Asianet Suvarna News Asianet Suvarna News

IPL 2022: ವಿರಾಟ್ ಕೊಹ್ಲಿ ಕೊಂಚ ಬ್ರೇಕ್ ತೆಗೆದುಕೊಳ್ಳಲಿ: ರವಿಶಾಸ್ತ್ರಿ ಕಿವಿಮಾತು..!

 

* ಬ್ಯಾಟಿಂಗ್‌ನಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ

* ವಿರಾಟ್ ಕೊಹ್ಲಿಗೆ ಸೂಕ್ತ ವಿಶ್ರಾಂತಿಯ ಅಗತ್ಯವಿದೆ ಎಂದು ರವಿಶಾಸ್ತ್ರಿ

* ಕೊಹ್ಲಿ ಇನ್ನೂ ಆರೇಳು ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದಾರೆಂದ ಮಾಜಿ ಕೋಚ್

IPL 2022 Virat Kohli is overcooked he needs a break Says Ravi Shastri kvn
Author
Bengaluru, First Published Apr 20, 2022, 3:34 PM IST

ಬೆಂಗಳೂರು(ಏ.20): ಸತತವಾಗಿ ಕ್ರಿಕೆಟ್ ಆಡಿ ಬಳಲಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Former Team India Captain Virat Kohli), ಕೆಲ ಸಮಯದ ಮಟ್ಟಿಗೆ ವಿಶ್ರಾಂತಿ ತೆಗೆದುಕೊಳ್ಳುವುದು ಒಳಿತು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಖ್ಯಾತ ಕ್ರಿಕೆಟ್ ವಿಶ್ಲೇಷಕ ರವಿಶಾಸ್ತ್ರಿ (Ravi Shastri) ಅಭಿಪ್ರಾಯಪಟ್ಟಿದ್ದಾರೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಲಖನೌ ಸೂಪರ್ ಜೈಂಟ್ಸ್ (Lucknow Super Giants) ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗಿ ಪೆವಿಲಿಯನ್ ಸೇರಿದ್ದರು. ದುಸ್ಮಂತಾ ಚಮೀರಾ (Dushmantha Chameera) ಎಸೆದ ಪಂದ್ಯದ ಮೊದಲ ಓವರ್‌ನ ಕೊನೆಯ ಎಸೆತವು ವಿಕೆಟ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಕೆಣಕಲು ಹೋಗಿ ದೀಪಕ್ ಹೂಡಾಗೆ (Deepak Hooda) ಕ್ಯಾಚಿತ್ತು ಕೊಹ್ಲಿ ಪೆವಿಲಿಯನ್ ಸೇರಿದ್ದರು.

ವಿರಾಟ್ ಕೊಹ್ಲಿ ಮತ್ತೊಮ್ಮೆ ದೊಡ್ಡ ಮೊತ್ತ ಗಳಿಸಲು ವಿಫರಾಗಿದ್ದು, ಅಭಿಮಾನಿಗಳು ತಬ್ಬಿಬ್ಬಾಗುವಂತೆ ಮಾಡಿತು. ಕಳೆದ ಕೆಲ ವರ್ಷಗಳಿಂದ ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ದೊಡ್ಡ ಮೊತ್ತ ಮೂಡಿ ಬರುತ್ತಿಲ್ಲ. ಅಂದಹಾಗೆ ವಿರಾಟ್ ಕೊಹ್ಲಿ ಬ್ಯಾಟಿಂದ ಕೊನೆಯದಾಗಿ ಅಂತರರಾಷ್ಟ್ರೀಯ ಶತಕ ಮೂಡಿಬಂದಿದ್ದು, 2019ರ ನವೆಂಬರ್‌ನಲ್ಲಿ. ವಿರಾಟ್ ಕೊಹ್ಲಿ ಜತೆ ಉತ್ತಮ ಒಡನಾಟನಾಟ ಹೊಂದಿರುವ ಹೊಂದಿರುವ ರವಿಶಾಸ್ತ್ರಿ, ಬಯೋಬಬಲ್‌ ಆಯಾಸದಿಂದ ಹೊರಬಂದು ಕೆಲಕಾಲ ಕೊಹ್ಲಿ ವಿಶ್ರಾಂತಿ ಪಡೆಯಲಿ ಎಂದು ಕಿವಿ ಮಾತು ಹೇಳಿದ್ದಾರೆ.

ನಾನು ಟೀಂ ಇಂಡಿಯಾ ಕೋಚ್ ಆಗಿದ್ದಾಗ ಮೊದಲ ಬಾರಿಗೆ ಬಯೋ ಬಬಲ್‌ ಪರಿಚಯಿಸಲಾಗಿತ್ತು. ಬಯೋಬಬಲ್‌ ಬಂದ ಮೇಲೆ ವಿರಾಟ್ ಕೊಹ್ಲಿ ಸಾಕಷ್ಟು ದಣಿದಿದ್ದಾರೆ. ನಿಜಕ್ಕೂ ಯಾರಿಗಾದರೂ ವಿಶ್ರಾಂತಿ ಸಿಗಬೇಕಿದ್ದರೆ, ಅದು ವಿರಾಟ್ ಕೊಹ್ಲಿ ಸಿಗಬೇಕು. ವಿರಾಟ್ ಕೊಹ್ಲಿಗೆ ಕನಿಷ್ಠ ಒಂದೂವರೆಯಿಂದ ಎರಡು ತಿಂಗಳು ವಿಶ್ರಾಂತಿಯ ಅಗತ್ಯವಿದೆ. ಅದು ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಅಥವಾ ಆ ಬಳಿಕವಾದರೂ ಕೊಹ್ಲಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

IPL 2022: ಆರ್‌ಸಿಬಿ vs ಲಖನೌ ಪಂದ್ಯದಲ್ಲಿ ವೈರಲ್‌ ಆದ ಟಾಪ್ 10 ಮೀಮ್ಸ್‌ಗಳಿವು..!

ವಿರಾಟ್ ಕೊಹ್ಲಿ ಅವರಲ್ಲಿ ಇನ್ನೂ 6-7 ವರ್ಷಗಳ ಕಾಲ ಕ್ರಿಕೆಟ್ ಭಾಕಿ ಇದೆ. ಹೀಗಾಗಿ ಬಿಸಿಸಿಐ, ವಿರಾಟ್ ಕೊಹ್ಲಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದಿದ್ದಾರೆ. ವಿರಾಟ್ ಕೊಹ್ಲಿಗೆ ವಿಶ್ರಾಂತಿಯ ಅಗತ್ಯವಿದೆ. ಯಾಕೆಂದರೆ ವಿರಾಟ್ ಕೊಹ್ಲಿಯವರಲ್ಲಿ ಇನ್ನೂ 6-7 ವರ್ಷಗಳ ಕಾಲ ಕ್ರಿಕೆಟ್ ಆಡುವುದು ಭಾಕಿ ಇದೆ. ಹೀಗಾಗಿ ಇಂತಹ ಒಳ್ಳೆಯ ಆಟಗಾರರನ್ನು ಕಳೆದುಕೊಳ್ಳುವುದು ಜಾಣತನವಲ್ಲ. ವಿರಾಟ್ ಕೊಹ್ಲಿ ಮಾತ್ರವಲ್ಲ, ಅದೇ ರೀತಿ ವಿಶ್ವಕ್ರಿಕೆಟ್‌ನಲ್ಲಿ ಕೆಲವರು ಇಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ಇದರ ಬಗ್ಗೆ ಕ್ರಿಕೆಟ್ ಮಂಡಳಿ ಆಧ್ಯತೆಯ ಮೇರೆಗೆ ಗಮನ ಹರಿಸಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ.

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 7 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆಲುವು ದಾಖಲಿಸುವ ಮೂಲಕ ಸದ್ಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ ಕೊಹ್ಲಿ 7 ಇನಿಂಗ್ಸ್‌ಗಳಿಂದ 19.83ರ ಬ್ಯಾಟಿಂಗ್ ಸರಾಸರಿಯಲ್ಲಿ ಕೇವಲ 119 ರನ್‌ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಮುಂಬರುವ ದಿನಗಳಲ್ಲಾದರೂ ಕೊಹ್ಲಿ ಫಾರ್ಮ್‌ಗೆ ಮರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios