IPL 2022 ಚಾಹಲ್ ಗೆ ಹ್ಯಾಟ್ರಿಕ್ ತಪ್ಪಿಸಿದ ಕರುಣ್, ಮುಂಬೈಗೆ ಸೋಲಿನ ಗಿಫ್ಟ್ ನೀಡಿದ ರಾಯಲ್ಸ್!

ಹಾಲಿ ಆವೃತ್ತಿಯ ಐಪಿಎಲ್ ನಲ್ಲಿ ಮೊದಲ ಶತಕ ಬಾರಿಸಿದ ದಾಖಲೆ ಮಾಡಿದ ಜೋಸ್ ಬಟ್ಲರ್ ಅವರ ಸಿಡಿಲಬ್ಬರದ ಇನ್ನಿಂಗ್ಸ್ ಹಾಗೂ ಬೌಲರ್ ಗಳ ಸಾಂಘಿಕ ಪ್ರಯತ್ನದಿಂದ ರಾಜಸ್ಥಾನ ರಾಯಲ್ಸ್ ತಂಡ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದೆ. ಅದರೊಂದಿಗೆ ಐಪಿಎಲ್ ಆರಂಭದಲ್ಲಿ ಮುಂಬೈ ತಂಡದ ಸತತ ಸೋಲುಗಳು ಈ ಬಾರಿಯೂ ಮುಂದುವರಿದಿದೆ.

IPL 2022 MI vs RR Jos Buttler hits Century and Bowlers held Rajasthan Royals beat Mumbai Indians san

ಮುಂಬೈ (ಏ. 2): ಕೊನೇ ಓವರ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಗೆಲುವಿಗೆ 29 ರನ್ ಬೇಕಿದ್ದ ಹಂತದಲ್ಲಿ ನವದೀಪ್ ಸೈನಿ ಭರ್ಜರಿ ದಾಳಿ ನಡೆಸಿ ಕೈರಾನ್ ಪೊಲ್ಲಾರ್ಡ್ (Kieron Pollard) ಅವರನ್ನು ಕಟ್ಟಿಹಾಕಿದ್ದರಿಂದ ರಾಜಸ್ಥಾನ ರಾಯಲ್ಸ್ ತಂಡಕ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಸತತ 2ನೇ ಗೆಲುವು ಕಂಡಿದೆ. ಇನ್ನೊಂದೆಡೆ ಐಪಿಎಲ್ ಆರಂಭದಲ್ಲಿ ಸಾಲು ಸಾಲು ಸೋಲು ಕಾಣುವ ಮುಂಬೈ ಇಂಡಿಯನ್ಸ್ ತಂಡದ ಪರಿಪಾಠ ಈ ಬಾರಿಯೂ ಮುಂದುವರಿದಿದ್ದು ಸತತ 2ನೇ ಸೋಲು ಕಂಡಿದೆ. ರಾಜಸ್ಥಾನ ರಾಯಲ್ಸ್ ತಂಡ 23 ರನ್ ಗಳಿಂದ ಮುಂಬೈ ಇಂಡಿಯನ್ಸ್ (Mumbai Indians ) ತಂಡವನ್ನು ಸೋಲಿಸಿತು. 

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ (Rajasthan Royals) ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಜೋಸ್ ಬಟ್ಲರ್ (Jose Buttler) (100 ರನ್, 68 ಎಸೆತ, 11 ಬೌಂಡರಿ, 5 ಸಿಕ್ಸರ್) ಹಾಗೂ ಶಿಮ್ರೋನ್ ಹೆಟ್ಮೆಯರ್ (Shimron Hetmyer) (35 ರನ್, 14 ಎಸೆತ, 3 ಬೌಂಡರಿ, 3 ಸಿಕ್ಸರ್) ಸಾಹಸದಿಂದ 8 ವಿಕೆಟ್ ಗೆ 193 ರನ್ ಬಾರಿಸಿತ್ತು. ಪ್ರತಿಯಾಗಿ ಇಶಾನ್ ಕಿಶನ್ (Ishan Kishan) ಹಾಗೂ ತಿಲಕ್ ವರ್ಮ್ (Tilak Verma) ಬಾರಿಸಿದ ಅರ್ಧತಕದ ಮೂಲಕ ಯಶಸ್ವಿ ಚೇಸಿಂಗ್ ನಡೆಸುವ ವಿಶ್ವಾಸದಲ್ಲಿತ್ತು.  ಗೆಲುವಿಗೆ 9 ಎಸೆತದಲ್ಲಿ 36 ರನ್ ಬೇಕಿದ್ದಾಗ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಕೈರಾನ್ ಪೊಲ್ಲಾರ್ಡ್ ಅವರ ಬಹಳ ಸುಲಭದ ಕ್ಯಾಚ್ ಅನ್ನು ಬೌಂಡರಿ ಲೈನ್ ಬಳಿ ಕೈಚೆಲ್ಲಿದ್ದರು. ಆದರೆ, ಈ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗೆ 170 ರನ್ ಬಾರಿಸಿ ಸೋಲು ಕಂಡಿತು. 

ಚೇಸಿಂಗ್ ಆರಂಭಿಸಿದ ಮುಂಬೈ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 15 ರನ್ ಆಗಿದ್ದ ವೇಳೆ ನಾಯಕ ರೋಹಿತ್ ಶರ್ಮ, ಪ್ರಸಿದ್ಧಕೃಷ್ಣಗೆ ವಿಕೆಟ್ ಒಪ್ಪಿಸಿದರೆ, 4 ಎಸೆತಗಳಲ್ಲಿ 5 ರನ್ ಬಾರಿಸಿದ್ದ ಅನ್ಮೋಲ್ ಪ್ರೀತ್ ಸಿಂಗ್ ತಂಡದ ಮೊತ್ತ 40 ರನ್ ಆಗಿದ್ದಾಗ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಯಾದ ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಮೂರನೇ ವಿಕೆಟ್‌ಗೆ 81 ರನ್‌ಗಳ ಜೊತೆಯಾಟವಾಡಿ ಮುಂಬೈ ಇಂಡಿಯನ್ಸ್ ಗೆ ಚೇತರಿಕೆ ನೀಡಿದರು.

ಇವರಿಬ್ಬರೂ ಆಡುವ ವೇಳೆ ಮುಂಬೈ ಇಂಡಿಯನ್ಸ್ ತಂಡ ಸುಲಭವಾಗಿ ಗೆಲುವು ಸಾಧಿಸಲಿದೆ ಎಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದರೆ, 14 ರನ್ ಗಳ ಅಂತರದಲ್ಲಿ ವೈಯಕ್ತಿಕ ಅರ್ಧಶತಕ ಬಾರಿಸಿದ್ದ ಇವರಿಬ್ಬರ ವಿಕೆಟ್ ಗಳನ್ನು ಉರುಳಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ತಿರುಗೇಟು ನೀಡಿತು.  ಇಶಾನ್ ಕಿಶನ್ 54 ರನ್ ( 43 ಎಸೆತ, 5 ಬೌಂಡರಿ, 1ಸಿಕ್ಸರ್) ಸಿಡಿಸಿ ಬೌಲ್ಟ್ ಎಸೆತದಲ್ಲಿ ನವದೀಪ್ ಸೈನಿಗೆ ವಿಕೆಟ್ ನೀಡಿ ನಿರ್ಗಮಿಸಿದರು. ಇನ್ನೊಂದೆಡೆ ಎದುರಿಸಿದ 33 ಎಸೆತಗಳಿಂದ 3 ಬೌಂಡರಿ ಹಾಗೂ 5 ಆಕರ್ಷಕ ಸಿಕ್ಸರ್ ನೊಂದಿಗೆ 61 ರನ್ ಬಾರಿಸಿದ್ದ ತಿಲಕ್ ವರ್ಮ 15ನೇ ಓವರ್ ನಲ್ಲಿ ಅಶ್ವಿನ್ ಎಸೆತದಲ್ಲಿ ಬೌಲ್ಡ್ ಆಗುವುದರೊಂದಿಗೆ ಮುಂಬೈ ಹಿನ್ನಡೆ ಕಂಡಿತ್ತು.

16ನೇ ಓವರ್ ಮಾಡಲು ದಾಳಿಗಿಳಿದ ಯಜುವೇಂದ್ರ ಚಾಹಲ್ ಮೊದಲ ಎಸೆತದಲ್ಲಿ ಟಿಮ್ ಡೇವಿಡ್ ವಿಕೆಟ್ ಉರುಳಿಸಿದರೆ, ಮರು ಎಸೆತದಲ್ಲಿ ಡೇನಿಯಲ್ ಸ್ಯಾಮ್ಸ್ ಜೋಸ್ ಬಟ್ಲರ್ ಹಿಡಿದ ಆಕರ್ಷಕ ಕ್ಯಾಚ್ ಗೆ ಹೊರನಡೆದರು. ಹ್ಯಾಟ್ರಿಕ್ ನಿರೀಕ್ಷೆಯಲ್ಲಿದ್ದ ಯಜುವೇಂದ್ರ ಚಾಹಲ್, ಬ್ಯಾಟಿಂಗ್ ಮಾಡಲು ಬಂದ ಮುರುಗನ್ ಅಶ್ವಿನ್ ಗೆ ಅದ್ಭುತ ಎಸೆತವನ್ನು ಹಾಕಿದ್ದರು. ಅವರ ಬ್ಯಾಟ್ ಗೆ ತಾಕಿದ ಚೆಂಡು ಸ್ಲಿಪ್ ನತ್ತ ಹಾರಿತು. ಮೊದಲ ಸ್ಲಿಪ್ ನಲ್ಲಿ ಕರುಣ್ ನಾಯರ್ ಕ್ಯಾಚ್ ಕೈಚೆಲ್ಲುವುದರೊಂದಿಗೆ ಚಾಹಲ್ ಅವರಿಗೆ ಹ್ಯಾಟ್ರಿಕ್ ನಿರಾಕರಿಸಿದರು.

Latest Videos
Follow Us:
Download App:
  • android
  • ios