ಹುಟ್ಟು ಹಬ್ಬ ದಿನ ಏಕದಿನಕ್ಕೆ ಪದಾರ್ಪಣೆ ಹಾಗೂ ಅರ್ಧಶತಕ ಟಿ20 ಪದಾರ್ಪಣಾ ಪಂದ್ಯದಲ್ಲೂ ಹಾಫ್ ಸೆಂಚುರಿ ಸಿಡಿಸಿದ್ದ ಕಿಶನ್ ಶ್ರೀಲಂಕಾ ವಿರುದ್ಧ ದಿಟ್ಟ ಕಿಶನ್ ದಿಟ್ಟ ಹೋರಾಟ
ಕೊಲೊಂಬೊ(ಜು.18): ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ಗೆ ಸ್ಮರಣೀಯವಾಗಿದೆ. ಹುಟ್ಟು ಹಬ್ಬದ ದಿನವೇ ಇಶಾನ್ ಕಿಶಾನ್ ಟೀಂ ಇಂಡಿಯಾ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇನ್ನು ಪದಾರ್ಪಣಾ ಪಂದ್ಯದಲ್ಲೇ ಇಶಾನ್ ಕಿಶನ್ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.
ಹುಟ್ಟು ಹಬ್ಬ ದಿನವೇ ಟೀಂ ಇಂಡಿಯಾಗೆ ಡೆಬ್ಯೂ ಮಾಡಿದ ಭಾರತದ 2ನೇ ಕ್ರಿಕೆಟಿಗ ಇಶಾನ್ ಕಿಶಾನ್!
ಶ್ರೀಲಂಕಾ ತಂಡ ಟೀಂ ಇಂಡಿಯಾಗೆ 263 ರನ್ ಟಾರ್ಗೆಟ್ ನೀಡಿದೆ. ಈ ರನ್ ಚೇಸ್ ವೇಳೆ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಇಶಾನ್ ಕಿಶನ್ ಕೇವಲ 33 ಎಸೆತದಲ್ಲಿ ಹಾಫ್ ಸೆಂಚುರಿ ಪೂರೈಸಿದರು. ಈ ಮೂಲಕ ಟಿ20 ಹಾಗೂ ಏಕದಿನ ಪದಾರ್ಪಣಾ ಪಂದ್ಯದಲ್ಲಿ 50+ ಸ್ಕೋರ್ ಮಾಡಿದ ಭಾರತದ 2ನೇ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಇಶಾನ್ ಪಾತ್ರರಾಗಿದ್ದಾರೆ.
ಟಿ20, ಏಕದಿನ ಪದಾರ್ಪಣಾ ಪಂದ್ಯದಲ್ಲಿ 50+ ಸ್ಕೋರ್ ಸಿಡಿಸಿದ ಭಾರತೀಯ ಬ್ಯಾಟ್ಸ್‌ಮನ್
ರಾಬಿನ್ ಉತ್ತಪ್ಪ
ಇಶಾನ್ ಕಿಶನ್
INDvSL: ಟೀಂ ಇಂಡಿಯಾ ದಾಳಿಗೆ ನಲುಗಿದ ಶ್ರೀಲಂಕಾ; ಭಾರತಕ್ಕೆ ಸ್ಪರ್ಧಾತ್ಮಕ ಟಾರ್ಗೆಟ್!
ಪದಾರ್ಪಣಾ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ದಾಖಲೆಗೂ ಇಶಾನ್ ಪಾತ್ರರಾಗಿದ್ದಾರೆ. ಏಕದಿನ ಪದಾರ್ಪಣಾ ಪಂದ್ಯದಲ್ಲಿ ಅತೀ ಕಡಿಮೆ ಎಸೆತದಲ್ಲಿ ಅರ್ಧಶತಕ ಸಿಡಿಸಿದ ವಿಶ್ವದ 2ನೇ ಕ್ರಿಕೆಟಿಗ ಅನ್ನೋ ದಾಖಲೆಯನ್ನು ಇಶಾನ್ ಕಿಶನ್ ಬರೆದಿದ್ದಾರೆ.
ಏಕದಿನ ಪದಾರ್ಪಣಾ ಪಂದ್ಯದಲ್ಲಿ ಅತೀ ಕಡಿಮೆ ಎಸೆತದಲ್ಲಿ ಅರ್ಧಶತಕ
26(ಎಸೆತ) ಕ್ರುನಾಲ್ ಪಾಂಡ್ಯ v ಇಂಗ್ಲೆಂಡ್, 2021
33(ಎಸೆತ) ಇಶಾನ್ ಕಿಶನ್ v ಶ್ರೀಲಂಕಾ, 2021
35(ಎಸೆತ) ರೋಲ್ಯಾಂಡ್ ಬುಚರ್ v ಆಸ್ಟ್ರೇಲಿಯಾ, 1980
35(ಎಸೆತ) ಜಾನ್ ಮಾರಿಸ್ v ನ್ಯೂಜಿಲೆಂಡ್, 1990
