Asianet Suvarna News Asianet Suvarna News

IPL 2021 Final; ಕೋಲ್ಕತಾ ತಂಡಕ್ಕೆ ಬೃಹತ್ ಟಾರ್ಗೆಟ್, ಗೆಲುವಿನ ವಿಶ್ವಾಸದಲ್ಲಿ CSK!

  • ಕೆಕೆಆರ್ ವಿರುದ್ಧ ಚೆನ್ನೈ ದಿಟ್ಟ ಹೋರಾಟ
  • ದುಬೈನಲ್ಲಿ ನಡೆಯುತ್ತಿದ್ದ ಪ್ರಶಸ್ತಿಗಾಗಿ ಹೋರಾಟ
  • ಕೆಕೆಆರ್ ತಂಡಕ್ಕೆ 193 ರನ್ ಟಾರ್ಗೆಟ್
IPL 2021 Faf du Plessis help CSK to set 193 run target to KKR in Trophy clash dubai ckm
Author
Bengaluru, First Published Oct 15, 2021, 9:20 PM IST
  • Facebook
  • Twitter
  • Whatsapp

ದುಬೈ(ಅ.15):  ಫಾಫ್ ಡುಪ್ಲೆಸಿಸ್(Faf du Plessis) ಸಿಡಿಸಿದ 86 ರನ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ IPL 2021 ಫೈನಲ್ ಪಂದ್ಯದಲ್ಲಿ ಕೆಕೆಆರ್)KKR) ವಿರುದ್ದ 192 ರನ್ ಸಿಡಿಸಿದೆ. ಇದೀಗ ಕೋಲ್ಕತಾ ನೈಟ್ ರೈಡರ್ಸ್ ಗೆಲುವಿಗೆ 193 ರನ್ ಸಿಡಿಸಬೇಕಿದೆ. ಇದು ಅತ್ಯಂತ ಸವಾಲಿನ ಮೊತ್ತವಾಗಿದೆ. 

IPL 2021 Final:ಕೆಎಲ್ ರಾಹುಲ್ ದಾಖಲೆ ಮುರಿದು ಇತಿಹಾಸ ರಚಿಸಿದ ರುತುರಾಜ್!

ದುಬೈ ಕ್ರೀಡಾಂಗಣದಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಕಾರಣ ಚೇಸಿಂಗ್ ತಂಡಕ್ಕೆ ಗೆಲುವಿನ ಅವಕಾಶ ಹೆಚ್ಚು. ಹೀಗಾಗಿ ಕೋಲ್ಕತಾ ನೈಟ್ ರೈಡರ್ಸ್( Kolkata Knight Riders) ತಂಡ ಧೋನಿ ಸೈನ್ಯವನ್ನು ಬ್ಯಾಟಿಂಗ್ ಅಹ್ವಾನಿಸಿತು. ಚೆನ್ನೈಗೆ ರುತುರಾಜ್ ಗಾಯಕ್ವಾಡ್(Ruturaj Gaikwad) ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ನೀಡಿದರು.

ಆರಂಭಿಕರ ಜೊತೆಯಾಟ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ಆತ್ಮವಿಶ್ವಾಸ ಹೆಚ್ಚಿಸಿತು. ರುತುರಾಜ್ ಗಾಯಕ್ವಾಡ್ 27 ಎಸೆತದಲ್ಲಿ 32 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ರುತುರಾಜ್ ಗಾಯಕ್ವಾಡ್ ಹಾಗೂ ಫಾಫ್ ಡುಪ್ಲೆಸಿಸ್ 61 ರನ್ ಜೊತೆಯಾಟ ನೀಡಿದರು. 

 

ರುತುರಾಜ್ ಗಾಯಕ್ವಾಡ್ 32 ರನ್ ಸಿಡಿಸಿ ಈ ಐಪಿಎಲ್ ಆವೃತ್ತಿಯಲ್ಲಿ 634 ರನ್ ಸಿಡಿಸಿ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಕೆಎಲ್ ರಾಹುಲ್ 626 ರನ್ ಸಿಡಿಸಿ ಮೊದಲ ಸ್ಥಾನದಲ್ಲಿದ್ದರು. ಇದೀಗ ಗಾಯಕ್ವಾಡ್ ಮೊದಲ ಸ್ಥಾನ ಅಲಂಕರಿಸಿದ್ದಾರೆ.

IPL 2021: KKR ತಂಡದ ಆಟಗಾರರ ಗ್ಲಾಮರ್ಸ್‌ ಪತ್ನಿಯರು ಮತ್ತು ಗರ್ಲ್‌ಫ್ರೆಂಡ್ಸ್‌!

ಗಾಯಕ್ವಾಡ್ ವಿಕೆಟ್ ಪತನದ ಬಳಿಕ ಫಾಫ್ ಡುಪ್ಲೆಸಿಸ್ ಹಾಗೂ ರಾಬಿನ್ ಉತ್ತಪ್ಪ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಚೇತರಿಸಿಕೊಂಡಿತು. ಅಬ್ಬರಿಸಿದ ಡುಪ್ಲೆಸಿಸ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು. ಉತ್ತಪ್ಪ ಕೂಡ ಉತ್ತಮ ಸಾಥ್ ನೀಡಿದರು.

ರಾಬಿನ್ ಉತ್ತಪ್ಪ 15 ಎಸೆತದಲ್ಲಿ ಭರ್ಜರಿ 3 ಸಿಕ್ಸರ್ ಮೂಲಕ 31 ರನ್ ಸಿಡಿಸಿ ಔಟಾದರು. ರಾಬಿನ್ ಉತ್ತಪ್ಪ ಬ್ಯಾಟಿಂಗ್ ಚೆನ್ನೈ ತಂಡದ ರನ್ ವೇಗ ಹೆಚ್ಚಿಸಿತು. ಡುಪ್ಲೆಸಿಸ್ ಹೋರಾಟ ಮುಂದುವರಿಸಿದರು. ಇತ್ತ ಮೊಯಿನ್ ಆಲಿ ಕೂಡ ಅಬ್ಬರಿಸಿದರು. 

ಡುಪ್ಲೆಸಿಸ್ ವಿಕೆಟ್ ಕಬಳಿಸಲು ಕೆಕೆಆರ್ ತಂಡ ತೀವ್ರ ಪ್ರಯತ್ನ ನಡೆಸಿತು. ಇತ್ತ ಡುಪ್ಲೆಸಿಸ್ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದರು.  ಡುಪ್ಲೆಸಿಸ್  86 ರನ್ ಸಿಡಿಸಿ ಔಟಾದರು. ಇತ್ತ ಮೊಯಿನ್ ಆಲಿ ಅಜೇಯ 37 ರನ್ ಸಿಡಿಸಿದರು. 

ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ವಿಕೆಟ್ ನಷ್ಟಕ್ಕೆ 192 ರನ್ ಸಿಡಿಸಿತು.  IPL 2021ರ ಫೈನಲ್ ಪಂದ್ಯದಲ್ಲಿ ಚೆನ್ನೈ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ದುಬೈ ಕ್ರೀಡಾಂಗಣದಲ್ಲಿ 170 ರನ್ ಸರಾಸರಿ ಮೊತ್ತವಾಗಿದೆ. ಇದೀಗ ಚೆನ್ನೈ ತಂಡ 193 ರನ್ ಟಾರ್ಗೆಟ್ ನೀಡಿದೆ. ಈ ಮೂಲಕ ಗೆಲುವಿನ ವಿಶ್ವಾಸದಲ್ಲಿದೆ.

Follow Us:
Download App:
  • android
  • ios