Asianet Suvarna News Asianet Suvarna News

IPL 2021: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕೆಕೆಆರ್‌ಗೆ ಸುಲಭ ಟಾರ್ಗೆಟ್ ನೀಡಿದ RCB!

  • ಕೋಲ್ಕತಾ ತಂಡಕ್ಕೆ ಸುಲಭ ಟಾರ್ಗೆಟ್ ನೀಡಿದ ಕೊಹ್ಲಿ ಪಡೆ
  • ಮಹತ್ವದ ಪಂದ್ಯದಲ್ಲಿ ಕೈಕೊಟ್ಟ ಬ್ಯಾಟ್ಸ್‌ಮನ್
  • ಶಾರ್ಜಾದಲ್ಲಿ ನಡೆಯುತ್ತಿರುವ ಎಲಿಮಿನೇಟರ್ ಪಂದ್ಯ
IPL 2021  Eliminator royal challengers Bengaluru set 139 run target to Kolkata Knight Riders ckm
Author
Bengaluru, First Published Oct 11, 2021, 9:12 PM IST
  • Facebook
  • Twitter
  • Whatsapp

ಶಾರ್ಜಾ(ಅ.11): IPL 2021ರ ಎಲಿಮಿನೇಟರ್ ಪಂದ್ಯದಲ್ಲಿ ಕೆಕೆಆರ್(KKR) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB ತಂಡ ದಿಟ್ಟ ಹೋರಾಟ ನೀಡುವಲ್ಲಿ ವಿಫಲವಾಗಿದೆ.  ನಾಯಕ ವಿರಾಟ್ ಕೊಹ್ಲಿ ಹೊರತು ಪಡಿಸಿದರೆ ಆರ್‌ಸಿಬಿ ಬ್ಯಾಟರ್‌ಗಳಿಂದ ನಿರೀಕ್ಷಿತ ಹೋರಾಟ ಸಾಧ್ಯವಾಗಿಲ್ಲ. ಹೀಗಾಗಿ  ಆರ್‌ಸಸಿಬಿ 7 ವಿಕೆಟ್ ನಷ್ಟಕ್ಕೆ 138 ರನ್ ಸಿಡಿಸಿದೆ.

IPL 2021: ಹೀಗಿತ್ತು ನೋಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್‌ ಜರ್ನಿ..!

ಟಾಸ್ ಗೆದ್ದ ವಿರಾಟ್ ಕೊಹ್ಲಿ(Virat Kohli) ನೇರವಾಗಿ ಬ್ಯಾಟಿಂಗ್ ಆಯ್ಕೆ ಮಾಡಿದರು. ಈ ಮೂಲಕ ಬೃಹತ್ ಟಾರ್ಗೆಟ್ ನೀಡುವ ಗುರಿ ಇಟ್ಟುಕೊಂಡಿದ್ದರು. ಇದಕ್ಕೆ ತಕ್ಕಂತೆ ಆರ್‌ಸಿಬಿ(Roayl challengers Bengaluru) ಡೀಸೆಂಟ್ ಆರಂಭ ಪಡೆಯಿತು. ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಜೊತೆಯಾಟ ಆರ್‌ಸಿಬಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿತು.

ಪಡಿಕ್ಕಲ್ 21 ರನ್ ಸಿಡಿಸಿ ಔಟಾದರು. ಈ ಮೂಲಕ ಕೊಹ್ಲಿ ಹಾಗೂ ಪಡಿಕ್ಕಲ್ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ಮೊದಲ ವಿಕೆಟ್‍‌ಗೆ ಈ ಜೋಡಿ 49 ರನ್ ಜೊತೆಯಾಟ ನೀಡಿತ್ತು. ಪಡಿಕ್ಕಲ್ ವಿಕೆಟ್ ಪತನದ ಬಳಿಕ ಕೊಹ್ಲಿ ಕೊಂಚ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು. ಅಷ್ಟರಲ್ಲೇ ಎಸ್ ಭರತ್ ವಿಕೆಟ್ ಪತನಗೊಂಡಿತು. ಭರತ್ ಕೇವಲ 9 ರನ್ ಸಿಡಿಸಿ ಔಟಾದರು. 

IPL 2021 ಹೀಗಿತ್ತು ನೋಡಿ ಕೆಕೆಆರ್ ತಂಡದ ಪ್ಲೇ ಆಫ್‌ ಜರ್ನಿ..!

ಗ್ಲೆನ್ ಮ್ಯಾಕ್ಸ್‌ವೆಲ್(Glenn Maxwell) ಜೊತೆ ಸೇರಿದ ಕೊಹ್ಲಿ ರನ್ ಕಲೆಹಾಕಲು ಯತ್ನಿಸಿದರು. 33 ಎಸೆತದಲ್ಲಿ 39 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ಕೊಹ್ಲಿ, ಸುನಿಲ್ ನೈರನ್‌ಗೆ ವಿಕೆಟ್ ಒಪ್ಪಿಸಿದರು. ಐಪಿಎಲ್ ಪ್ಲೇ ಆಫ್ ಸುತ್ತುಗಳಲ್ಲಿ ನೀರಸ  ಪ್ರದರ್ಶನ ನೀಡಿದ್ದ ನರೈನ್ , ಆರ್‌ಸಿಬಿ ವಿರುದ್ಧ ಸ್ಪಿನ್ ಮೋಡಿ ಮಾಡಲು ಆರಂಭಿಸಿದರು.

ಎಬಿ ಡಿವಿಲಿಯರ್ಸ್‌ಗೂ(AB de Villiers) ನರೈನ್ ಶಾಕ್ ನೀಡಿದರು. ಡಿವಿಲಿಯರ್ಸ್ 11 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಮ್ಯಾಕ್ಸ್‌ವೆಲ್ ಹೋರಾಟ ಮುಂದುವರಿಸಿದರು.  ಮ್ಯಾಕ್ಸ್‌ವೆಲ್ 15 ರನ್ ಸಿಡಿಸಿ ಔಟಾದರು. 112ರನ್‌ಗೆ ಆರ್‌ಸಿಬಿ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಶಹಬಾಜ್ ಅಹಮ್ಮದ್ 13 ರನ್ ಸಿಡಿಸಿ ಔಟಾದರು.

IPL 2021: ಡೆಲ್ಲಿ ವಿರುದ್ಧ ಧೋನಿ ಸ್ಫೋಟ ಕಂಡ ಕೊಹ್ಲಿ ಹೇಳಿದ್ದು ಒಂದೇ ಮಾತು!

ಡೇನಿಯಲ್ ಕ್ರಿಶ್ಚಿಯನ್ 9 ರನ್ ಸಿಡಿಸಿ ರನೌಟ್ ಆದರು ಹರ್ಷಲ್ ಪಟೇಲ್ ಹಾಗೂ ಜಾರ್ಜ್ ಗಾರ್ಟನ್ ಹೋರಾಟ ಸಾಕಾಗಲಿಲ್ಲ. ಅಂತಿಮವಾಗಿ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ 138 ರನ್ ಸಿಡಿಸಿತು. ಈ ಮೂಲಕ ಕೆಕೆಆರ್ ತಂಡಕ್ಕೆ 139 ರನ್ ಸುಲಭ ಟಾರ್ಗೆಟ್ ನೀಡಿತು. 

IPL 2021ರ ಎಲಿಮಿನೇಟರ್ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಕಾರಣ ಈ ಪಂದ್ಯದಲ್ಲಿ ಗೆದ್ದ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಆದರೆ ಸೋತ ತಂಡ ಐಪಿಎಲ್ 2021 ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಡು ಆರ್ ಡೈ ಪಂದ್ಯವಾಗಿದೆ. ಇಂದಿನ ಪಂದ್ಯ ಗೆದ್ದ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೋರಾಟ ನಡೆಸಲಿದೆ.

ಲೀಗ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ಗೆಲುವು ಸಾಧಿಸಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡ 7 ಗೆಲುವು ಸಾಧಿಸಿದೆ. ಆದರೆ ಲೀಗ್ ಹಂತದಲ್ಲಿ ಆರ್‌ಸಿಬಿ ತಂಡವನ್ನು ಕೇವಲ 92 ರನ್‌ಗೆ ಆಲೌಟ್ ಮಾಡಿದ್ದ ಕೆಕೆಆರ್, 9 ವಿಕೆಟ್ ಭರ್ಜರಿ ಗೆಲುವು ಕಂಡಿತ್ತು.

ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಅರ್ಧಶತಕ ಹಾಗೂ ಅಂತಿಮ ಹಂತದಲ್ಲಿ ನಾಯಕ ಎಂ.ಎಸ್.ಧೋನಿ ಭರ್ಜರಿ ಬ್ಯಾಟಿಂಗ್‌ನಿಂದ ಚೆನ್ನೈ ಸೂಪ್ ಕಿಂಗ್ಸ್ ರೋಚಕ ಗೆಲುವು ಕಂಡಿತ್ತು. ಈ ಮೂಲಕ ಧೋನಿ ಸೈನ್ಯ ನೇರವಾಗಿ ಫೈನಲ್ ಪ್ರವೇಶಿಸಿದೆ. ಇತ್ತ ಡೆಲ್ಲಿಗೆ ಫೈನಲ್ ಪ್ರವೇಶಕ್ಕೆ ಮತ್ತೊಂದು ಅವಕಾಶವಿದ್ದು, 2ನೇ ಕ್ವಾಲಿಫೈಯರ್ ಪಂದ್ಯ ಆಡಿ ಗೆಲ್ಲಬೇಕಿದೆ.

ಚೆನ್ನೈ ಸೂಪರ್ ಕಿಂಗ್ಸ್ 9ನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದೆ. ಧೋನಿ ನಾಯಕತ್ವದ ಸಿಎಸ್‌ಕೆ 2021ರ ಚಾಂಪಿಯನ್ ಪಟ್ಟ ಅಲಂಕರಿಸಲು ಹೊಂಚು ಹಾಕಿದೆ. ಆದರೆ ಆರ್‌ಸಿಬಿ ಹಾಗೂ ಡೆಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲೋ ವಿಶ್ವಾಸದಲ್ಲಿದೆ. ಇತ್ತ ಕೆಕೆಆರ್ 7 ವರ್ಷಗಳ ಬಳಿಕ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಲು ತುದಿಗಾಲಲ್ಲಿ ನಿಂತಿದೆ
 

Follow Us:
Download App:
  • android
  • ios