ಕ್ಯಾಪ್ಟನ್ ಕೂಲ್ ಧೋನಿ IPL ನಿವೃತ್ತಿ ಸದ್ಯಕ್ಕಿಲ್ಲ..!

* ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಚುಕ್ಕಾಣಿ ಹಿಡಿದ ಎಂ ಎಸ್ ಧೋನಿ

* ಮುಂದೆಯೂ ಯೆಲ್ಲೋ ಜರ್ಸಿಯಲ್ಲಿ ಧೋನಿ ಕಾಣಸಿಗುವುದು ಖಚಿತ

* ತಮ್ಮ ನಿವೃತ್ತಿಯ ಊಹಾಪೋಹಗಳಿಗೆ ತೆರೆ ಎಳೆದ ಕ್ಯಾಪ್ಟನ್ ಕೂಲ್

IPL 2022 Captain Cool MS Dhoni will not retire from IPL soon kvn

ಮುಂಬೈ(ಮೇ.03) : ಎಂ.ಎಸ್ ಧೋನಿ (MS Dhoni) ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​​ಬೈ ಹೇಳಿದ ದಿನದಿಂದಲೇ ಐಪಿಎಲ್​​​​​​ಗೆ ಯಾವಾಗ ನಿವೃತ್ತಿ ಘೋಷಿಸ್ತಾರೆ ಅನ್ನೋ ಪ್ರಶ್ನೆ ಆಗಾಗ ಮುನ್ನಲೆಗೆ ಬರ್ತಿದೆ. 13ನೇ ಸೀಸನ್​​​​ ಮುಗಿಯುತ್ತಿದ್ದಂತೆ ಮಹಿ ಐಪಿಎಲ್​​ ಯುಗ ಅಂತ್ಯವಾಯ್ತು ಎಂದೂ ಎಲ್ಲರೂ ಭಾವಿಸಿದ್ರು. ಆದ್ರೆ ಮಾಸ್ಟರ್​​ ಮೈಂಡ್​​ ಧೋನಿ ‘ಡೆಫಿನೆಟ್ಲಿ ನಾಟ್​​’ ಅನ್ನೋ ಮೂಲಕ ವಿದಾಯ ಸುದ್ದಿಗೆ ಫುಲ್​ಸ್ಟಾಪ್​​ ಹಾಕಿದ್ರು. ಮಹೇಂದ್ರ ಸಿಂಗ್ ಧೋನಿ 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. 

ಅಂದು ಚಾಣಕ್ಯ ಹೇಳಿದ ಈ ಡೆಫಿನೆಟ್ಲಿ ನಾಟ್​ ಅನ್ನೋ ಒಂದೇ ಮಾತು ಅಭಿಮಾನಿಗಳನ್ನ ಖುಷಿಯನ್ನ ಇಮ್ಮಡಿಗೊಳಿಸಿತ್ತು. ಇನ್ನಷ್ಟು ವರ್ಷ ಯೆಲ್ಲೋ ಜೆರ್ಸಿಯಲ್ಲಿ ಧೋನಿ ಆಟವನ್ನ ಕಣ್ತುಂಬಿಕೊಳ್ಳಬಹುದು ಎಂದು ಸಮಾಧಾನಪಟ್ಟಿದ್ರು. ಈ ಮಧ್ಯೆ ಎಂಎಸ್​​ಡಿ ಸೀಸನ್​ ಆರಂಭಕ್ಕೂ ಮುನ್ನ ಕ್ಯಾಪ್ಟನ್ಸಿಯನ್ನ ಜಡೇಜಾಗೆ ಬಿಟ್ಟುಕೊಟ್ಟು ಅಚ್ಚರಿ ಮೂಡಿಸಿದ್ರು. ದಿಢೀರ್​​ ಕ್ಯಾಪ್ಟನ್ಸಿ ತ್ಯಜಿಸ್ತಿದ್ದಂತೆ ಮಹಿ ಈ ವರ್ಷವೇ ಐಪಿಎಲ್​ಗೆ ಮತ್ತೆ ನಿವೃತ್ತ ಕೊಡ್ತಾರೆ ಅನ್ನೋ ಸುದ್ದಿ ಹರಿದಾಡೋಕೆ ಶುರುವಾಯ್ತು. ಧೋನಿ ಅಭಿಮಾನಿಗಳಂತೂ ಹಾಗಾಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ರು. ಇನ್ನು ಕೆಲವರು ವಯಸ್ಸಾಗಿದೆ ಈ ಬಾರಿ ಗುಡ್​​ಬೈ ಹೇಳೋದು ಪಕ್ಕನ್ನೂ ಅಂದ್ರು. ಸದ್ಯ ಈ ಗೊಂದಲಕ್ಕೆ ಚಾಂಪಿಯನ್​​ ಕ್ಯಾಪ್ಟನ್​​ ತಮ್ಮದೇ ಸ್ಟೈಲ್​​ನಲ್ಲಿ ಉತ್ತರಿಸಿದ್ದು, ಇನ್ನಷ್ಟು ವರ್ಷ ಯೆಲ್ಲೋ ಜೆರ್ಸಿಯಲ್ಲಿ ಕಣಕ್ಕಿಳಿಯೋದನ್ನು ಖಚಿತಪಡಿಸಿದ್ದಾರೆ. 

ಮುಂದಿನ ಆವೃತ್ತಿಯಲ್ಲಿ ಮತ್ತೆ ಕಾಣಿಸಿಕೊಳ್ತಾರೆ MSD: 

ಯೆಸ್​​, ಮುಂದಿನ ಸೀಸನ್​​ನಲ್ಲಿ ಧೋನಿ ಆಡ್ತಾರೋ? ಇಲ್ಲೋ ಅನ್ನೋ ಬಗ್ಗೆ ಫ್ಯಾನ್ಸ್​ ತಲೆಕೆಡಿಸಿಕೊಂಡಿರುವಾಗ್ಲೇ ಮಹಿ ಮತ್ತೆ ಚೆನ್ನೈ ಪರ ಕಣಕ್ಕಿಳಿಯೋದು ಪಕ್ಕಾ ಎಂದಿದ್ದಾರೆ.  ‘‘ಹಿಂದೆ ನಾನು ಹೇಳಿದಂತೆ ಖಂಡಿತಾ ಮುಂದಿನ ಸೀಸನ್​​​ನಲ್ಲಿ ಕಾಣಿಸಿಕೊಳ್ತೇನೆ. ಆದ್ರೆ ಅದು ಈ ಯೆಲ್ಲೋ ಜೆರ್ಸಿನಾ ಅಥವಾ ಬೇರೆ ಯೆಲ್ಲೋ ಜೆರ್ಸಿ ಅನ್ನೋದು ಮುಂದಿನ ದಿನಗಳಲ್ಲಿ ನಿಮಗೆ ಗೊತ್ತಾಗುತ್ತೆ’’ ಅನ್ನುವ ಮೂಲಕ ಅಲ್ಲೂ ಸಸ್ಪೆನ್ಸ್​ ಕಾಯ್ದುಕೊಂಡಿದ್ರು. 

ಕ್ಯಾಪ್ಟನ್ ಆಗಿ ಉಳಿದುಕೊಳ್ತಾರಾ ? ಏನಿರಬಹುದು ಸಸ್ಪೆನ್ಸ್​ ಸಿಕ್ರೇಟ್​:

ಕೀಪಿಂಗ್​ ಚಾಣಕ್ಯ ಧೋನಿ ತಾನು ಮತ್ತೊಮ್ಮೆ ಜೀನಿಯಸ್​​​ ಕ್ರಿಕೆಟರ್ ಅನ್ನೋದನ್ನ ಪ್ರೂವ್​ ಮಾಡಿದ್ದಾರೆ. ಮುಂದಿನ ಸೀಸನ್​​ನಲ್ಲಿ ಯೆಲ್ಲೋ ಜೆರ್ಸಿಯಲ್ಲಿ ಕಾಣಿಸಿಕೊಳ್ತೀನಿ ಅಂದಿರೋ ಮಹಿ ಅದು ಯಾವ ಯೆಲ್ಲೋ ಜೆರ್ಸಿ ಅನ್ನೋದರ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ. ಸಸ್ಪೆನ್ಸ್​ ಆನ್ಸರ್​ ನೀಡಿ ಎಲ್ಲರ ತಳೆಯಲ್ಲಿ ಹುಳಬಿಟ್ಟಿದ್ದಾರೆ.  ಹಾಗಾದ್ರೆ 2023ನೇ ಐಪಿಎಲ್​​ನಲ್ಲಿ ಚೆನ್ಮೈ ತಂಡದಲ್ಲಿ ಧೋನಿಯ ಪಾತ್ರ ಏನಿರಬಹುದು ? ಕ್ಯಾಪ್ಟನ್ನಾ ಅಥವಾ ಬರೀ ಆಟಗಾರನಾ ? ಇಲ್ಲ ಐಪಿಎಲ್​​​​​ ಕೆರಿಯರ್​​ಗೆ ಗುಡ್​​​ಬೈ ಹೇಳಿ ಸಿಎಸ್​ಕೆ ತಂಡದ ಮೆಂಟರ್​ ಆಗಬಹುದಾ. ಇಲ್ಲ ತಂಡದ ಹೆಡ್​ ಕೋಚ್ ಆಗಿ ಕಾಣಿಸಿಕೊಳ್ತಾರಾ ? ಈ ಎಲ್ಲಾ ಆಯ್ಕೆಗಳು ಧೋನಿ ಮುಂದಿವೆ. ಆದ್ರೆ ಫೈನಲಿ ಜಗಮೆಚ್ಚಿದ ಧೋನಿ ಆಯ್ಕೆ ಏನಾಗಿರಬಹುದು ಅನ್ನೋದು ಗೊತ್ತಾಗಬೇಕಾದ್ರೆ ಮುಂದಿನ ಸೀಸನ್​​ವರೆಗೂ ನೀವು ಕಾಯಲೇಬೇಕು.

Latest Videos
Follow Us:
Download App:
  • android
  • ios