Asianet Suvarna News Asianet Suvarna News

IPL 2022 ಹಾರ್ದಿಕ್ ಪಾಂಡ್ಯ ಅರ್ಧಶತಕ, ಸನ್ ರೈಸರ್ಸ್ ಗೆ ಸವಾಲಿನ ಗುರಿ

ಹಾರ್ದಿಕ್ ಪಾಂಡ್ಯ 50*ರನ್ (42 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಕರ್ನಾಟಕದ ಅಭಿನವನ್ ಮನೋಹರ್ (Abhinav Manohar) 35ರನ್ (21 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿದ ಕಾರಣ ಗುಜರಾತ್ ಟೈಟಾನ್ಸ್ 7 ವಿಕೆಟ್ ಗೆ 162 ರನ್ ಪೇರಿಸಲು ಯಶಸ್ವಿಯಾಯಿತು. 

IPL 2022 SRH vs GT Hardik Pandya Shines With Half Century Gujarat Titans post 162 runs vs Sunrisers Hyderabad san
Author
Bengaluru, First Published Apr 11, 2022, 9:17 PM IST

ಮುಂಬೈ (ಏ. 11): ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ (Gujarat Titans ) ತಂಡ 15ನೇ ಆವೃತ್ತಿಯ ಐಪಿಎಲ್ ನ (IPL 2022) 21 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್  (Sunrisers Hyderabad) ತಂಡದ ಗೆಲುವಿಗೆ ಸವಾಲಿನ ಗುರಿ ನೀಡಿದೆ.

ಸೋಮವಾರ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಬ್ಯಾಟಿಂಗ್ ನೀರಸವಾಗಿತ್ತಾದರೂ, ಕೊನೆ ಹಂತದಲ್ಲಿ ಹಾರ್ದಿಕ್ ಪಾಂಡ್ಯ 50*ರನ್ (42 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಕರ್ನಾಟಕದ ಅಭಿನವನ್ ಮನೋಹರ್ (Abhinav Manohar) 35ರನ್ (21 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿದ ಕಾರಣ 7 ವಿಕೆಟ್ ಗೆ 162 ರನ್ ಪೇರಿಸಲು ಯಶಸ್ವಿಯಾಯಿತು. ಐಪಿಎಲ್ ನಲ್ಲಿ ಈವರೆಗೂ ಅಜೇಯವಾಗಿರುವ ಏಕೈಕ ತಂಡ ಗುಜರಾತ್ ಟೈಟಾನ್ಸ್. ಇನ್ನೊಂದೆಡೆ ಸನ್ ರೈಸರ್ಸ್ (SRH) ಆಡಿದ 3 ಪಂದ್ಯಗಳಲ್ಲಿ ಕೇವಲ 1 ಗೆಲುವು ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ (GT) ತಂಡಕ್ಕೆ ನಿರೀಕ್ಷೆ ಮಾಡಿದಂಥ ಆರಂಭ ಸಿಗಲಿಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ನಿರ್ವಹಣೆಯ ಮೂಲಕ ಗಮನಸೆಳೆದಿದ್ದ ಆರಂಭಿಕ ಬ್ಯಾಟ್ಸ್ ಮನ್ ಶುಭ್ ಮಾನ್ ಗಿಲ್ ಈ ಬಾರಿ ಅಲ್ಪ ಮೊತ್ತಕ್ಕೆ ಔಟಾದರು. ಇದು ಪವರ್ ಪ್ಲೇ ಅವಧಿಯಲ್ಲಿ ಗುಜರಾತ್  ಟೈಟಾನ್ಸ್ ತಂಡ ಕುಸಿತ ಕಾಣಲು ಕಾರಣವಾಯಿತು. ಫಾರ್ಮ್ ಕಂಡುಕೊಳ್ಳಲು ಒದ್ದಾಡುತ್ತಿದ್ದ ಭುವನೇಶ್ವರ್ ಕುಮಾರ್ ಮೊದಲ ಓವರ್ ನಲ್ಲಿಯೇ 17 ರನ್ ಬಿಟ್ಟುಕೊಟ್ಟರು. 

2ನೇ ಓವರ್ ಎಸೆಯಲು ಬಂದ ಮಾರ್ಕೋ ಜಾನ್ಸೆನ್ ಗೆ ಒಂದು ಬೌಂಡರಿ ಸಿಡಿಸ ಅಬ್ಬರಿಸುವ ಸೂಚನೆ ನೀಡಿದ್ದ ಶುಭ್ ಮಾನ್ ಗಿಲ್ ಮರು ಓವರ್ ನಲ್ಲಿಯೇ ಭುವನೇಶ್ವರ್ ಕುಮಾರ್ ಗೆ ಔಟಾದರು. 9 ಎಸೆತಗಳಲ್ಲಿ 7 ರನ್ ಬಾರಿಸಿದ್ದ ಭುವನೇಶ್ವರ್ ಕುಮಾರ್, ಬೌಂಡರಿ ಲೈನ್ ಬಳಿ ರಾಹುಲ್ ತ್ರಿಪಾಠಿ ಹಿಡಿದ ಅದ್ಭುತ ಕ್ಯಾಚ್ ಗೆ ಡಗ್ ಔಟ್ ಗೆ ತೆರಳಿದರು. ಗಿಲ್ ಸ್ಥಾನದಲ್ಲಿ ಆಡಲು ಬಂದ ಸಾಯಿ ಸುದರ್ಶನ್ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ಇರಲಿಲ್ಲ. 9 ಎಸೆತಗಳಲ್ಲಿ 11 ರನ್ ಬಾರಿಸಿದ್ದ ಸಾಯಿ ಸುದರ್ಶನ್, ನಟರಾಜನ್ ಎಸೆತದಲ್ಲಿ ಮಿಡ್ ಆಫ್ ನಲ್ಲಿ ವಿಲಿಯಮ್ಸನ್ ಗೆ ಕ್ಯಾಚ್ ನೀಡಿ ಹೊರನಡೆದರು. ಇದರಿಂದಾಗಿ ಪವರ್ ಪ್ಲೇ ಅವಧಿಯ 6 ಓವರ್ ಗಳಲ್ಲಿ ಗುಜರಾತ್ 2 ವಿಕೆಟ್ ಗೆ 51 ರನ್ ಬಾರಿಸಿತ್ತು.

ಪವರ್ ಪ್ಲೇ ಬಳಿಕ ದಾಳಿಗಿಳಿದ ಉಮ್ರಾನ್ ಮಲೀಕ್ ಅವರ ಮೊದಲ ಎಸೆತವೇ ಹಾರ್ದಿಕ್ ಪಾಂಡ್ಯ ಅವರ ಹೆಲ್ಮೆಟ್ ಗೆ ಬಡಿದಿತ್ತು. ಆದರೆ, ಹೆಚ್ಚಿನ ಅಪಾಯವಾಗದ ಕಾರಣ ಆಟ ಮುಂದುವರಿಸಿದ ಹಾರ್ದಿಕ್, ಉಮ್ರಾನ್ ಗೆ ಸತತ ಎರಡು ಬೌಂಡರಿ ಸಿಡಿಸಿ ಮಿಂಚಿದರು. ಇದೇ ಓವರ್ ನಲ್ಲಿ ಮ್ಯಾಥ್ಯೂ ವೇಡ್ ಅವರ ವಿಕೆಟ್ ಅನ್ನು ಉಮ್ರಾನ್ ಮಲೀಕ್ ಉರುಳಿಸಿದರು. ಗುಜರಾತ್ ಪರವಾಗಿ ಆಡಿದ ನಾಲ್ಕು ಪಂದ್ಯಗಳಿಂದ ಕೇವಲ 56 ರನ್ ಬಾರಿಸಿರುವ ವೇಡ್, ಮತ್ತೊಮ್ಮೆ ತಮ್ಮ ಕೆಟ್ಟ ನಿರ್ವಹಣೆ ಮುಂದುವರಿಸಿದರು. ಡೇವಿಡ್ ಮಿಲ್ಲರ್  (12) ಹಾಗೂ ಹಾರ್ದಿಕ್ ಪಾಂಡ್ಯ 4ನೇ ವಿಕೆಟ್ ಗೆ 40 ರನ್ ಜೊತೆಯಾಟವಾಡಿದರು. ಇದರಲ್ಲಿ ಬಹುಪಾಲು ರನ್ ಗಳು ಪಾಂಡ್ಯ ಬಾರಿಸಿದ್ದರು. 15 ಎಸೆತಗಳಲ್ಲಿ 12 ರನ್ ಬಾರಿಸಿದ್ದ ಮಿಲ್ಲರ್, 14ನೇ ಓವರ್ ನಲ್ಲಿ ಜಾನ್ಸೆನ್ ಗೆ ಔಟಾದರು.

100 ಐಪಿಎಲ್ ಸಿಕ್ಸರ್ ದಾಖಲೆ ಮಾಡಿದ ಹಾರ್ದಿಕ್ ಪಾಂಡ್ಯ: ಹಾರ್ದಿಕ್ ಪಾಂಡ್ಯ ತಮ್ಮ ಇನ್ನಿಂಗ್ಸ್ ನ ಹಾದಿಯಲ್ಲಿ 100 ಐಪಿಎಲ್ ಸಿಕ್ಸರ್ ಪೂರ್ತಿ ಮಾಡಿದ ಸಾಧನೆ ಮಾಡಿದರು. ಐಪಿಎಲ್ ನಲ್ಲಿ 100 ಸಿಕ್ಸರ್ ಸಿಡಿಸಿದ 26ನೇ ಆಟಗಾರ ಹಾರ್ದಿಕ್ ಪಾಂಡ್ಯ. ತಮ್ಮ ಈ ಸಾಧನೆಗಾಗಿ ಪಾಂಡ್ಯ ಕೇವಲ 1046 ಎಸೆತಗಳನ್ನು ಆಡಿದ್ದಾರೆ. ಐಪಿಎಲ್ ನಲ್ಲಿ ಅತಿವೇಗವಾಗಿ 100 ಸಿಕ್ಸರ್ ಸಿಡಿಸಿ ಮೊದಲ ಭಾರತೀಯ ಹಾಗೂ ಒಟ್ಟಾರೆ 3ನೇ ಬ್ಯಾಟ್ಸ್ ಮನ್ ಹಾರ್ದಿಕ್ ಪಾಂಡ್ಯ ಎನಿಸಿದ್ದಾರೆ.  ಆಂಡ್ರೆ ರಸೆಲ್ ಕೇವಲ 657 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರೆ, ಕ್ರಿಸ್ ಗೇಲ್ ಐಪಿಎಲ್ ನಲ್ಲಿ 100 ಸಿಕ್ಸರ್ ಸಿಡಿಸಲು 943 ಎಸೆತ ಎದುರಿಸಿದ್ದರು.

Latest Videos
Follow Us:
Download App:
  • android
  • ios