ಗುವಾಹಟಿಯಲ್ಲಿಂದು ರಾಜಸ್ಥಾನ ರಾಯಲ್ಸ್‌-ಡೆಲ್ಲಿ ಕ್ಯಾಪಿಟಲ್ಸ್‌ ಮುಖಾಮುಖಿಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬೌಲಿಂಗ್ ಆಯ್ಕೆ

ಗುವಾಹಟಿ(ಏ.08): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ 11ನೇ ಪಂದ್ಯದಲ್ಲಿಂದು ರಾಜಸ್ಥಾನ ರಾಯಲ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಉಭಯ ತಂಡದಲ್ಲಿ ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿವೆ

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ ರಾಯಲ್ಸ್‌ ತಂಡಗಳ ನಡುವಿನ ಪಂದ್ಯಕ್ಕೆ ಇಲ್ಲಿನ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ. ಇನ್ನು ನಿರೀಕ್ಷೆಯಂತೆಯೇ, ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿದ್ದು, ಮಿಚೆಲ್ ಮಾರ್ಷ್‌ ಬದಲಿಗೆ ರೋವ್ಮನ್‌ ಪೋವೆಲ್‌ ತಂಡ ಕೂಡಿಕೊಂಡಿದ್ದಾರೆ. ಇನ್ನು ಇದರ ಜತೆಗೆ ಕನ್ನಡಿಗ ಮನೀಶ್ ಪಾಂಡೆ, ಲಲಿತ್ ಯಾದವ್ ಕೂಡಾ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೂಡಿಕೊಂಡಿದ್ದಾರೆ. ಇನ್ನು ಪೃಥ್ವಿ ಶಾಗೆ ವಿಶ್ರಾಂತಿ ನೀಡಲಾಗಿದ್ದು, ಮನೀಶ್ ಪಾಂಡೆ ಇನಿಂಗ್ಸ್‌ ಆರಂಭಿಸುವ ಸಾಧ್ಯತೆಯಿದೆ.

ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್‌ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ದೇವದತ್ ಪಡಿಕ್ಕಲ್ ಹಾಗೂ ಆಸಿಫ್‌ಗೆ ವಿಶ್ರಾಂತಿ ನೀಡಲಾಗಿದ್ದು, ಇವರ ಬದಲಿಗೆ ಧೃವ್ ಜ್ವರೆಲ್ ಹಾಗೂ ಸಂದೀಪ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

Scroll to load tweet…

IPL ನಿಂದ ಅತಿಹೆಚ್ಚು ಸಂಪಾದನೆ ಮಾಡಿದ ಟಾಪ್ 5 ಭಾರತೀಯ ಕ್ರಿಕೆಟಿಗರಿವರು..!

ಸತತ 2 ಸೋಲು​ಗ​ಳೊಂದಿಗೆ ಅಭಿಯಾನ ಆರಂಭಿಸಿರುವ ಡೆಲ್ಲಿ ಕ್ಯಾಪಿ​ಟ​ಲ್ಸ್‌ ಇಂದು ರಾಜ​ಸ್ಥಾನ ರಾಯಲ್ಸ್‌ ವಿರುದ್ಧ ಹ್ಯಾಟ್ರಿಕ್‌ ಸೋಲು ತಪ್ಪಿ​ಸಿಕೊಳ್ಳಬೇಕಾದ ಒತ್ತ​ಡ​ದ​ಲ್ಲಿದೆ. ಮತ್ತೊಂದೆಡೆ ಭರ್ಜರಿ ಗೆಲು​ವಿ​ನೊಂದಿಗೆ ಶುಭಾ​ರಂಭ ಮಾಡಿ​ದರೂ, ಪಂಜಾಬ್‌ ಕಿಂಗ್ಸ್‌ ವಿರುದ್ಧ ವೀರೋ​ಚಿತ ಸೋಲುಂಡಿದ್ದ ರಾಜ​ಸ್ಥಾನ ರಾಯಲ್ಸ್‌ ತನ್ನ 2ನೇ ತವರು ಗುವಾಹಟಿಯಲ್ಲಿ ಮೊದಲ ಜಯಕ್ಕಾಗಿ ಕಾತರಿಸು​ತ್ತಿ​ದೆ.

ಐಪಿಎಲ್ ಇತಿಹಾಸದಲ್ಲಿ ರಾಜಸ್ಥಾನ ರಾಯಲ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಒಟ್ಟು 26 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಉಭಯ ತಂಡಗಳು ಸಮಾನ ಹೋರಾಟ ಮಾಡಿವೆ. ರಾಜಸ್ಥಾನ ರಾಯಲ್ಸ್‌ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡಾ 13 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ತಂಡಗಳು ಹೀಗಿವೆ ನೋಡಿ

ರಾಜ​ಸ್ಥಾ​ನ ರಾಯಲ್ಸ್‌: ಯಶಸ್ವಿ ಜೈಸ್ವಾಲ್‌, ಜೋಸ್‌ ಬಟ್ಲರ್‌, ಸಂಜು ಸ್ಯಾಮ್ಸನ್‌ ​(​ನಾ​ಯ​ಕ), ಧೃವ್ ಜ್ವರೇಲ್ , ಶಿಮ್ರೊನ್ ಹೆಟ್ಮೇ​ಯರ್‌, ರಿಯಾನ್‌ ಪರಾಗ್, ಜೇಸನ್ ಹೋಲ್ಡರ್‌, ರವಿಚಂದ್ರನ್‌ ಅಶ್ವಿನ್‌, ಟ್ರೆಂಟ್‌ ಬೌಲ್ಟ್‌, ಸಂದೀಪ್ ಶರ್ಮಾ, ಯುಜುವೇಂದ್ರ ಚಹ​ಲ್‌

ಡೆಲ್ಲಿ ಕ್ಯಾಪಿಟಲ್ಸ್‌: ಡೇವಿಡ್ ವಾರ್ನರ್‌(ನಾಯಕ), ಮನೀಶ್ ಪಾಂಡೆ, ರಿಲೇ ರೊಸ್ಸೌ, ಲಲಿತ್ ಯಾದವ್, ರೋವ್ಮನ್ ಪೋವೆಲ್ ಅಕ್ಷರ್‌ ಪಟೇಲ್, ಅಭಿ​ಷೇಕ್‌ ಪೋರೆಲ್‌, ಕುಲ್ದೀಪ್‌, ಖಲೀಲ್‌ ಅಹಮ್ಮದ್, ಮುಕೇ​ಶ್‌ ಕುಮಾರ್.

ಪಂದ್ಯ: ಮಧ್ಯಾ​ಹ್ನ 3.30ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ