ಲಖನೌದಲ್ಲಿ ಗುಜರಾತ್-ಲಖನೌ ಸೂಪರ್ ಜೈಂಟ್ಸ್‌ ಮುಖಾಮುಖಿಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ಬ್ಯಾಟಿಂಗ್ ಆಯ್ಕೆಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಎದುರು ನೋಡುತ್ತಿದೆ ಲಖನೌ

ಲಖನೌ(ಏ.22): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 30ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್‌ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಗುಜರಾತ್ ಟೈಟಾನ್ಸ್‌ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಗುಜರಾತ್ ಹಾಗೂ ಲಖನೌ ತಂಡಗಳ ನಡುವಿನ ಹೈವೋಲ್ಟೇಜ್‌ ಕಾದಾಟಕ್ಕೆ ಇಲ್ಲಿನ ಏಕಾನ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಗುಜರಾತ್ ಟೈಟಾನ್ಸ್‌ ತಂಡದಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಮಾರಕ ವೇಗಿ ಅಲ್ಜಾರಿ ಜೋಸೆಫ್‌ ಬದಲಿಗೆ ಆಫ್ಘಾನಿಸ್ತಾನದ ನೂರ್ ಅಹಮ್ಮದ್‌ ತಂಡ ಕೂಡಿಕೊಂಡಿದ್ದಾರೆ. ಇನ್ನು ಲಖನೌ ಸೂಪರ್‌ ಜೈಂಟ್ಸ್‌ ತಂಡದಲ್ಲಿ ಯುದುವೀರ್ ಬದಲಿಗೆ ಅನುಭವಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ ತಂಡ ಕೂಡಿಕೊಂಡಿದ್ದಾರೆ.

ಐಪಿಎಲ್‌ ಇತಿಹಾಸದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್ ಟೈಟಾನ್ಸ್‌ ತಂಡಗಳು ಇದುವರೆಗೂ ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲೂ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ ತಂಡವು ಗೆಲುವಿನ ನಗೆ ಬೀರಿದೆ. ಇದೀಗ ಮೂರನೇ ಮುಖಾಮುಖಿಯಲ್ಲಿ ಕೆ ಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್‌ ಜೈಂಟ್ಸ್‌ ತಂಡವು ತಿರುಗೇಟು ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. 

ತಂಡಗಳು ಹೀಗಿವೆ ನೋಡಿ:

ಗುಜ​ರಾ​ತ್‌ ಟೈಟಾನ್ಸ್‌: ವೃದ್ದಿಮಾನ್ ಸಾಹ (ವಿಕೆಟ್ ಕೀಪರ್), ಶುಭ್‌ಮನ್‌ ಗಿಲ್‌, ಹಾರ್ದಿಕ್‌ ಪಾಂಡ್ಯ(ನಾಯಕ), ವಿಜಯ್ ಶಂಕರ್, ಅಭಿನವ್‌ ಮನೋಹರ್, ಡೇವಿಡ್‌ ಮಿಲ್ಲರ್‌, ರಾಹುಲ್‌ ತೆವಾಟಿಯಾ, ರಶೀದ್‌ ಖಾನ್, ನೂರ್ ಅಹಮ್ಮದ್ , ಮೋಹಿ​ತ್‌ ಶರ್ಮಾ, ಮೊಹಮ್ಮದ್ ಶಮಿ.

ಲಖನೌ ಸೂಪರ್ ಜೈಂಟ್ಸ್‌: ಕೈಲ್ ಮೇಯ​ರ್ಸ್‌, ಕೆ ಎಲ್ ರಾಹುಲ್‌(ನಾಯಕ), ಮಾರ್ಕಸ್‌ ಸ್ಟೋಯ್ನಿಸ್‌, ದೀಪಕ್‌ ಹೂಡಾ, ಕೃನಾಲ್‌ ಪಾಂಡ್ಯ, ನಿಕೋಲಸ್ ಪೂರನ್‌, ಆಯುಷ್ ಬದೋನಿ, ರವಿ ಬಿಷ್ಣೋಯಿ, ಆವೇಶ್‌ ಖಾನ್, ಅಮಿತ್ ಮಿಶ್ರಾ, ನವೀನ್ ಉಲ್‌ ಹಕ್.