144 ರನ್‌ಗಳಿಗೆ ರಾಜಸ್ಥಾನ ತಂಡ ಕಟ್ಟಿ ಹಾಕಿದ ಬೆಂಗಳೂರು ಆರ್‌ಸಿಬಿ ಮಾರಕ ದಾಳಿಗೆ ತತ್ತರಿಸಿದ ರಾಜಸ್ಥಾನ ರಿಯಾನ್ ಪರಾಗ್ ಏಕಾಂಗಿ ಹೋರಾಟ, ಅರ್ಧಶತಕ  

ಪುಣೆ(ಏ.26): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರಕ ದಾಳಿಗೆ ರಾಜಸ್ಥಾನ ರಾಯಲ್ಸ್ ಅಬ್ಬರಿಸಲು ವಿಫಲವಾಗಿದೆ. ರಿಯಾನ್ ಪರಾಗ್ ಹೊರತು ಪಡಿಸಿ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್ ನಿರೀಕ್ಷಿತ ಹೋರಾಟ ನೀಡಲು ಆರ್‌ಸಿಬಿ ಅವಕಾಶ ನೀಡಲಿಲ್ಲ. ಪರಿಣಾಮ ರಾಜಸ್ಥಾನ ರಾಯಲ್ಸ್ ತಂಡವನ್ನು ಆರ್‌ಸಿಬಿ 144 ರನ್‌ಗಳಿಗೆ ಕಟ್ಟಿ ಹಾಕಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರಂಭದಲ್ಲೇ ಜೋಶ್ ಹೇಜಲ್‌ವುಡ್ ಶಾಕ್ ನೀಡಿದರು. ಬಳಿಕ ಮೊಹಮ್ಮದ್ ಸಿರಾಜ್, ವಾನಿಂದು ಹಸರಂಗ ಹಾಗೂ ಹರ್ಷಲ್ ಪಟೇಲ್ ದಾಳಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿತು.

Rishi Dhavan: ಪಂಜಾಬ್‌ ಪರ ಆಡಿದ ರಿಷಿ ಧವನ್‌ ಗ್ಲಾಸ್‌ ಫೇಸ್‌ ಶೀಲ್ಡ್‌ ಧರಿಸಿದ್ದೇಕೆ?

ಜೋಸ್ ಬಟ್ಲರ್ ಕೇವಲ 8 ರನ್ ಸಿಡಿಸಿ ಔಟಾದರೆ, ದೇವದತ್ ಪಡಿಕ್ಕಲ್ 7 ರನ್ ಸಿಡಿಸಿ ನಿರ್ಗಮಿಸಿದರು. ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದ ಆರ್ ಅಶ್ವಿನ್ 17 ರನ್ ಸಿಡಿಸಿ ಔಟಾದರು. ನಾಯಕ ಸಂಜು ಸ್ಯಾಮ್ಸನ್ 27 ರನ್ ಕಾಣಿಕೆ ನೀಡಿದರು. 68 ರನ್‌ಗೆ 4 ವಿಕೆಟ್ ಕಳೆದುಕೊಂಡ ರಾಜಸ್ಥಾನ ರಾಯಲ್ಸ್ ತಂಡಕ್ಕೆ ರಿಯಾನ್ ಪರಾಗ್ ಹೋರಾಟ ನೆರವಾಯಿತು.

ಡರಿಲ್ ಮಿಚೆಲ್ 16 ರನ್ ಸಿಡಿಸಿ ನಿರ್ಗಮಿಸಿದರು. ಪರಾಗ್ ಏಕಾಂಗಿ ಹೋರಾಟ ನೀಡಿದರು. ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಪರಾಗ್ ಹಾಫ್ ಸೆಂಚುರಿ ಸಿಡಿಸಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡಿದರು. ರಿಯಾನ್ ಪರಾಗ್ 31 ಎಸೆತದಲ್ಲಿ 51 ರನ್ ಸಿಡಿಸಿ ಔಟಾದರು.

ಶಿಮ್ರೊನ್ ಹೆಟ್ಮೆಯರ್ 3 ರನ್ ಸಿಡಿಸಿ ನಿರ್ಗಮಿಸಿದರು. ಟ್ರೆಂಟ್ ಬೋಲ್ಟ್ 5 ರನ್ ಸಿಡಿಸಿದರು. ಪ್ರಸಿದ್ಧ್ ಕೃಷ್ಣ 2 ರನ್ ಸಿಡಿಸಿ ಔಟಾದರು. ರಾಜಸ್ಥಾನ ರಾಯಲ್ಸ್ 8 ವಿಕೆಟ್ ನಷ್ಟಕ್ಕೆ 144 ರನ್ ಸಿಡಿಸಿತು.

ಐಪಿಎಲ್‌ನಲ್ಲಿ Shikhar Dhawan 6 ಸಾವಿರ ರನ್, ಕೊಹ್ಲಿಯನ್ನು ಹಿಂಬಾಲಿಸುತ್ತಾರೆ ಗಬ್ಬರ್‌ ಸಿಂಗ್..!

ಅಂಕಪಟ್ಟಿ
ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. 7ರಲ್ಲಿ 6 ಪಂದ್ಯಗಳನ್ನು ಗೆದ್ದುಕೊಂಡು ಈ ಬಾರಿ ಪ್ರಬಲ ತಂಡವಾಗಿ ಗುಜರಾತ್ ಟೈಟಾನ್ಸ್ ಗುರುತಿಸಿಕೊಂಡಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ 7 ರಲ್ಲಿ 5 ಪಂದ್ಯ ಗೆದ್ದು 2ನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ 7ರಲ್ಲಿ 5 ಪಂದ್ಯಗಳನ್ನು ಗೆದ್ದು 3ನೇ ಸ್ಥಾನದಲ್ಲಿದೆ. ಲಖನೌ ಸೂಪರ್‌ ಜೈಂಟ್ಸ್ 8 ಪಂದ್ಯಗಳಲ್ಲಿ 5 ರಲ್ಲಿ ಗೆಲುವು ದಾಖಲಿಸಿ 4ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8ರಲ್ಲಿ 5 ಪಂದ್ಯ ಗೆದ್ದು 5ನೇ ಸ್ಥಾನದಲ್ಲಿದೆ. 

ರಾಯಲ್ ಚಾಲೆಂಜರ್ಸ್ ಪ್ಲೇಯಿಂಗ್ 11
ಫಾಫ್ ಡುಪ್ಲೆಸಿಸ್(ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮೆಕ್ಸ್‌ವೆಲ್, ಸುಯಷ್ ಪ್ರಭುದೇಸಾಯಿ, ರಜತ್ ಪಾಟಿದಾರ್, ಶಹಬಾಜ್ ಅಹಮ್ಮದ್, ದಿನೇಶ್ ಕಾರ್ತಿಕ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹೇಜಲ್‌ವುಡ್, ಮೊಹಮ್ಮದ್ ಸಿರಾಜ್

ರಾಜಸ್ಥಾನ ರಾಯಲ್ಸ್ ಪ್ಲೇಯಿಂಗ್ 11
ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಡರಿಲ್ ಮೆಚೆಲ್, ಆರ್ ಅಶ್ವಿನ್, ಟ್ರೆಂಟ್ ಬೋಲ್ಟ್, ಕುಲ್ದೀಪ್ ಸೇನೆ, ಪ್ರಸಿದ್ಧ್ ಕೃಷ್ಣ, ಯಜುವೇಂದ್ರ ಚಹಾಲ್