Asianet Suvarna News Asianet Suvarna News

IPL 2021: ಟಾಸ್ ಗೆದ್ದ KKR, ಮುಂಬೈ ಇಂಡಿಯನ್ಸ್‌ನಲ್ಲಿ 1 ಬದಲಾವಣೆ!

  • ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ
  • ಟಾಸ್ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ಬೌಲಿಂಗ್ ಆಯ್ಕೆ
  • ಅಬುಧಾಬಿಯಲ್ಲಿ ನಡೆಯುತ್ತಿರುವ IPL 2021ರ 34ನೇ ಲೀಗ್ ಪಂದ್ಯ
IPL 2021 Kolkata Knight Riders won toss opted to bowl first against Mumbai Indians in abu dhabi ckm
Author
Bengaluru, First Published Sep 23, 2021, 7:10 PM IST

ಅಬು ಧಾಬಿ(ಸೆ.23): IPL 2021ರ 34ನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್(Mumbai Indians) ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗುತ್ತಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದಿರುವ ಕೋಲ್ಕತಾ ನೈಟ್ ರೈಡರ್ಸ್kolkata knight riders) ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

 

IPL 2021: ಸದ್ಯದಲ್ಲೇ RCB ನಾಯಕತ್ವದಿಂದ ಕೊಹ್ಲಿಗೆ ಕೊಕ್, ಮಾಜಿ ಕ್ರಿಕೆಟಿಗನಿಂದ ಹೊಸ ಬಾಂಬ್!

ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಮುಖದಲ್ಲಿ ಸಂತಸ ಮೂಡಿದೆ. ರೋಹಿತ್ ಶರ್ಮಾ(Rohit Sharma) ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ರೋಹಿತ್ ಶರ್ಮಾ ಆಗಮಿಸಿರುವ ಕಾರಣ ಅನ್‌ಮೋಲ್ ಪ್ರೀತ್ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ವಿರುದ್ಧ ಆಡಿದ ತಂಡವನ್ನೇ ಕಣಕ್ಕಿಳಿಸಲಾಗಿದೆ. 

 

ಐಪಿಎಲ್ 2ನೇ ಭಾಗ ಆರಂಭ ಮುಂಬೈ ಇಂಡಿಯನ್ಸ್‌ ನಿರೀಕ್ಷಿದ ರೀತಿ ಇರಲಿಲ್ಲ. ದುಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್(CSK) ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮುಗ್ಗರಿಸಿತ್ತು. ಸೋಲಿನೊಂದಿಗೆ 2ನೇ ಭಾಗ ಆರಂಭಿಸಿದ ಮುಂಬೈ ಇದೀಗ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. 

IPL 2021: ಈ ಆಟಗಾರನ ಪತ್ನಿ ಜತೆ ಪಾರ್ಟಿ ಎಂಜಾಯ್‌ ಮಾಡಿದ ಚಹಲ್ ಪತ್ನಿ ಧನಶ್ರೀ ವರ್ಮಾ..!

ಪ್ಲೇ ಆಫ್(Play off) ಲೆಕ್ಕಾಚಾರಗಳು ಆರಂಭಗೊಂಡಿದೆ. ಹೀಗಾಗಿ ಪ್ರತಿ ತಂಡಕ್ಕ ಪ್ರತಿಯೊಂದು ಪಂದ್ಯ ಮುಖ್ಯವಾಗಿದೆ. ಪ್ರತಿ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಆರಂಭಿಕ ಪಂದ್ಯಗಳನ್ನು ಸೋತು ಬಳಿಕ ಗೆಲುವಿನೊಂದಿಗೆ ಪ್ಲೇ ಆಫ್ ಪ್ರವೇಶಿಸುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಎರಡನೇ ಭಾಗದಲ್ಲಿ ಪಂದ್ಯ ಸೋತು ಮತ್ತೆ ಗೆಲುವು ಸಾಧಿಸಿ ಪ್ಲೇ ಆಫ್ ಪ್ರವೇಶಿಸುವ ಅವಕಾವಿಲ್ಲ. ಕಾರಣ ಈಗಾಗಲೇ ಮುಂಬೈ 8 ಪಂದ್ಯಗಳನ್ನು ಆಡಿದೆ. ಹೀಗಾಗಿ ಪ್ರತಿ ಪಂದ್ಯದ ಫಲಿತಾಂಶ ಮುಂಬೈಗೆ ಮುಖ್ಯವಾಗಿದೆ.

ಆದರೆ ಕೋಲ್ಕತಾ ನೈಟ್ ರೈಡರ್ಸ್, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವಿನ ಮೂಲಕ ಶುಭಾರಂಭ  ಮಾಡಿದೆ. ಆರ್‌ಸಿಬಿ ವಿರುದ್ಧ 9 ವಿಕೆಟ್ ಗೆಲುವು ಕಂಡಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಮತ್ತಷ್ಟು ರೋಚಕ ಹೋರಾಟ ಏರ್ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಂಬೈ ಇಂಡಿಯನ್ಸ್ ಆಡಿದ 8 ಪಂದ್ಯದಲ್ಲಿ 4ರಲ್ಲಿ ಗೆಲುವು ಇನ್ನುಳಿದ 4 ಪಂದ್ಯದಲ್ಲಿ ಸೋಲು ಕಂಡಿದೆ. 8 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇತ್ತ ಐಪಿಎಲ್ 2021ರ ಮೊದಲ ಭಾಗದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿದ ಕೆಕೆಆರ್(KKR) ಎಡನೇ ಭಾಗದಲ್ಲಿ ಭರ್ಜರಿ ಆರಂಭ ಪಡೆದಿದೆ. ಆದರೆ ಅಂಕಪಟ್ಟಿಯಲ್ಲಿ 8 ಪಂದ್ಯದಲ್ಲಿ 3 ಗೆಲುವು 5 ಸೋಲು ಕಂಡಿರುವ ಕೆಕೆಆರ್ 6ನೇ ಸ್ಥಾನದಲ್ಲಿದೆ.

ಅಬು ಧಾಬಿ ಪಿಚ್:
ಅಬು ಧಾಬಿ(Abu Dhabi) ಪಿಚ್ ಬೌಲರ್‌ಗಳಿಗೆ ಸ್ವರ್ಗವಾಗಿದೆ. ಕೊಂಚ ಗ್ರಾಸ್ ಹೊಂದಿರುವ ಪಿಚ್‌ನಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಇದರ ಜೊತೆಗೆ ವೇಗಿಗಳು ಉತ್ತಮ ಸಾಥ್ ನೀಡಿದರೆ ಪಂದ್ಯ ಕೈವಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

 

Follow Us:
Download App:
  • android
  • ios