Asianet Suvarna News Asianet Suvarna News

IPL 2022: ಆರ್‌ಸಿಬಿ ತಂಡದಲ್ಲೇ ಉಳಿಯುತ್ತಾರಾ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್..?

* 15ನೇ ಆವೃತ್ತಿಯ ಐಪಿಎಲ್‌ಗೆ ಭರದಿಂದ ಸಿದ್ದತೆಗಳು ಆರಂಭ

* ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ರೀಟೈನ್‌ ಮಾಡಿಕೊಳ್ಳಲು ನವೆಂಬರ್ 30ರ ವರೆಗೆ ಗಡುವು

* ಯಾವ ಫ್ರಾಂಚೈಸಿ ಯಾರನ್ನು ರೀಟೈನ್ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ

IPL 2022 RCB Likely to Retain Virat Kohli Glenn Maxwell ahead of Mega Auction Says Report kvn
Author
Bengaluru, First Published Nov 26, 2021, 11:34 AM IST
  • Facebook
  • Twitter
  • Whatsapp

ಮುಂಬೈ(ನ.26): ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ (Indian Premier League) 15ನೇ ಆವೃತ್ತಿಗೆ ಸಿದ್ಧತೆಗಳು ಶುರುವಾಗಿದ್ದು, ತಂಡಗಳು ಆಟಗಾರರ ರಿಟೈನ್‌ ಮಾಡುವ ಪ್ರಕ್ರಿಯೆಯಲ್ಲಿ ನಿರತವಾಗಿವೆ. ಇದೇ ನವೆಂಬರ್ 30ರೊಳಗೆ ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನು (ಹಳೆಯ 8) ತಂಡಗಳು ಬಿಸಿಸಿಐಗೆ ಸಲ್ಲಿಸಬೇಕಾಗಿದೆ.

ಇನ್ನು ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು(ಆರ್‌ಸಿಬಿ) (RCB), ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ವಿರಾಟ್‌ ಕೊಹ್ಲಿ (Virat Kohli)ಯನ್ನು ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಕೊಹ್ಲಿ ಜತೆಗೆ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ (Glenn Maxwell) ಹಾಗೂ ತಾರಾ ಸ್ಪಿನ್ನರ್‌ ಯಜುವೇಂದ್ರ ಚಹಲ್‌ರನ್ನೂ ಆರ್‌ಸಿಬಿ ಉಳಿಸಿಕೊಳ್ಳಲಿದೆ. ಇನ್ನೂ 4ನೇ ಸ್ಥಾನಕ್ಕಾಗಿ ಮೊಹಮ್ಮದ್‌ ಸಿರಾಜ್‌ ಹಾಗೂ ಹರ್ಷಲ್‌ ಪಟೇಲ್‌ (Harshal Patel) ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಕಳೆದ ಆವೃತ್ತಿಯಲ್ಲಿ ಮಿಂಚಿದ್ದ ಹರ್ಷಲ್‌ಗೆ ಆರ್‌ಸಿಬಿ ಮಣೆ ಹಾಕಲಿದೆ ಎಂದು ಹೇಳಲಾಗಿದೆ. ಡೆತ್ ಓವರ್‌ನಲ್ಲಿ ವೇಗಿಗಳಾದ ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ಪರಿಣಾಮಕಾರಿ ದಾಳಿ ನಡೆಯುವ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ ಬೆಂಗಳೂರ ಮೂಲದ ಫ್ರಾಂಚೈಸಿ ಉಭಯ ಸಂಕಟಕ್ಕೆ ಸಿಲುಕಿದೆ. ಆಟಗಾರರ ರೀಟೈನ್‌ ಕುರಿತು ಆರ್‌ಸಿಬಿ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.

ರಾಹುಲ್‌ ಹೊಸ ತಂಡಕ್ಕೆ ನಾಯಕ?:

ಪಂಜಾಬ್‌ ಕಿಂಗ್ಸ್‌ನಿಂದ (Punjab Kings) ಕೆ.ಎಲ್‌.ರಾಹುಲ್‌, ಡೆಲ್ಲಿ ಕ್ಯಾಪಿಟಲ್ಸ್‌ನಿಂದ ಶ್ರೇಯಸ್‌ ಅಯ್ಯರ್‌ (Shreyas Iyer), ಸನ್‌ರೈಸ​ರ್ಸ್‌ ಹೈದ್ರಾಬಾದ್‌ನಿಂದ ಡೇವಿಡ್‌ ವಾರ್ನರ್‌ (David Warner) ಹೊರ ಬರುವುದು ಬಹುತೇಕ ಖಚಿತವಾಗಿದೆ. ಆದಕಾರಣ ಹೊಸ ಫ್ರಾಂಚೈಸಿಗಳು ಈ ಮೂವರನ್ನು ತಮ್ಮತ್ತಾ ಸೆಳೆಯಲು ಕಸರತ್ತು ನಡೆಸುತ್ತೀವೆ. ಈಗಾಗಲೇ ಲಕ್ನೋ ತಂಡ ರಾಹುಲ್‌ರನ್ನು ತಮ್ಮ ತೆಕ್ಕೆಗೆ ಸೆಳೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ರೋಹಿತ್‌ ಮುಂಬೈನಲ್ಲೇ:

ಇನ್ನುಳಿದಂತೆ ಮುಂಬೈ ಇಂಡಿಯನ್ಸ್‌ (Mumbai Indians) ತನ್ನ ಅದೃಷ್ಟದ ನಾಯಕ ರೋಹಿತ್‌ ಶರ್ಮಾ (Rohit Sharma) ಜತೆಗೆ ವೇಗಿ ಜಸ್ಟ್ರೀತ್‌ ಬುಮ್ರಾ (Jasprit Bumrah), ಇಶಾನ್‌ ಕಿಶನ್‌ರನ್ನು ಉಳಿಸಿಕೊಳ್ಳುವುದು ಖಚಿತ ಎನ್ನಲಾಗಿದೆ. 4ನೇ ಆಟಗಾರನಾಗಿ ಕೀರನ್‌ ಪೊಲ್ಲಾರ್ಡ್‌ ಅಥವಾ ವೇಗಿ ಟ್ರೆಂಟ್‌ ಬೌಲ್ಟ್‌ ಇಬ್ಬರಲ್ಲಿ ಯಾರನ್ನು ಉಳಿಸಿಕೊಳ್ಳಬೇಕೆಂಬ ಗೊಂದಲದಲ್ಲಿದೆ.

IPL 2022: ಸಂಭಾವ್ಯ ವೇಳಾಪಟ್ಟಿ ಪ್ರಕಟ, ಚೆನ್ನೈನಲ್ಲಿ ಮೊದಲ ಪಂದ್ಯ..?

ಕೂಲ್‌ ಕ್ಯಾಪ್ಟನ್‌ ಎಂ.ಎಸ್‌.ಧೋನಿ (MS Dhoni) ಇನ್ನೂ 3 ವರ್ಷ ಚೆನ್ನೈ ಸೂಪರ್‌ಕಿಂಗ್ಸ್‌ನಲ್ಲೇ (Chennai Super Kings) ಉಳಿಯಲಿದ್ದಾರೆ ಎಂಬ ಸುದ್ದಿಯ ಮೂಲಕ ಹರಡಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ. ಧೋನಿಯನನ್ನು ಒಪ್ಪಿಸುವಲ್ಲಿ ತಂಡದ ಮ್ಯಾನೇಜ್‌ಮೆಂಟ್‌ ಯಶಸ್ವಿಯಾಗಿದೆ. ರವೀಂದ್ರ ಜಡೇಜಾ, ಋುತುರಾಜ್‌ ಗಾಯಕ್ವಾಡ್‌ ಮೇಲೆ ಕಣ್ಣಿರಿಸಿದ್ದು, ಸ್ಯಾಮ್‌ ಕರ್ರನ್‌ ಅಥವಾ ಮೊಯಿನ್‌ ಅಲಿ ಇಬ್ಬರಲ್ಲಿ ಒಬ್ಬರನ್ನು ರಿಟೈನ್‌ ಮಾಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಮೋಯಿನ್ ಅಲಿ (Moeen Ali) ಹರಾಜಿನಲ್ಲಿ ಪಾಲ್ಗೊಂಡರೇ ಸ್ಯಾಮ್ ಕರ್ರನ್ ಅವರನ್ನು ನಾಲ್ಕನೇ ಆಟಗಾರನಾಗಿ ರೀಟೈನ್‌ ಮಾಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಇನ್ನು ರಾಜಸ್ಥಾನ ರಾಯಲ್ಸ್‌ (Rajasthan Royals) ಫ್ರಾಂಚೈಸಿ ತನ್ನ ನಾಯಕ ಸಂಜು ಸ್ಯಾಮ್ಸನ್‌ (Sanju Samson) ಅವರನ್ನು ಮೊದಲ ಆಧ್ಯತೆಯ ಆಟಗಾರನಾಗಿ ರೀಟೈನ್‌ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದಾದ ಬಳಿಕ ಜೋಸ್ ಬಟ್ಲರ್, ಜೋಫ್ರಾ ಆರ್ಚರ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ರೀಟೈನ್‌ ಮಾಡಿಕೊಳ್ಳಲು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಒಲವು ತೋರಿದೆ ಎನ್ನಲಾಗಿದೆ. 

ಈ ಬಾರಿಯ ಮೆಗಾ ಹರಾಜಿನಲ್ಲಿ (IPL Mega Auction) ಆಟಗಾರರನ್ನು ಖರೀದಿಸಲು ಈಗಿದ್ದ ಮಿತಿಗಿಂತ 5 ಕೋಟಿ ರುಪಾಯಿ ಹೆಚ್ಚಿಗೆ ವ್ಯಯಿಸಲು ಫ್ರಾಂಚೈಸಿಗಳಿಗೆ ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ 90 ಕೋಟಿ ರುಪಾಯಿ ಬಜೆಟ್‌ನಲ್ಲಿ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸಬಹುದಾಗಿದೆ. ಒಂದು ವೇಳೆ ಹಾಲಿ ಫ್ರಾಂಚೈಸಿಯೊಂದು ಮೆಗಾ ಹರಾಜಿಗೂ ಮುನ್ನ 4 ಆಟಗಾರರನ್ನು ರೀಟೈನ್ ಮಾಡಿಕೊಂಡರೆ 42 ಕೋಟಿ ರುಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅಂದರೆ ಮೊದಲ ರೀಟೈನ್ ಆಟಗಾರನಿಗೆ 16 ಕೋಟಿ ರೂ, ಎರಡನೇ ಆಟಗಾರನಿಗೆ 12 ಕೋಟಿ, ಮೂರನೇ ಆಟಗಾರನಿಗೆ 8 ಕೋಟಿ ಹಾಗೂ ನಾಲ್ಕನೇ ಆಟಗಾರನಿಗೆ 6 ಕೋಟಿ ರುಪಾಯಿ ವ್ಯಯಿಸಬೇಕಾಗುತ್ತದೆ.

Follow Us:
Download App:
  • android
  • ios