Asianet Suvarna News Asianet Suvarna News

ಇನ್ನಿಂಗ್ಸ್ ಸೋಲು ತಪ್ಪಿಸಿ 126 ರನ್ ಮುನ್ನಡೆ ಪಡೆದ ಇಂಗ್ಲೆಂಡ್, ಒಲಿ ಪೋಪ್ ಸೆಂಚುರಿಗೆ ಫ್ಯಾನ್ಸ್ ಗೌರವ!

ಹೈದರಾಬಾದ್ ಟೆಸ್ಟ್ ಪಂದ್ಯದ ಮೂರನೇ ದಿನ ಇಂಗ್ಲೆಂಡ್ ದಿಟ್ಟ ಹೋರಾಟ ನೀಡುವ ಮೂಲಕ ಇನ್ನಿಂಗ್ಸ್ ಸೋಲಿನ ಅಪಾಯದಿಂದ ಪಾರಾಗಿದೆ. ಒಲಿ ಪೋಪ್ ಭರ್ಜರಿ ಶತಕ ಇಂಗ್ಲೆಂಡ್ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಆದರೆ 6 ವಿಕೆಟ್ ಕಳೆದುಕೊಂಡಿರುವ ಇಂಗ್ಲೆಂಡ್ 126 ರನ್ ಮುನ್ನಡೆ ಪಡೆದುಕೊಂಡಿದೆ.

INDvsENG Hyderabad Test Ollie Pope century help England to fight back against Team India in day 3 ckm
Author
First Published Jan 27, 2024, 4:50 PM IST

ಹೈದರಾಬಾದ್(ಜ.27)  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈದರಾಬಾದ್ ಟೆಸ್ಟ್ ಪಂದ್ಯದ 3ನೇ ದಿನ ರೋಚಕತೆ ಹೆಚ್ಚಿಸಿದೆ. ಆರಂಭಿಕ 2 ದಿನ ಸಂಪೂರ್ಣ ಮೇಲುಗೈ ಸಾಧಿಸಿದ ಭಾರತಕ್ಕೆ 3ನೇ ದಿನ ಇಂಗ್ಲೆಂಡ್ ತಿರುಗೇಟು ನೀಡುವ ಪ್ರಯತ್ನ ಮಾಡಿದೆ. ಒಲಿ ಪೋಪ್ ಆಕರ್ಷಕ ಶತಕ ಸಿಡಿಸಿ ಇಂಗ್ಲೆಂಡ್ ತಂಡವನ್ನು ಇನ್ನಿಂಗ್ಸ್ ಸೋಲಿನಿಂದ ಪಾರು ಮಾಡಿದ್ದಾರೆ. ಪೋಪ್ ಶತಕದಾಟದಿಂದ ಇಂಗ್ಲೆಂಡ್ ದಿಟ್ಟ ಹೋರಾಟ ನೀಡಿದೆ. ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 316 ರನ್ ಸಿಡಿಸಿದೆ. ಈ ಮೂಲಕ ರನ್ ಮುನ್ನಡೆ ಪಡೆದುಕೊಂಡಿದೆ.

3ನೇ ದಿನದಾಟದಲ್ಲಿ 436 ರನ್‌ಗೆ ಆಲೌಟ್ ಆದ ಟೀಂ ಇಂಡಿಯಾ ಭಾರಿ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಬೌಲಿಂಗ್‌ಗೆ ಸಜ್ಜಾಯಿತು. ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿ ಇನ್ನಿಂಗ್ಸ್ ಗೆಲುವಿನ ಲೆಕ್ಕಾಚಾರದಲ್ಲಿ ಭಾರತ ತಂಡ ಆರಂಭಿಕ ಹಂತದಲ್ಲಿ ಅಬ್ಬರ ಮುಂದುವರಿಸಿತು. ಆದರೆ ಒಲಿ ಪೋಪ್ ಹಾಗೂ ನಾಯಕ ಬೆನ್ ಸ್ಟೋಕ್ಸ್ ಜೊತೆಯಾಟ ಲೆಕ್ಕಾಚಾರ ಉಲ್ಟಾ ಮಾಡಿತು. 

Hyderabad Test: ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ರೋಹಿತ್ ಶರ್ಮಾ ಕಾಲಿಗೆರಗಿದ ಅಭಿಮಾನಿ..! ವಿಡಿಯೋ ವೈರಲ್

ಒಲಿಪೋಪ್ ಆಕರ್ಷಕ ಸೆಂಚುರಿ ಸಿಡಿಸಿದರು. ಇತ್ತ ಬೆನ್ ಸ್ಟೋಕ್ಸ್ ಜೊತೆಯಾಟವೂ ನೆರವಾಯಿತು. ಪೋಪ್ ಸೆಂಚುರಿಯಿಂದ ಇಂಗ್ಲೆಂಡ್ ಇನ್ನಿಂಗ್ಸ್ ಸೋಲಿನ ಆತಂಕದಿಂದ ಪಾರಾಯಿತು. ಇಷ್ಟೇ ಅಲ್ಲ ಮುನ್ನಡೆ ಪಡೆದುಕೊಂಡಿತು. ಸೆಂಚುರಿ ಬಳಿಕವೂ ಪೋಪ್ ಹೋರಾಟ ಮುಂದುವರಿಯಿತು. ದಿನದಾಟದ ಅಂತ್ಯದ ವೇಳೆ ಬೆನ್ ಸ್ಟೋಕ್ಸ್ 34 ರನ್ ಸಿಡಿಸಿ ನಿರ್ಗಮಿಸಿದರು. ಈ ಮೂಲಕ ಸುದೀರ್ಘ ಜೊತೆಯಾಟ ಅಂತ್ಯಗೊಂಡಿತು. ಆದರೆ ಪೋಪ್ ಹಾಗೂ ರೆಹಾನ್ ಅಹಮ್ಮದ್ ಜೊತೆಯಾಟ ಆರಂಭಗೊಂಡಿದೆ. ಪೋಪ್ ಅಜೇಯ 148 ರನ್ ಸಿಡಿಸಿದರೆ, ರೆಹಾನ್ ಅಹಮ್ಮದ್ ಅಜೇಯ 16 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.  

ಇಂಗ್ಲೆಂಡನ್ನು ಮೊದಲ ಇನ್ನಿಂಗ್ಸ್‌ನಲ್ಲಿ 246ಕ್ಕೆ ನಿಯಂತ್ರಿಸಿದ್ದ ಭಾರತ, ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 119 ರನ್‌ ಕಲೆಹಾಕಿತ್ತು.ಯಶಸ್ವಿ ಜೈಸ್ವಾಲ್‌ 80 ರನ್,  ಶುಭ್‌ಮನ್‌ ಗಿಲ್‌  23, ರೋಹಿತ್ ಶರ್ಮಾ 24 ಕೆಎಲ್ ರಾಹುಲ್ 86, ಶ್ರೇಯಸ್ ಅಯ್ಯರ್ 35, ರವೀಂದ್ರ ಜಡೇಜಾ 87 ರನ್,  ಶ್ರೀಕರ್‌ ಭರತ್‌ 41 ರನ್‌, ಅಕ್ಸರ್ ಪಟೇಲ್ 44 ರನ ಕಾಣಿಕೆ ನೀಡಿದರು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 436 ರನ್ ಸಿಡಿಸಿ ಆಲೌಟ್ ಆಯಿತು.

ಅಶ್ವಿನ್ ಜತೆ ಸೇರಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದ ರವಿಚಂದ್ರನ್ ಅಶ್ವಿನ್..!

Follow Us:
Download App:
  • android
  • ios