ಬಯೋ ಬಬಲ್‌ನಲ್ಲಿ 2-3 ತಿಂಗಳುಗಳ ಕಾಲ ನಿರಂತವಾಗಿ ಬಯೋ ಬಬಲ್‌ನೊಳಗೆ ವಾಸಿಸುವುದು ಬಹಳ ಕಷ್ಟ. ಹೀಗಾಗಿ ವೇಳಾಪಟ್ಟಿ ರಚಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು ಎಂದು ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಪುಣೆ(ಮಾ.30): ಭಾರತ ಹಾಗೂ ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ದೀರ್ಘ ಕಾಲ ಬಯೋ ಬಬಲ್‌ ಜೀವನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಕ್ರಿಕೆಟಿಗರ ಪಾಲಿಗೆ ಮಾರಕ ಎಂದು ಕೊಹ್ಲಿ, ಇಂಗ್ಲೆಂಡ್‌ ವಿರುದ್ಧದ 3ನೇ ಏಕದಿನ ಪಂದ್ಯ ಮುಕ್ತಾಯಗೊಂಡ ಬಳಿಕ ಹೇಳಿದರು.

‘ಮುಂಬರುವ ದಿನಗಳಲ್ಲಿ ವೇಳಾಪಟ್ಟಿ ಸಿದ್ಧಪಡಿಸುವಾಗ ಎಚ್ಚರಿಕೆ ವಹಿಸಬೇಕು. ಬಯೋ ಬಬಲ್‌ನಲ್ಲಿ 2-3 ತಿಂಗಳುಗಳ ಕಾಲ ನಿರಂತವಾಗಿ ಬಯೋ ಬಬಲ್‌ನೊಳಗೆ ವಾಸಿಸುವುದು ಬಹಳ ಕಷ್ಟ’ ಎಂದು ಕೊಹ್ಲಿ ಹೇಳಿದ್ದಾರೆ. 

IPL 2021: ಒಬ್ಬರಿಗೊಬ್ಬರು ಚಾಲೆಂಜ್‌ ಮಾಡಿಕೊಂಡ ಎಬಿಡಿ-ವಿರಾಟ್ ಕೊಹ್ಲಿ..!

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಐಪಿಎಲ್‌ ಆಡಲು ಯುಎಇಗೆ ತೆರಳಿದ್ದ ಭಾರತೀಯ ಆಟಗಾರರು ಅಲ್ಲಿಂದ ಒಂದಾದ ಮೇಲೆ ಒಂದು ಬಯೋ ಬಬಲ್‌ನೊಳಗೆ ಜೀವನ ನಡೆಸುತ್ತಿದ್ದಾರೆ. ಇದೀಗ 14ನೇ ಆವೃತ್ತಿಯ ಐಪಿಎಲ್‌ಗಾಗಿ ಮತ್ತೊಮ್ಮೆ 2 ತಿಂಗಳ ಕಾಲ ಬಯೋ ಬಬಲ್‌ನಲ್ಲಿ ಇರಬೇಕಿದೆ. ಏಪ್ರಿಲ್‌ 9ರಿಂದ ಮೇ 30ರ ವರೆಗೂ ಐಪಿಎಲ್‌ ನಡೆಯಲಿದೆ.

ಏಪ್ರಿಲ್‌ 1ಕ್ಕೆ ಚೆನ್ನೈಗೆ ವಿರಾಟ್‌ ಕೊಹ್ಲಿ

ಮುಂಬೈ: ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ, ಇಂಗ್ಲೆಂಡ್‌ ವಿರುದ್ಧ ಏಕದಿನ ಸರಣಿ ಮುಕ್ತಾಯಗೊಂಡ ಬಳಿಕ 3 ದಿನಗಳ ಕಾಲ ಕುಟುಂಬದೊಂದಿಗೆ ಸಮಯ ಕಳೆಯಲು ಮುಂಬೈಗೆ ತೆರಳಿದ್ದಾರೆ. ಏಪ್ರಿಲ್ 1ಕ್ಕೆ ಅವರು ಚೆನ್ನೈಗೆ ತಲುಪಲಿದ್ದು, 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಿದೆ. ಮೂಲಗಳ ಪ್ರಕಾರ, ಮೊದಲ ಪಂದ್ಯಕ್ಕೂ ಮುನ್ನ ಮೈದಾನಕ್ಕಿಳಿದು ಅಭ್ಯಾಸ ನಡೆಸಲು ಕೊಹ್ಲಿಗೆ ಕೇವಲ 1 ದಿನ ಸಮಯಾವಕಾಶ ಸಿಗಲಿದೆ.