ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್‌ಗೆ ಗಂಭೀರ ಗಾಯ, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೆಡೆ ಹೀನಾಯ ಸೋಲಿನ ಬೆನ್ನಲ್ಲೇ ಗಿಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ವೈದ್ಯರ ತಂಡ ಗಿಲ್ ಆರೋಗ್ಯದ ಮೇಲೆ ನಿಗಾವಹಿಸಿದೆ.
ಕೋಲ್ಕತಾ (ನ.16) ಸೌತ್ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಮೂರೇ ದಿನದಲ್ಲಿ ಸೋತಿದೆ. ಕೇವಲ 124 ರನ್ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗದ ಭಾರತ ಸೋಲು ಕಂಡಿದೆ. ಸೋಲಿನ ಆಘಾತ ಒಂದಡೆಯಾದರೆ, ಮತ್ತೊಂದೆಡೆ ಟೀಂ ಇಂಡಿಯಾ ನಾಯಕ ಶುಬಮನ್ ಗಿಲ್ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಐಸಿಯುವಿನಲ್ಲಿ ಶುಬಮನ್ ಗಿಲ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಘಾಘಟಕದಲ್ಲಿ ವೈದ್ಯರ ತಂಡ ಶುಬಮನ್ ಗಿಲ್ ಆರೋಗ್ಯದ ಮೇಲೆ ನಿಗಾವಹಿಸಿದೆ. ಹೀಗಾಗಿ ಗಿಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಮೂರನೇ ಎಸೆತದಲ್ಲಿ ಗಾಯ
ಶನಿವಾರ ಬ್ಯಾಟಿಂಗ್ ಇಳಿದ ಶುಬಮನ್ ಗಿಲ್ ಕುತ್ತಿಗೆಗೆ ಗಾಯವಾಗಿತ್ತು. ಬ್ಯಾಟಿಂಗ್ ಮಾಡುವ ವೇಳೆ ಗಾಯಗೊಂಡ ಶುಬಮನ್ ಗಿಲ್ ಗಾಯಗೊಂಡಿದ್ದರು. ಶಿಮೋನ್ ಹಾರ್ಮರ್ ಬೌಲಿಂಗ್‌ನಲ್ಲಿ ಸ್ವೀಪ್ ಶಾಟ್‌ಗೆ ಯತ್ನಿಸಿದ್ದ ಶುಭಮನ್ ಗಿಲ್ ಗಾಯಗೊಂಡಿದ್ದರು. ಕೇವಲ ಮೂರು ಎಸೆತಗಳನ್ನು ಎದುರಿಸಿದಾಗ ಗಿಲ್ ಗಾಯಗೊಂಡಿದ್ದರು. ತೀವ್ರ ನೋವಿನಿಂದ ಬಳಲಿದ ಶುಬಮನ್ ಗಿಲ್‌ಗೆ ವೈದ್ಯಕೀಯ ನೆರವು ನೀಡಲಾಗಿತ್ತು. ಟೀಂ ಇಂಡಿಯಾ ಫಿಸಿಯೋ ಮೈದಾನಕ್ಕೆ ದೌಡಾಯಿಸಿದ್ದರು. ನೋವಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಶುಬಮನ್ ಗಿಲ್ ತಕ್ಷಣವೇ ಮೈದಾನ ತೊರೆಯಬೇಕಾಯಿತು. ಹೀಗಾಗಿ ರೈಟರ್ಡ್ ಹರ್ಟ್ ಆದ ಶುಬಮನ್ ಗಿಲ್‌ರನ್ನು ಸ್ಕ್ಯಾನಿಂಗ್ ಮಾಡಿಸಲು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಕೋಲ್ಕತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಗಿಲ್‌ಗೆ ಚಿಕಿತ್ಸೆ
ಗಾಯಗೊಂಡ ಶುಬಮನ್ ಗಿಲ್‌ನ್ನು ಕೋಲ್ಕತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ನಡೆಸಲಾಗಿತ್ತು. ಕುತ್ತಿಗೆಗೆ ಆದ ಗಾಯ ಗಂಭೀರವಾಗಿತ್ತು. ಸ್ಕ್ಯಾನಿಂಗ್ ಬಳಿಕ ಶುಬಮನ್ ಗಿಲ್‌ನನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ವುಡ್‌ಲ್ಯಾಂಡ್ಸ್ ಆಸ್ಪ್ರೆಯ ಐಸಿಯುವಿನಲ್ಲಿ ಗಿಲ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ಸರಣಿಯಿಂದ ಶುಬಮನ್ ಗಿಲ್ ಹೊರಬಿದ್ದಿದ್ದಾರೆ
ಗಿಲ್ ಆರೋಗ್ಯದ ಮೇಲೆ ತೀವ್ರ ನಿಘಾ
ಶುಬಮನ್ ಗಿಲ್ ಕುತ್ತಿಗೆಗೆ ಗಾಯವಾಗಿರುವ ಕಾರಣ ಬ್ಲಡ್ ಕ್ಲಾಟ್ ಆಗಿದ್ದು ಮಾತ್ರವಲ್ಲ, ಗಾಯದ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಐಸಿ15ಯುವಿನಲ್ಲಿ ಗಿಲ್ ಆರೋಗ್ಯದ ಮೇಲೆ ವೈದ್ಯರ ತಂಡ ತೀವ್ರ ನಿಗಾವಹಿಸಲಿದೆ. ಗಿಲ್ ಶೀಘ್ರವಾಗಿ ಚೇತರಿಕೆ ಕಂಡರೂ ಕೆಲ ದಿನಗಳ ವಿಶ್ರಾಂತಿಯ ಅಗತ್ಯವಿದೆ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಶುಬಮನ್ ಗಿಲ್ ಕೆಲ ದಿನಗಳ ಕಾಲ ಟೀಂ ಇಂಡಿಯಾದಿಂದ ದೂರ ಉಳಿಯುವ ಸಾಧ್ಯತೆ ಇದೆ.
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಗಿಲ್‌ಗೆ ಗಾಯ
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಶುಬಮನ್ ಗಿಲ್ ಗಾಯಗೊಂಡು ರಿಟೈರ್ಡ್ ಹರ್ಟ್ ಆಗಿದ್ದರು. ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸೌತ್ ಆಫ್ರಿಕಾ 159 ರನ್ ಸಿಡಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ ಬ್ಯಾಟಿಂಗ್ ಮಾಡಲು ಇಳಿದಾಗ ಗಿಲ್ ಗಾಯಗೊಂಡಿದ್ದರು. ಆದರೆ ಹೋರಾಟ ನೀಡಿದ ಟೀಂ ಇಂಡಿಡಿಯಾ 189 ರನ್‌ಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 30 ರನ್ ಮುನ್ನಡೆ ಪಡೆದಿತ್ತು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಸೌತ್ ಆಪ್ರಿಕಾ 153 ರನ್ ಸಿಡಿಸಿ ಆಲೌಟ್ ಆಗಿತ್ತು. ಹೀಗಾಗಿ ಕೇವಲ 124 ರನ್ ಟಾರ್ಗೆಟ್ ಪಡೆದಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ರಿಟೈರ್ಡ್ ಹರ್ಟ್ ಆಗಿದ್ದ ಗಿಲ್ ಎರಡನೇ ಇನ್ನಿಂಗ್ಸ್‌ಗೆ ಲಭ್ಯವಿರಲಿಲ್ಲ. ಗಿಲ್‌ಗೆ ಚಿಕಿತ್ಸೆ ಮುಂದುವರಿದಿದ್ದರೆ,ಇತ್ತ ಟೀಂ ಇಂಡಿಯಾ ಕೇವಲ 35 ಓವರ್‌ಗಳಲ್ಲಿ 93 ರನ್ ಸಿಡಿಸಿ ಆಲೌಟ್ ಆಗಿತ್ತು. ಸೌತ್ ಆಫ್ರಿಕಾ 30 ರನ್ ಗೆಲುವು ಕಂಡಿತ್ತು. ಐತಿಹಾಸಿಕ ಗೆಲುವಿನ ಜೊತೆ ಸೌತ್ ಆಫ್ರಿಕಾ ದಾಖಲೆ ಬರೆದರೆ ಟೀಂ ಇಂಡಿಯಾ ತೀವ್ರ ಮುಖಭಂಗ ಅನುಭವಿಸಿತು.
