Asianet Suvarna News Asianet Suvarna News

ಐಪಿಎಲ್‌ ನಡೆವ ಸ್ಥಳದಲ್ಲೇ ಟಿ20 ವಿಶ್ವಕಪ್ ಪಂದ್ಯಗಳು..?

14ನೇ ಆವೃತ್ತಿಯ ಐಪಿಎಲ್‌ ಪಂದ್ಯಾವಳಿಗಳು ಆಯೋಜನೆಗೊಳ್ಳುವ ಸ್ಟೇಡಿಯಂಗಳೇ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಆತಿಥ್ಯ ವಹಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

IPL 2021 venues may get ICC T20 World Cup matches too Says Report kvn
Author
New Delhi, First Published Mar 10, 2021, 9:34 AM IST

ನವದೆಹಲಿ(ಮಾ.10): ಕೊರೋನಾ ನಡುವೆ ಐಪಿಎಲ್‌ ಪಂದ್ಯಗಳನ್ನು ಆಡಿಸಲು ಕೆಲವೇ ಕೆಲವು ಕ್ರೀಡಾಂಗಣಗಳನ್ನು ಆಯ್ಕೆ ಮಾಡಿಕೊಂಡಿರುವ ಬಿಸಿಸಿಐ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾವಳಿಯ ಪಂದ್ಯಗಳನ್ನೂ ಈ ಕ್ರೀಡಾಂಗಣಗಳಲ್ಲಷ್ಟೇ ಆಡಿಸುವ ಚಿಂತನೆ ನಡೆಸಿದೆ. ಬಿಸಿಸಿಐನ ಸದ್ಯದ ಲೆಕ್ಕಾಚಾರದ ಪ್ರಕಾರ ವಿಶ್ವಕಪ್‌ ಟಿ20ಯ ಎರಡು ಸೆಮಿಫೈನಲ್‌ಗಳು ಚೆನ್ನೈ ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ಫೈನಲ್‌ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಡಿಸಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೊರೋನಾ ಕಾರಣಕ್ಕಾಗಿ ಆಟಗಾರರು ಹೆಚ್ಚು ಪ್ರಯಾಣಿಸದಂತೆ ಐಪಿಎಲ್‌ ವೇಳಾಪಟ್ಟಿ ಸಿದ್ಧಪಡಿಸಿಕೊಂಡಿರುವ ಬಿಸಿಸಿಐ, ವಿಶ್ವಕಪ್‌ ಪಂದ್ಯಗಳನ್ನು ಮುಂಬೈ, ಅಹಮದಾಬಾದ್‌, ಚೆನ್ನೈ, ದೆಹಲಿ, ಕೋಲ್ಕತಾ, ಬೆಂಗಳೂರು, ಮೊಹಾಲಿ ಮತ್ತು ಧರ್ಮಶಾಲಾದಲ್ಲಿ ಆಡಿಸಲು ಈಗಾಗಲೇ ಪ್ರಾಥಮಿಕ ಪಟ್ಟಿ ಸಿದ್ಧಪಡಿಸಿಕೊಂಡಿದೆ. ಐಪಿಎಲ್‌ ಪಂದ್ಯಗಳಿಗೆ ಪಾಲಿಸಲಾಗುತ್ತಿರುವ ಕೊರೋನಾ ಮುನ್ನೆಚ್ಚರಿಕಾ ನಿಯಮಾವಳಿಗಳನ್ನು ವಿಶ್ವಕಪ್‌ ಪಂದ್ಯಗಳ ವೇಳೆಯೂ ಕಡ್ಡಾಯವಾಗಿ ಪಾಲಿಸಬೇಕೆನ್ನುವ ಷರತ್ತಿನೊಂದಿಗೆ ಆಯಾ ಕ್ರೀಡಾಂಗಣಗಳಿಗೆ ಆತಿಥ್ಯಕ್ಕೆ ಅವಕಾಶ ಮಾಡಿಕೊಡುವ ತಯಾರಿ ಮಾಡಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರತಿ ಐಪಿಎಲ್‌ ತಂಡದ ಈ ವಿದೇಶಿ ಸ್ಟಾರ್ ಆಟಗಾರರ ಬೆಂಚ್ ಕಾಯಿಸೋದು ಪಕ್ಕಾ..!

ವಿಶ್ವಕಪ್‌ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ತಂಡಗಳು ಒಂದು ಕ್ರೀಡಾಂಗಣದಿಂದ ಇನ್ನೊಂದು ನಗರದ ಕ್ರೀಡಾಂಗಣಕ್ಕೆ ಪ್ರಯಾಣ ಬೆಳೆಸುವುದು ಕೊರೋನಾ ಪರಿಸ್ಥಿತಿಯಲ್ಲಿ ಕೊಂಚ ದುಸ್ಥರವಾಗಿರುವ ಕಾರಣ ಹೆಚ್ಚೆಚ್ಚು ಪ್ರಯಾಣಕ್ಕೆ ಅವಕಾಶ ಇಲ್ಲದ ರೀತಿಯಲ್ಲೇ ಆಯೋಜನೆಗೆ ಮುಂದಾಗಿದೆ ಎನ್ನಲಾಗಿದೆ.

Follow Us:
Download App:
  • android
  • ios