಲಾ​ಗಿದೆ. ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಟಾಸ್‌ ನಿರ್ಣಾಯಕ ಎನಿ​ಸಿ​ಕೊ​ಳ್ಳ​ಬ​ಹುದು.