Asianet Suvarna News Asianet Suvarna News

IPL 2021: ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ಟಾಸ್ ಗೆದ್ದ RCB!

ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಎಲಿಮಿನೇಟರ್ ಪಂದ್ಯ
ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು
ಗೆದ್ದ ತಂಡ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ
ಸೋತ ತಂಡ ಐಪಿಎಲ್ 2021 ಟೂರ್ನಿಯಿಂದ ಔಟ್

IPL 2021 Eliminator Royal challengers Bengaluru won toss chose bat first against KKR in Sharjah ckm
Author
Bengaluru, First Published Oct 11, 2021, 7:04 PM IST
  • Facebook
  • Twitter
  • Whatsapp

ಶಾರ್ಜಾ(ಅ.11):  IPL 2021 ಎಲಿಮಿನೇಟರ್ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ಹಾಗೂ ಕೋಲ್ಕತಾ ನೈಟ್ ರೈಡರ್ಸ್(KKR) ಸಜ್ಜಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್(Toss) ಗೆದ್ದ ಆರ್‌ಸಿಬಿ(RCB) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 

RCB ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ:
ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಎಸ್ ಭರತ್, ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಡೇನಿಯಲ್ ಕ್ರಿಶ್ಟಿಯನ್, ಶಹಶಾಬ್ ಅಹಮ್ಮದ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಾಲ್

ಕೆಕೆಆರ್ ತಂಡದಲ್ಲೂ  ಯಾವುದೇ ಬದಲಾವಣೆ ಮಾಡಿಲ್ಲ. ಈ ಮೂಲಕ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿಗೆ ರೆಡಿಯಾದೆ.

IPL 2021 ಕೆಕೆಆರ್ ಎದುರಿನ ಪಂದ್ಯದಲ್ಲಿ ಅಪರೂಪದ ಐಪಿಎಲ್ ದಾಖಲೆ ಬರೆಯಲು ರೆಡಿಯಾದ ಹರ್ಷಲ್ ಪಟೇಲ್‌..!

ಇದು ಮಾಡು ಇಲ್ಲವೆ ಮಡಿ ಪಂದ್ಯ. ಗೆದ್ದ ತಂಡ 2ನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದರೆ, ಸೋತ ತಂಡ ಐಪಿಎಲ್ 2021ರ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಉಭಯ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟ ನಡೆಸಲಿದೆ. ಎಲಿಮಿನೇಟರ್ ಪಂದ್ಯ ಗೆದ್ದ ತಂಡ ನೇರವಾಗಿ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಶಾರ್ಜಾ ಮೈದಾನದಲ್ಲಿ ಇಂದಿನ ಪಂದ್ಯಕ್ಕೆ ಬಳಸುತ್ತಿರುವ ಪಿಚ್‌ನಲ್ಲಿ ಹೆಚ್ಚಿನ ಕ್ರಾಕ್‌ಗಳಿಲ್ಲ. ಮೇಲ್ನೋಟಕ್ಕೆ ಫ್ಲಾಟ್ ಪಿಚ್ ರೀತಿ ಇದೆ. ಹೀಗಾಗಿ ಹೆಚ್ಚಿನ ಸ್ಕೋರ್ ನಿರೀಕ್ಷಿಸಬಹುದು. ಈ ವಿಕೆಟ್‌ನಲ್ಲಿ ಸರಾಸರಿ ರನ್ 170. ಹೀಗಾಗಿ 170ಕ್ಕಿಂತ ಹೆಚ್ಚಿನ ರನ್ ಸ್ಕೋರ್ ಮಾಡಿದ ತಂಡಕ್ಕೆ ಗೆಲುವಿನ ಅದೃಷ್ಟ ಸಿಗುವ ಸಾಧ್ಯತೆ ಇದೆ.

IPL 2021: ಹೀಗಿತ್ತು ನೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್‌ ಜರ್ನಿ..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇತ್ತ ಐಪಿಎಲ್ 2021ರಲ್ಲಿ ಆರ್‌ಸಿಬಿ ಹಿಂದಿನ ಆವೃತ್ತಿಗಿಂತ ಬಲಿಷ್ಠವಾಗಿದೆ ಹಾಗೂ ಹೆತ್ತು ಆತ್ಮವಿಶ್ವಾಸದಲ್ಲಿದೆ. ಇತ್ತ ಕೋಲ್ಕತಾ ನೈಟ್ ರೈಡರ್ಸ್ ಕಳೆದ 7 ವರ್ಷಗಳಿಂದ ಐಪಿಎಲ್ ಪ್ರಶಸ್ತಿಗಾಗಿ ಹವಣಿಸುತ್ತಿದೆ. 

RCB ಹಾಗೂ KKR ಒಟ್ಟು ಮುಖಾಮುಖಿಯಲ್ಲಿ ಕೋಲ್ಕತಾ ಮೇಲುಗೈ ಸಾಧಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಗೆಲುವು ಕಂಡಿದ್ದರೆ, ಕೋಲ್ಕತಾ 15 ಗೆಲುವು ಕಂಡಿದೆ. ಮತ್ತೊಂದು ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಆರ್‌ಸಿಬಿ ಹಾಗೂ ಕೆಕೆಆರ್ ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ.

ಕೆಕೆಆರ್ ತಂಡದ ಸುನಿಲ್ ನರೈನ್ 9 ಪ್ಲೇ ಆಫ್ ಪಂದ್ಯ ಆಡಿದ ಅನುಭವ ಹೊಂದಿದ್ದಾರೆ. ಆದರೆ ಪ್ಲೇ ಆಫ್ ಪಂದ್ಯಗಳಲ್ಲಿ ನರೈನ್ ನೀರಸ ಪ್ರದರ್ಶನ ನೀಡಿದ್ದಾರೆ. 9 ಪ್ಲೇ ಆಫ್ ಪಂದ್ಯದಿಂದ ಕೇವಲ 4 ವಿಕೆಟ್ ಕಬಳಿಸಿದ್ದಾರೆ. ಇನ್ನು 8.60 ಸರಾಸರಿಯಲ್ಲಿ ನರೈನ್ ಬ್ಯಾಟ್ ಬೀಸಿದ್ದಾರೆ.

ಲೀಗ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ಪಂದ್ಯದಲ್ಲಿ 9 ಗೆಲುವು ಹಾಗೂ 5 ಸೋಲು ಕಂಡಿತ್ತು. ಇತ್ತ ಕೋಲ್ಕತಾ ನೈಟ್ ರೈಡರ್ಸ್ 14 ಪಂದ್ಯದಲ್ಲಿ 7 ಗೆಲುವು ಹಾಗೂ 7 ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಆರ್‌ಸಿಬಿ 3 ಹಾಗೂ ಕೆಕೆಆರ್ 4ನೇ ಸ್ಥಾನ ಅಲಂಕರಿಸಿದೆ.

ಕೊನೆಯ ಬಾರಿಗೆ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಲ್ಲಿ ಕೊಹ್ಲಿ ಪಡೆ ಹೀನಾಯ ಸೋಲು ಕಂಡಿತ್ತು. ಸೆಪ್ಟೆಂಬರ್ 20 ರಂದು ನಡೆದ ಈ ಪಂದ್ಯದಲ್ಲಿ ಆರ್‌ಸಿಬಿ ಕೇವಲ 92 ರನ್‌ಗೆ ಆಲೌಟ್ ಆಗಿತ್ತು. ಈ ಸುಲಭ ಗುರಿಯನ್ನು ಕೆಕೆಆರ್ 10 ಓವರ್‌ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.
 

Follow Us:
Download App:
  • android
  • ios