* ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ ಜೇಸನ್ ರಾಯ್* 2 ಕೋಟಿ ರುಪಾಯಿಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದ ಜೇಸನ್ ರಾಯ್* ಜೇಸನ್ ರಾಯ್ ಬದಲಿಗೆ ಸುರೇಶ್ ರೈನಾರನ್ನು ಖರೀದಿಸಲು ಗುಜರಾತ್ ಟೈಟಾನ್ಸ್ ಫ್ಯಾನ್ಸ್ ಆಗ್ರಹ

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೆ ಅಚ್ಚರಿಯ ಬೆಳವಣಿಗೆ ಎನ್ನುವಂತೆ ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಆಟಗಾರರ ಮೆಗಾ ಹರಾಜಿನಲ್ಲಿ (IPL Mega Auction) ಮಿಸ್ಟರ್ ಐಪಿಎಲ್‌ ಖ್ಯಾತಿಯ ಸುರೇಶ್ ರೈನಾ ಅನ್‌ಸೋಲ್ಡ್‌ ಆಗಿದ್ದರು. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಸುರೇಶ್ ರೈನಾ (Suresh Raina) ಅವರನ್ನು ಖರೀದಿಸಲು ಯಾವೊಂದು ಫ್ರಾಂಚೈಸಿಯು ಒಲವು ತೋರಿರಲಿಲ್ಲ.

ಇದೀಗ ಐಪಿಎಲ್ ಹರಾಜು ಮುಗಿದು ಒಂದು ತಿಂಗಳು ಕಳೆಯುವಷ್ಟರೊಳಗಾಗಿ ನೂತನ ಐಪಿಎಲ್ ಫ್ರಾಂಚೈಸಿ ಗುಜರಾತ್ ಟೈಟಾನ್ಸ್ (Gujarat Titans) ಪಾಲಿಗೆ ದೊಡ್ಡ ಶಾಕ್ ಎದುರಾಗಿದೆ. ಇಂಗ್ಲೆಂಡ್ ತಂಡದ ಸ್ಪೋಟಕ ಬ್ಯಾಟರ್ ಜೇಸನ್ ರಾಯ್ (Jason Roy) ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮೂಲ ಬೆಲೆ 2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಇದೀಗ ಜೇಸನ್‌ ರಾಯ್ ತಮ್ಮ ಕುಟುಂಬದೊಟ್ಟಿಗೆ ಅಮೂಲ್ಯ ಸಮಯವನ್ನು ಕಳೆಯುವ ಉದ್ದೇಶದಿಂದ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಗುಜರಾತ್ ಟೈಟಾನ್ಸ್ ಅಭಿಮಾನಿಗಳನ್ನು ಉದ್ದೇಶಿಸಿ ಭಾವನಾತ್ಮಕ ಪತ್ರವನ್ನು ಬರೆದಿದ್ದು, ಹಾಯ್, ಪ್ರಮುಖವಾಗಿ ಗುಜರಾತ್ ಟೈಟಾನ್ಸ್ ಅಭಿಮಾನಿಗಳೇ ಹಾಗೂ ತಂಡದ ಆಟಗಾರರೇ, ತುಂಬಾ ಆಲೋಚನೆ ಮಾಡಿ, ಭಾರವಾದ ಹೃದಯದಿಂದ ನಾನು ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಹರಾಜಿನಲ್ಲಿ ನನ್ನನ್ನು ಆಯ್ದುಕೊಂಡಿದ್ದಕ್ಕೆ ತಂಡದ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. 

Scroll to load tweet…

IPL 2022: ಐಪಿಎಲ್ ತೊರೆದು ಗುಜರಾತ್ ಟೈಟಾನ್ಸ್ ಫ್ಯಾನ್ಸ್‌ಗೆ ಭಾವನಾತ್ಮಕ ಪತ್ರ ಬರೆದ ಜೇಸನ್ ರಾಯ್

ಆದರೆ ನಾನು ಕುಟುಂಬದೊಟ್ಟಿಗೆ ಕೆಲವು ಅಮೂಲ್ಯ ಸಮಯವನ್ನು ಕಳೆಯಲು ಇದು ಸರಿಯಾದ ತೀರ್ಮಾನ ಎಂದು ನನಗನಿಸಿದೆ. ಯಾಕೆಂದರೆ ಮುಂಬರುವ ದಿನಗಳಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಬೇಕಿದೆ. ಆದರೆ ನಾನು ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಹಾರೈಸುತ್ತೇನೆ. ನನ್ನ ನಿರ್ಧಾರವನ್ನು ಬೆಂಬಲಿಸುವ ಎಲ್ಲರಿಗೂ ಧನ್ಯವಾದಗಳು ಎಂದು ಜೇಸನ್ ರಾಯ್ ಟ್ವೀಟ್ ಮಾಡಿದ್ದಾರೆ.

ಸುರೇಶ್ ರೈನಾರನ್ನು ಕರೆ ತನ್ನಿ ಎಂದು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಗೆ ಫ್ಯಾನ್ಸ್‌ ಮನವಿ:

ಜೇಸನ್ ರಾಯ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ, ಗುಜರಾತ್ ಟೈಟಾನ್ಸ್ ಅಭಿಮಾನಿಗಳು ರಾಯ್ ಬದಲಿಗೆ ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.

Scroll to load tweet…

ಸುರೇಶ್ ರೈನಾ ಅವರೊಬ್ಬ ದಿಗ್ಗಜ ಬ್ಯಾಟರ್, ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅವರನ್ನು ಗುಜರಾತ್ ಟೈಟಾನ್ಸ್ ತಂಡವು ಖರೀದಿಸಲಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮತ್ತೋರ್ವ ಅಭಿಮಾನಿ, ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಅಮೂಲ್ಯವಾದ ಆಟಗಾರ. ಹೀಗಾಗಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ರೈನಾ ಅವರನ್ನು ಖರೀದಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Scroll to load tweet…
Scroll to load tweet…
Scroll to load tweet…

ಅನುಭವಿ ಎಡಗೈ ಬ್ಯಾಟರ್‌ ಸುರೇಶ್ ರೈನಾ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯಾದ ಐಪಿಎಲ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೂ ಒಟ್ಟು 205 ಪಂದ್ಯಗಳನ್ನಾಡಿರುವ ರೈನಾ 32.52ರ ಬ್ಯಾಟಿಂಗ್ ಸರಾಸರಿಯಲ್ಲಿ 5,528 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 39 ಅರ್ಧಶತಕಗಳು ಸೇರಿವೆ. ಸದ್ಯ ರೈನಾ ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.