ಚೆನ್ನೈ(ಏ.13): ನಾಡಿನಾದ್ಯಂತ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ಇದೀಗ ತನ್ನ ಅಭಿಮಾನಿಗಳಿಗೆ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರಿದೆ.
 
ಯುಗಾದಿ ಹಬ್ಬಕ್ಕೆ ಟ್ವೀಟ್‌ ಮೂಲಕ ಶುಭಕೋರಿರುವ ಆರ್‌ಸಿಬಿ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಹೊಸ ವರುಷದ ಹೊಸ ಚೈತನ್ಯದಿಂದ ನಿಮ್ಮ ಬಾಳು ಹಸನಾಗಲಿ ಎಂದು ಟ್ವೀಟ್‌ ಮೂಡಿದೆ. ಇದರ ಜತೆಗೆ ಆರ್‌ಸಿಬಿ ಕ್ರಿಕೆಟಿಗರಾದ ಕೆ.ಎಸ್‌. ಭರತ್, ದೇವದತ್ ಪಡಿಕ್ಕಲ್‌, ಡೇನಿಯಲ್ ಕ್ರಿಶ್ಚಿಯನ್‌, ಎಬಿ ಡಿವಿಲಿಯರ್ಸ್‌, ನವದೀಪ್ ಸೈನಿ ಹಾಗೂ ವಾಷಿಂಗ್ಟನ್‌ ಸುಂದರ್ ವಿಡಿಯೋ ಮೂಲಕ ಯುಗಾದಿ ಹಬ್ಬಕ್ಕೆ ಶುಭ ಕೋರಿದ್ದಾರೆ.

IPL 2021: ಸನ್‌ರೈಸರ್ಸ್‌ ವಿರುದ್ದದ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ಸಿಕ್ತು ಗುಡ್‌ ನ್ಯೂಸ್‌..!

14ನೇ  ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವನ್ನು ಬಗ್ಗುಬಡಿಯುವ ಮೂಲಕ ಶುಭಾರಂಭ ಮಾಡಿದೆ. ಇದೀಗ ಏಪ್ರಿಲ್‌ 14ರಂದು ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಪಾಲಿನ ಎರಡನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.