* ಭಾರತದ ಕ್ರಿಕೆಟ್‌ ಜಾತ್ರೆ ಐಪಿಎಲ್‌ ಭಾಗ-2 ಟೂರ್ನಿಗೆ ಕ್ಷಣಗಣನೆ* 27 ದಿನಗಳ ಕಾಲ ನಡೆಯಲಿದೆ ಕ್ರಿಕೆಟ್ ಮಹಾ ಜಾತ್ರೆ*  ಪ್ಲೇ ಆಫ್‌ಗೇರಲು ಎಲ್ಲಾ 8 ತಂಡಗಳ ನಡುವೆ ಬಿಗ್ ಫೈಟ್

ಬೆಂಗಳೂರು(ಸೆ.19): ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಕೊರೋನಾ ಮಹಾಮಾರಿಯ ಅಟ್ಟಹಾಸದಿಂದಾಗಿ ಮೇ ತಿಂಗಳಿನಾರಂಭದಲ್ಲೇ ದಿಢೀರ್ ಎನ್ನುವಂತೆ ಸ್ಥಗಿತಗೊಳಿಸಲಾಗಿತ್ತು. ಬಯೋ ಬಬಲ್‌ನೊಳಗಿದ್ದ ಆಟಗಾರರು ಹಾಗೂ ಸಿಬ್ಬಂದಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಬಿಸಿಸಿಐ ಕಳೆದ ಮೇ 04ರಂದು ಟೂರ್ನಿಯನ್ನು ಸ್ಥಗಿತಗೊಳಿಸಿತ್ತು. ಇದೀಗ ಇನ್ನುಳಿದ 31 ಐಪಿಎಲ್‌ ಪಂದ್ಯಗಳು ಇಂದಿನಿಂದ(ಸೆ.19) ಆರಂಭವಾಗಲಿದ್ದು, ಮಿಲಿಯನ್‌ ಡಾಲರ್ ಕ್ರಿಕೆಟ್‌ ಟೂರ್ನಿಯ ಹೈವೋಲ್ಟೇಜ್‌ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಭಾರತದಲ್ಲಿ ನಡೆದ ಟೂರ್ನಿಯ ವೇಳೆ 8 ತಂಡಗಳು ಒಟ್ಟು 29 ಪಂದ್ಯಗಳನ್ನಾಡಿದ್ದವು. ಇದೀಗ ಪ್ಲೇ ಆಫ್‌ ಹಾಗೂ ಫೈನಲ್ ಸೇರಿದಂತೆ ಇನ್ನೂ 31 ಪಂದ್ಯಗಳು ನಡೆಯಬೇಕಿದ್ದು, ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ಚುಟುಕು ಕ್ರಿಕೆಟ್ ಹಬ್ಬ ಜರುಗಲಿದೆ. ಯಾವ ದಿನ ಯಾವ ತಂಡವು ಎಲ್ಲಿ ಮತ್ತೆ ಯಾವ ತಂಡದ ವಿರುದ್ದ ಸೆಣಸಾಡಲಿದೆ ಎನ್ನುವುದರ ಕಂಪ್ಲೀಟ್‌ ವೇಳಾಪಟ್ಟಿ ಇಲ್ಲಿದೆ ನೋಡಿ

ಸದ್ಯದ ಪಾಯಿಂಟ್ ಟೇಬಲ್ ಹೀಗಿದೆ ನೋಡಿ:

ಯುಎಇ ಚರಣದ ಪಂದ್ಯಾವಳಿಗೂ ಮುನ್ನ ಅಂಕಪಟ್ಟಿ ಹೇಗಿದೆ ಎನ್ನುವುದನ್ನು ನೋಡುವುದಾದದರೆ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ತಲಾ 8 ಪಂದ್ಯಗಳನ್ನಾಡಿದರೆ, ಇನ್ನುಳಿದ 6 ತಂಡಗಳು ತಲಾ 7 ಪಂದ್ಯಗಳನ್ನಾಡಿವೆ. ಈ ಪೈಕಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಾಜಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡವು 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನು ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಕೂಡಾ 10 ಅಂಕಗಳನ್ನು ಹೊಂದಿದ್ದರೂ ನೆಟ್‌ ರನ್‌ರೇಟ್‌ ಆಧಾರದಲ್ಲಿ ಮೂರನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್‌ ಹೈದರಾಬಾದ್ ತಂಡವು 7 ಪಂದ್ಯಗಳನ್ನಾಡಿ ಕೇವಲ ಒಂದು ಗೆಲುವು ಆರು ಸೋಲು ಕಂಡಿದ್ದು, ಕೇವಲ 2 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಒಟ್ಟಿನಲ್ಲಿ ಯುಎಇ ಚರಣದ ಪಂದ್ಯಗಳು ದಿನದಿನಕ್ಕೆ ಸಾಕಷ್ಟು ರೋಚಕ ಕಾದಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದ್ದು, ಯಾವ 4 ತಂಡಗಳು ಪ್ಲೇ ಆಫ್‌ಗೇರಲಿದೆ. ಆರ್‌ಸಿಬಿ ತಂಡವು ಈ ಬಾರಿಯಾದರೂ ಕಪ್ ಜಯಿಸುತ್ತಾ ಎನ್ನುವ ಲೆಕ್ಕಾಚಾರ ಹಾಕುತ್ತಿದ್ದಾರೆ ಅಭಿಮಾನಿಗಳು. ಐಪಿಎಲ್‌ ಕ್ರಿಕೆಟ್ ಹಂಗಾಮಾದ ಕ್ಷಣ-ಕ್ಷಣದ ಮಾಹಿತಿಗಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಂ ಫಾಲೋ ಮಾಡುತ್ತಾ ಇರಿ.