ಇಂದು ಗುಜರಾತ್ ಟೈಟಾನ್ಸ್ vs ಮುಂಬೈ ಇಂಡಿಯನ್ಸ್‌ ಕಾದಾಟಹೈವೋಲ್ಟೇಜ್‌ ಪಂದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯಶುಭ್‌ಮನ್ ಗಿಲ್‌ vs ಅರ್ಜುನ್ ತೆಂಡುಲ್ಕರ್ ಕಾದಾಟಕ್ಕೆ ಸಾಕ್ಷಿ?

ಅಹಮದಾಬಾದ್‌(ಏ.25): 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಮತ್ತೊಂದು ಬಹುನಿರೀಕ್ಷಿತ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು 5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಈ ಜಿದ್ದಾಜಿದ್ದಿನ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಇನ್ನು ಈ ಪಂದ್ಯವು ಸಾಕಷ್ಟು ಕಾರಣಗಳಿಗೆ ಬಹುನಿರೀಕ್ಷಿತ ಪಂದ್ಯ ಎನಿಸಿಕೊಂಡಿದೆಯಾದರೂ, ಈ ಪಂದ್ಯದಲ್ಲಿ ಸಚಿನ್‌ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಸೆಂಟರ್ ಅಫ್ ಅಟ್ರ್ಯಾಕ್ಷನ್ ಎನಿಸಿಕೊಂಡಿದ್ದಾರೆ.

ಹೌದು, ಐಪಿಎಲ್‌ನ ಇತ್ತೀಚಿನ ಬಹುತೇಕ ಪಂದ್ಯಗಳಲ್ಲಿ ಕೊನೆಯ ಓವರ್‌ನಲ್ಲಿ ಫಲಿತಾಂಶ ಹೊರಬೀಳುತ್ತಿದ್ದು, ಇಂದು ನಡೆಯಲಿರುವ ಪಂದ್ಯ ಕೂಡಾ ಅದೇ ರೀತಿಯ ರೋಚಕತೆ ಕಾಯ್ದುಕೊಳ್ಳುವ ಸಾಧ್ಯತೆಯಿದೆ. ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ ಎದುರು ಮುಂಬೈ ಇಂಡಿಯನ್ಸ್‌ ತಂಡವು ರೋಚಕ ಸೋಲು ಅನುಭವಿಸಿತ್ತು. ಆ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್‌ ತೆಂಡುಲ್ಕರ್ ಒಂದು ಓವರ್‌ನಲ್ಲಿ 31 ರನ್ ಚಚ್ಚಿಸಿಕೊಳ್ಳುವ ಮೂಲಕ, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ದುಬಾರಿ ಬೌಲರ್ ಎನ್ನುವ ಕುಖ್ಯಾತಿಗೆ ಕಾರಣರಾಗಿದ್ದರು. ಹೀಗಿದ್ದೂ, ರೋಹಿತ್ ಶರ್ಮಾ, ಇಂದಿನ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ತೀರಾ ಕಡಿಮೆ ಎನಿಸಿದೆ. ಇನ್ನು ಇಂದು ನಡೆಯುವ ಪಂದ್ಯವು ಮುಂಬೈ ಇಂಡಿಯನ್ಸ್‌ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ ಹಾಗೂ ಗುಜರಾತ್ ಟೈಟಾನ್ಸ್ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ ಅವರ ಮುಖಾಮುಖಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. 

ಶುಭ್‌ಮನ್‌ ಗಿಲ್‌, ಪ್ರತಿಭಾನ್ವಿತ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದು, ಸ್ವತಃ ಸಚಿನ್ ತೆಂಡುಲ್ಕರ್ ಕೂಡಾ, ಗಿಲ್ ಅವರ ಬ್ಯಾಟಿಂಗ್ ಕೌಶಲ್ಯದ ಕುರಿತಂತೆ ಈ ಹಿಂದೆಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಶುಭ್‌ಮನ್ ಗಿಲ್ ಒಳ್ಳೆಯ ಬ್ಯಾಟಿಂಗ್ ಲಯವನ್ನು ಹೊಂದಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್‌ ವೇಗಿ ಅರ್ಜುನ್‌ ತೆಂಡುಲ್ಕರ್ ಹಾಗೂ ಪಂಜಾಬ್ ಮೂಲದ ಶುಭ್‌ಮನ್ ಗಿಲ್ ನಡುವಿನ ಹೋರಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಸಾರಾ ತೆಂಡುಲ್ಕರ್ ಸಪೋರ್ಟ್‌ ಯಾರಿಗೆ..?

16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅರ್ಜುನ್ ತೆಂಡುಲ್ಕರ್, ವಾಂಖೇಡೆ ಮೈದಾನದಲ್ಲಿಯೇ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಈ ಸಂದರ್ಭದಲ್ಲಿ ಸಹೋದರಿ ಸಾರಾ ತೆಂಡುಲ್ಕರ್ ಮೈದಾನಕ್ಕೆ ಬಂದು ತನ್ನ ತಮ್ಮನ ಆಟವನ್ನು ಚಿಯರ್‌ ಅಪ್‌ ಮಾಡುವ ಮೂಲಕ ಬೆಂಬಲಿಸಿದ್ದರು. ಅರ್ಜುನ್ ತೆಂಡುಲ್ಕರ್ ಆಡುವ ಎಲ್ಲಾ ಪಂದ್ಯಗಳ ವೇಳೆಯಲ್ಲೂ ಸಾರಾ ತೆಂಡುಲ್ಕರ್ ಮೈದಾನಕ್ಕೆ ಬಂದು ಸಹೋದರನ ಆಟವನ್ನು ಹುರಿದುಂಬಿಸುತ್ತಲೇ ಬಂದಿದ್ದಾರೆ. ಇನ್ನು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯ ವೀಕ್ಷಿಸಲು ಸಾರಾ ತೆಂಡುಲ್ಕರ್ ಈಗಾಗಲೇ ಅಹಮದಾಬಾದ್‌ಗೆ ಬಂದಿಳಿದಿದ್ದಾರೆ.

ಇನ್ನೊಂದೆಡೆ ಇದೇ ಪಂದ್ಯದಲ್ಲಿ ಶುಭ್‌ಮನ್‌ ಗಿಲ್ ಕೂಡಾ ಕಣಕ್ಕಿಳಿಯುತ್ತಿರುವುದರಿಂದಾಗಿಯೇ ಸಾರಾ ತೆಂಡುಲ್ಕರ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಎನಿಸಿಕೊಂಡಿದ್ದಾರೆ. ಯಾಕೆಂದರೆ ಸಾಕಷ್ಟು ಸಂದರ್ಭದಲ್ಲಿ ಸಾರಾ ತೆಂಡುಲ್ಕರ್ ಜತೆಗೆ ಶುಭ್‌ಮನ್ ಗಿಲ್ ಹೆಸರು ಥಳುಕು ಹಾಕಿಕೊಂಡೇ ಬರುತ್ತಿದೆ. ಈ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ವಿಚಾರ ಖಾಸಗಿಯಾಗಿಯೇನೂ ಉಳಿದಿಲ್ಲ. ಈ ಕುರಿತಂತೆ ಈ ತಾರಾ ಜೋಡಿ ತಮ್ಮ ಡೇಟಿಂಗ್ ವಿಚಾರವನ್ನು ಅಧಿಕೃತವಾಗಿ ಖಚಿತಪಡಿಸಿಲ್ಲವಾದರೂ, ಅಲ್ಲಗಳೆದೂ ಇಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲಿ ಸಾರಾ ತೆಂಡುಲ್ಕರ್, ಗಿಲ್ ಹಾಗೂ ಅರ್ಜುನ್ ಇಬ್ಬರಲ್ಲಿ ತಮ್ಮ ಸಪೋರ್ಟ್ ಯಾರಿಗೆ ಮಾಡುತ್ತಾರೆ ಎನ್ನುವ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿ-ಬಿಸಿ ಚರ್ಚೆ ಜೋರಾಗಿದೆ.

Scroll to load tweet…
Scroll to load tweet…