ಸುಲಭ ಟಾರ್ಗೆಟ್ ಚೇಸ್ ಮಾಡಿದ ಮುಂಬೈ ಇಂಡಿಯನ್ಸ್ ಕಡಿಮೆ ಮೊತ್ತದಲ್ಲೂ ಕಠಿಣ ಹೋರಾಟ ನೀಡಿದ ಪಂಜಾಬ್ ಕಿಂಗ್ಸ್ ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವು ಸಾಧಿಸಿದ ರೋಹಿತ್ ಸೈನ್ಯ  

ಅಬು ಧಾಬಿ(ಸೆ.28):  ಸತತ 3 ಸೋಲಿನಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್(Mumbai Indians) ಕೊನೆಗೂ ಗೆಲುವಿನ ಸಿಹಿ ಕಂಡಿದೆ. ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಮುಂಬೈ ಇಂಡಿಯನ್ಸ್ 6 ವಿಕೆಟ್ ಗೆಲುವು ಕಂಡಿತು. ಟಾರ್ಗೆಟ್ ಸುಲಭವಿದ್ದರೂ ಮುಂಬೈ ಗೆಲುವಿಗಾಗಿ ಹರಸಾಹಸ ಪಟ್ಟಿತು. ಈ ಮೂಲಕ ಅಂಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು.

IPL 2021: ಡೆಲ್ಲಿಗೆ ಶಾಕ್‌, KKR ಪಡೆಗೆ ಸುಲಭ ಜಯ

ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಇಳಿದಾಗ ಪಂಜಾಬ್ ನೀಡಿದ 136 ರನ್ ಸುಲಭ ಟಾರ್ಗೆಟ್(Target) ಕಠಿಣ ಸವಾಲಾಗಿ ಪರಿಣಮಿಸಿತು. ಕಾರಣ 16 ರನ್‌ಗಳಿಸುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ(Rohit Sharma) 8 ರನ್ ಸಿಡಿಸಿ ಔಟಾದರು. ರೋಹಿತ್ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ವಿಕೆಟ್ ಪತನಗೊಂಡಿತು. ಸೂರ್ಯಕುಮಾರ್ ಡಕೌಟ್ ಆದರು.

ಕ್ವಿಂಟನ್ ಡಿಕಾಕ್ ಹೋರಾಟವೂ ಹೆಚ್ಚು ಹೊತ್ತು ಇರಲಿಲ್ಲ. ಡಿಕಾಕ್ 27 ರನ್ ಸಿಡಿಸಿ ಔಟಾದರು. 61 ವಿಕೆಟ್ ನಷ್ಟಕ್ಕ 3 ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ಸಂಕಷ್ಟಕ್ಕೆ ಸಿಲುಕಿತು. ಇತ್ತ ಅಲ್ಪ ಮೊತ್ತ ದಾಖಲಿಸಿದರೂ ಪಂಜಾಬ್ ಎದುರಾಳಿಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು. 

ಈ ಕಾರಣದಿಂದ ಅಥಿಯಾ ಶೆಟ್ಟಿ ಮೇಲೆ ಅಸಮಾಧಾನಗೊಂಡಿರುವ ಕೆಎಲ್‌ ರಾಹುಲ್‌

ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಅವಕಾಶ ಪಡೆದ ಸೌರಬ್ ತಿವಾರಿ ದಿಟ್ಟ ಹೋರಾಟ ನೀಡಿದರು. ಇತ್ತ ಹಾರ್ಧಿಕ್ ಪಾಂಡ್ಯ(Hardik Pandya) ಉತ್ತಮ ಸಾಥ್ ನೀಡಿದರು. ಆದರೆ ಇವರಿಬ್ಬರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಮುಂಬೈ ತಂಡದ ಆತಂಕಕ್ಕೆ ಕಾರಣವಾಯಿತು. ಮುಂಬೈ ಗೆಲುವಿಗೆ ಅಂತಿಮ 30 ಎಸೆತದಲ್ಲಿ 44 ರನ್‌ಗಳ ಅವಶ್ಯಕತೆ ಇತ್ತು.

ಸ್ಟ್ರೈಕ್ ರೇಟ್ ಆತಂಕದ ನಡುವೆ ಮುಂಬೈ ಇಂಡಿಯನ್ಸ್ ಮತ್ತೊಂದು ವಿಕೆಟ್ ಕಳೆದುಕೊಂಡಿತು ಸೌರಬ್ ತಿವಾರಿ 45 ರನ್ ಸಿಡಿಸಿ ಔಟಾದರು. ಪಂಜಾಬ್ ಕಿಂಗ್ಸ್ ಪಂದ್ಯದ ಮೇಲೆ ನಿಧಾನವಾಗಿ ಹಿಡಿತ ಸಾಧಿಸಲು ಆರಂಭಿಸಿತು. ಹಾರ್ದಿಕ್ ಪಾಂಡ್ಯ ಹಾಗೂ ಕೀರನ್ ಪೊಲಾರ್ಡ್ ಕ್ರೀಸ್‌ನಲ್ಲಿರುವುದು ಮುಂಬೈ ತಂಡಕ್ಕೆ ಕೊಂಚ ಸಮಾಧಾನ ತಂದಿತು.

IPL 2021; ಆರ್‌ಸಿಬಿ ನಾಯಕತ್ವ ತ್ಯಜಿಸಲು ಪತ್ನಿ ಅನುಷ್ಕಾ ಕಾರಣ?ಸ್ಟೇನ್ ಸ್ಫೋಟಕ ಹೇಳಿಕೆ!

ಹಾರ್ದಿಕ್ ಪಾಂಡ್ಯ ಬೌಂಡರಿ ಸಿಕ್ಸರ್ ಸಿಡಿಸಿದರು. ಇತ್ತ ಕೀರನ್ ಪೋಲಾರ್ಡ್ ಅಬ್ಬರ ಆರಂಭಗೊಂಡಿತು. ಹೀಗಾಗಿ ಮುಂಬೈಗೆ ಅಂತಿಮ 12 ಎಸೆತದಲ್ಲಿ 16 ರನ್ ಬೇಕಿತ್ತು. ಪಾಂಡ್ಯ ಸಿಡಿಸಿದ ಎರಡು ಬೌಂಡರಿ ಹಾಗೂ ಸಿಕ್ಸರ್ ನೆರವಿನಂದ ಮುಂಬೈ ಇಂಡಿಯನ್ಸ್ ಇನ್ನೂ ಒಂದು ಓವರ್ ಬಾಕಿ ಇರುವಂತೆ ಗೆಲುವು ಸಾಧಿಸಿತು. ಮುಂಬೈ ಇಂಡಿಯನ್ಸ್ 6 ವಿಕೆಟ್ ಗೆಲುವು ಕಂಡಿತು. ಹಾರ್ದಿಕ್ ಪಾಂಡ್ಯ ಅಜೇಯ 40 ರನ್ ಸಿಡಿಸಿದರು. ಕೀರನ್ ಪೋಲಾರ್ಡ್ ಅಜೇಯ 15 ರನ್ ಸಿಡಿಸಿದರು. 

ಫಾರ್ಮ್ ಹಾಗೂ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ಹಾರ್ಧಿಕ್ ಪಾಂಡ್ಯ ಪಂಜಾಬ್ ವಿರುದ್ದ ಅಬ್ಬರಿಸಿದರು. ಹೀಗಾಗಿ ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಿತು. 

ಅಂಕಪಟ್ಟಿ: 
ಪಂದ್ಯದ ಫಲಿತಾಂಶಕ್ಕೂ ಮೊದಲು ಪಂಜಾಬ್ ಕಿಂಗ್ಸ್ ಅಂಕಪಟ್ಟಿಯಲ್ಲಿ(Points Table) 5ನೇ ಸ್ಥಾನ ಹಾಗೂ ಮುಂಬೈ ಇಂಡಿಯನ್ಸ್ 7ನೇ ಸ್ಥಾನದಲ್ಲಿತ್ತು. ಸತತ ಮೂರು ಸೋಲು ಅಂಕಪಟ್ಟಿಯಲ್ಲಿ ಕುಸಿತ ಕಂಡಿದ್ದ ಮುಂಬೈ ಇಂಡಿಯನ್ಸ್, ಪಂಜಾಬ್ ವಿರುದ್ಧದ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು. ಇತ್ತ ಪಂಜಾಬ್ ಕಿಂಗ್ಸ್ 6ನೇ ಸ್ಥಾನಕ್ಕೆ ಕುಸಿಯಿತು.

ಮುಂಬೈ ಇಂಡಿಯನ್ಸ್ 11 ಪಂದ್ಯದಲ್ಲಿ 5 ಗೆಲುವು ಸಾಧಿಸಿ ಒಟ್ಟು 10 ಅಂಕ ಸಂಪಾದಿಸಿದೆ. ಇತ್ತ ಪಂಜಾಬ್ ಕಿಂಗ್ಸ್ 11 ಪಂದ್ಯದಲ್ಲಿ 4 ಗೆಲುವು ಸಾಧಿಸಿದೆ. ಹೀಗಾಗಿ 8 ಅಂಕ ಸಂಪಾದಿಸಿದೆ.