ಹಾಫ್ ಸೆಂಚುರಿ ಸಿಡಿಸಿದ ಶುಭ್‌ಮನ್ ಗಿಲ್ ಲಖನೌ ದಾಳಿಗೆ ತತ್ತರಿಸಿದ ಟೈಟಾನ್ಸ್ 4 ವಿಕೆಟ್ ನಷ್ಟಕ್ಕೆ 144 ರನ್ ಸಿಡಿಸಿದ ಗುಜರಾತ್  

ಪುಣೆ(ಮೇ.10): ಘಟಾನುಘಟಿ ಬ್ಯಾಟ್ಸ್‌ಮನ್‌ಗಳ ವೈಫಲ್ಯ, ಶುಭಮನ್ ಗಿಲ್ ಏಕಾಂಗಿ ಹೋರಾಟ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 4 ವಿಕೆಟ್ ನಷ್ಟಕ್ಕೆ 144 ರನ್ ಸಿಡಿಸಿದೆ.

ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟಾನ್ಸ್ ಆರಂಭದಲ್ಲೇ ವೃದ್ಧಿಮಾನ್ ಸಾಹ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. 8 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡ ಗುಜರಾತ್ ಟೈಟಾನ್ಸ್ 24 ರನ್‌ಗೆ 2ನೇ ವಿಕೆಟ್ ಕಳೆದುಕೊಂಡಿತು. ಶುಭಮನ್ ಗಿಲ್ ಹೋರಾಟ ನಡೆಸಿದರೆ, ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ.

IPL 2022: ಹ್ಯಾಟ್ರಿಕ್ ಸೋಲಿನ ಬಳಿಕ ಕೆರಳಿದ ನಿಂತ RCB ಬಾಯ್ಸ್

ಮಾಥ್ಯೂವೇಡ್ ಕೇವಲ 10 ರನ್ ಸಿಡಿಸಿ ಔಟಾದರು. ನಾಯಕ ಹಾರ್ದಿಕ್ ಪಾಂಡ್ಯ 11 ರನ್ ಸಿಡಿಸಿ ಔಟಾದರು. ಡೇವಿಡ್ ಮಿಲ್ಲರ್ ಹಾಗೂ ಗಿಲ್ ಜೊತೆಯಾಟದಿಂದ ಗುಜರಾತ್ ಚೇತರಿಸಿಕೊಂಡಿತು. ಗಿಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.

ಡೇವಿಡ್ ಮಿಲ್ಲರ್ 24 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು. ಈ ಮೂಲಕ ಮಿಲ್ಲರ್ ಹಾಗೂ ಗಿಲ್ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ಅಂತಿಮ ಹಂತದಲ್ಲಿ ಗಿಲ್ ಹಾಗೂ ರಾಹುಲ್ ಟಿವಾಟಿಯಾ ಹೋರಾಟ ಗುಜರಾತ್ ಟೈಟಾನ್ಸ್ ರನ್ ವೇಗ ಹೆಚ್ಚಿಸಿತು.

ಗಿಲ್ 49 ಎಸೆತದಲ್ಲಿ ಅಜೇಯ 63 ರನ್ ಸಿಡಿಸಿದರೆ, ಟಿವಾಟಿಯಾ 16 ಎಸೆತದಲ್ಲಿ ಅಜೇಯ 22 ರನ್ ಸಿಡಿಸಿದರು. ಈ ಮೂಲಕ 4 ವಿಕೆಟ್ ನಷ್ಟಕ್ಕೆ 144 ರನ್ ಸಿಡಿಸಿತು. 

IPL 2022: ರಾಕಿ ಭಾಯ್​​​ಗೆ ವೈಲೆನ್ಸ್ ಹಿಡಿಸಲ್ಲ, ಡಿಕೆ ಬಾಸ್​​​ಗೆ ಸಿಕ್ಸರ್ಸ್​ ಹಿಡಿಸಲ್ಲ..!

ಲಖನೌ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ಐಪಿಎಲ್ 2022 ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಗಳು. ಲಖನೌ 11 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದೆ. ಈ ಮೂಲಕ 16 ಅಂಕ ಸಂಪಾದಿಸಿದೆ. ಗುಜರಾತ್ ಟೈಟಾನ್ಸ್ ಕೂಡ 11 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದುಕೊಂಡಿದೆ. ಇಂದು ಗೆದ್ದ ತಂಡ ನೇರವಾಗಿ ಪ್ಲೇ ಆಫ್‌ಗೆ ಕಾಲಿಫೈ ಆಗಲಿದೆ. 

ಪ್ಲೇ-ಆಫ್‌ಗೇರುವ ಮೊದಲ ತಂಡ ಯಾವುದು?
15ನೇ ಆವೃತ್ತಿ ಐಪಿಎಲ್‌ನಲ್ಲಿ ಅಧಿಕೃತವಾಗಿ ಪ್ಲೇ-ಆಫ್‌ ಪ್ರವೇಶಿಸಿದ ಮೊದಲ ತಂಡ ಎನಿಸಿಕೊಳ್ಳುವ ಕಾತರದಲ್ಲಿರುವ ಲಖನೌ ಸೂಪರ್‌ ಜೈಂಟ್ಸ್‌ ಹಾಗೂ ಗುಜರಾತ್‌ ಟೈಟಾನ್ಸ್‌ ತಂಡಗಳು ಮಂಗಳವಾರ ಪರಸ್ಪರ ಮುಖಾಮುಖಿಯಾಗಲಿವೆ.

ಉಭಯ ತಂಡಗಳೂ ತಲಾ 11 ಪಂದ್ಯಗಳನ್ನಾಡಿದ್ದು, ತಲಾ 8ರಲ್ಲಿ ಗೆಲುವು ಸಾಧಿಸಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇ-ಆಫ್‌ ಸ್ಥಾನ ಅಧಿಕೃತಗೊಳಿಸಿಕೊಳ್ಳಲಿದೆ. ಸದ್ಯ ಲಖನೌ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಟೈಟಾನ್ಸ್‌ 2ನೇ ಕಾಯ್ದುಕೊಂಡಿದೆ. ಹಾರ್ದಿಕ್‌ ನಾಯಕತ್ವದ ಟೈಟಾನ್ಸ್‌ ಅಬ್ಬರದ ಪ್ರದರ್ಶನ ನೀಡಿದ್ದರೂ ಕಳೆದೆರಡು ಪಂದ್ಯಗಳಲ್ಲಿ ಪಂಜಾಬ್‌ ಹಾಗೂ ಮುಂಬೈ ವಿರುದ್ಧ ಸೋತು ಅಗ್ರಸ್ಥಾನ ಕಳೆದುಕೊಂಡಿತ್ತು. ಅತ್ತ ಲಖನೌ ಕಳೆದ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಟೈಟಾನ್ಸ್‌ಗೆ ಶರಣಾಗಿದ್ದ ಕೆ.ಎಲ್‌.ರಾಹುಲ್‌ ಸಾರಥ್ಯದ ಲಖನೌ ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.